ಮೈಸೂರಿನಲ್ಲಿ ಪ್ಲಾಸ್ಟಿಕ್ ಕವರ್ ನಲ್ಲಿ ನವಜಾತ ಶಿಶು ಪತ್ತೆ…

Promotion

ಮೈಸೂರು,ಸೆ,16,2019(www.justkannada.in): ಪ್ಲಾಸ್ಟಿಕ್ ಕವರ್ ನವಜಾತ ಶಿಶು ಪತ್ತೆಯಾಗಿರುವ ಘಟನೆ ಮೈಸೂರು ನಗರದಲ್ಲಿ ನಡೆದಿದೆ.

ಬೆಳಿಗ್ಗೆ ಮೈಸೂರು ನಗರದ ಶ್ರೀರಾಮಪುರ  ಬಳಿ ನವಜಾತ ಹೆಣ್ಣುಶಿಶು ಪತ್ತೆಯಾಗಿದೆ. ಮುಖ್ಯರಸ್ತೆಯಲ್ಲಿ ಪ್ಲಾಸ್ಟಿಕ್ ಕವರ್ ನಲ್ಲಿ ಸುತ್ತಿ ಮಗುವನ್ನು ಯಾರೋ ಬಿಸಾಡಿದ್ದಾರೆ ಎನ್ನಲಾಗಿದೆ. ದಾರಿಹೋಕರು ಪರಿಶೀಲಿಸಿದಾಗ ಪ್ಲಾಸ್ಟಿಕ್ ಒಳಗಡೆ ನವಜಾತ ಶಿಶುವಿರುವುದು ಪತ್ತೆಯಾಗಿದ್ದು,  ಕುವೆಂಪುನಗರ ಪೊಲೀಸ್ ಠಾಣೆಯ  ಪೊಲೀಸರು ಭೇಟಿ ನೀಡಿ ಪರಿಶೀಲಿಸಿದರು.

ನಂತರ ಶಿಶುವಮ್ಮ ಚೆಲುವಾಂಬಾ ಆಸ್ಪತ್ರೆಗೆ ರವಾನೆ ಮಾಡಲಾಗಿದ್ದು, ಶಿಶು ಆರೋಗ್ಯವಾಗಿದೆ ಎನ್ನಲಾಗಿದೆ. ಚೆಲುಂವಾಬ ಆಸ್ಪತ್ರೆಯಲ್ಲಿಯೇ ನವಜಾತ ಶಿಶುವನ್ನು ಇರಿಸಲಾಗಿದೆ. ಹೆಣ್ಣು ಮಗು ಎಂಬ ಕಾರಣಕ್ಕೆ ಈ ರೀತಿ ಹೃದಯ ಹೀನ ಕೃತ್ಯ ಮಾಡಿದ್ದಾರಾ? ಅಥವಾ ಅಕ್ರಮ ಸಂಬಂಧಿಂದ ಹೀಗಾಯಿತಾ ? ಎಂಬುದ ಇನ್ನಷ್ಟೇ ತಿಳಿದು ಬರಬೇಕಿದೆ. ಈ ಕುರಿತು ಕುವೆಂಪು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Key words: Newborn –baby- found – plastic cover – Mysore