ದೇಶಾದ್ಯಂತ SDPI ಮತ್ತು PFI ನಾಯಕರ ಕಚೇರಿ ಮೇಲೆ ಎನ್ ಐಎ ದಾಳಿ.

Promotion

ನವದೆಹಲಿ,ಸೆಪ್ಟಂಬರ್,22,2022(www.justkannada.in):  ದೇಶಾದ್ಯಂತ SDPI ಮತ್ತು PFI  ನಾಯಕರ ಕಚೇರಿ ಮತ್ತು  ನಿವಾಸದ ಮೇಲೆ ಎನ್ ಐಎ  ದಾಳಿ ನಡೆಸಿದೆ.

ಕರ್ನಾಟಕ, ಉತ್ತರ ಪ್ರದೇಶ, ತೆಲಂಗಾಣ, ಉತ್ತರ ಪ್ರದೇಶ, ಕೇರಳ, ತಮಿಳುನಾಡು ಸೇರಿದಂತೆ 10 ರಾಜ್ಯಗಳಲ್ಲಿ ದಾಳಿ ನಡೆಸಲಾಗಿದೆ.  ದೇಶದ ಹಲವು ಭಾಗಗಗಳಲ್ಲಿ ಎಸ್‌ಡಿಪಿಐ, ಪಿಎಫ್‌ಐ ರಾಜ್ಯ ಮತ್ತು ಜಿಲ್ಲಾ ಮಟ್ಟದ ನಾಯಕರ ಮನೆ ಮೇಲೆ ಎನ್ ಐಎ ದಾಳಿ ನಡೆಸಿದೆ.

ಭಯೋತ್ಪಾದನೆಗೆ ಧನಸಹಾಯ, ನಿಷೇಧಿತ ಸಂಸ್ಥೆಗಳ ಜೊತೆ ಸಂಪರ್ಕ, ದೇಶದಲ್ಲಿ ಗಲಭೆ ನಡೆಸಲು ಪ್ರಚೋದನೆ, ಮೂಲಭೂತವಾದಿ ವ್ಯಕ್ತಿಗಳಿಗೆ ತಮ್ಮ ಸಂಸ್ಥೆಯಲ್ಲಿ ಆಶ್ರಯ ಇತ್ಯಾದಿ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಎನ್‌ಐಎ ದಾಳಿ ನಡೆಸಿದೆ ಎನ್ನಲಾಗಿದೆ.

ಕರ್ನಾಟಕದಲ್ಲಿ  ಮಂಗಳೂರು ಕಲ್ಬುರ್ಗಿ ಸೇರಿದಂತೆ ಹಲವು ಕಡೆಗಳಲ್ಲಿ ಎನ್ ಐಎ ದಾಳಿ ನಡೆಸಿದೆ. ಬೆಂಗಳೂರಿನಲ್ಲಿ 5 ಕಡೆ ಮಂಗಳೂರಿನಲ್ಲಿ 6 ಕಡೆ ದಾಳಿಯಾಗಿದೆ.ಕಲ್ಬುರ್ಗಿಯಲ್ಲಿ ಟಿಪ್ಪು ಚೌಕದಲ್ಲಿರುವ ಪಿಎಫ್ ಐ ಜಿಲ್ಲಾಧ್ಯಕ್ಷ ಶೇಖ್ ಏಜಾಜ್, ಹಾಗೂ ಶಾಹಿದ್ ನಿವಾಸಗಳ ಮೇಲೆ  ದಾಳಿ ನಡೆಸಿದೆ.

Key words: NIA- raids- offices- SDPI – PFI -leaders – country.