ಹೊಸ ದಾಖಲೆ ಸರಿಗಟ್ಟಿದ ಫುಟ್ಬಾಲ್ ಮಾಂತ್ರಿಕ ಕ್ರಿಸ್ಟಿಯಾನೊ ರೊನಾಲ್ಡೊ

Promotion

ಬೆಂಗಳೂರು, ಜೂನ್ 24, 2021 (www.justkannada.in): ಫುಟ್‌ಬಾಲ್ ಮಾಂತ್ರಿಕ ಕ್ರಿಸ್ಟಿಯಾನೊ ರೊನಾಲ್ಡೊ ದಾಖಲೆಯೊಂದನ್ನು ಸರಿಗಟ್ಟಿದ್ದಾರೆ.

ಪುರುಷರ ಫುಟ್‌ಬಾಲ್‌ನಲ್ಲಿ ಅತಿಹೆಚ್ಚು ಅಂತರ್ ರಾಷ್ಟ್ರೀಯ ಗೋಲುಗಳನ್ನು ಗಳಿಸಿದ ದಾಖಲೆಯನ್ನು ರೊನಾಲ್ಡೊ ಸರಿಗಟ್ಟಿದ್ದಾರೆ.

ಬುಡಾಪೆಸ್ಟ್‌ನಲ್ಲಿ ನಡೆದ ಯೂರೊ-2020 ಫುಟ್‌ಬಾಲ್ ಟೂರ್ನಿಯ ಎಫ್ ಗುಂಪಿನ ಪಂದ್ಯದಲ್ಲಿ ಫ್ರಾನ್ಸ್ ತಂಡದ ಜತೆ 2-2 ಡ್ರಾ ಸಾಧಿಸುವ ಮೂಲಕ ಫೋರ್ಚ್‌ಗಲ್ ಅಂತಿಮ 16ರ ಘಟ್ಟಕ್ಕೆ ಮುನ್ನಡೆಯಲು ರೊನಾಲ್ಡೊ ನೆರವಾದರು.

ರೊನಾಲ್ಡೊ ಗೋಲಿನಿಂದಾಗಿ ರೋಮಾಂಚಕ ಪಂದ್ಯದಲ್ಲಿ ಡ್ರಾ ಸಾಧಿಸುವ ಮೂಲಕ ಹಾಲಿ ಚಾಂಪಿಯನ್ ಪೋರ್ಚ್‌ಗಲ್ ಕಣದಲ್ಲಿ ಉಳಿಯಿತು.