ಮೆಚ್ಚುಗೆಗೆ ಪಾತ್ರವಾಯ್ತು ಸರಕಾರದ ನೂತನ ಮುಖ್ಯಕಾರ್ಯದರ್ಶಿ ಪಿ.ರವಿಕುಮಾರ್ ಅವರ ಈ ಸಿಂಪ್ಲಿಸಿಟಿ…!

ಮೈಸೂರು,ಜ.04, 2021 : (www.justkannada.in news ) ಕುಟುಂಬ ಸದಸ್ಯರ ಜತೆಗೆ ಮೈಸೂರಿನ ಚಾಮುಂಡಿಬೆಟ್ಟಕ್ಕೆ ಆಗಮಿಸಿ ನಾಡದೇವಿ ಚಾಮುಂಡೇಶ್ವರಿ ದರ್ಶನ ಪಡೆದ ಸರ್ಕಾರದ ನೂತನ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್ ಅವರ ನಡೆ ಮೆಚ್ಚುಗೆಗೆ ಪಾತ್ರವಾಗಿದೆ.jk-logo-justkannada-mysore

ಶನಿವಾರ ಮದ್ಯಾಹ್ನವೇ ಕುಟುಂಬದ ಸದಸ್ಯರೊಂದಿಗೆ ಸಾಂಸ್ಕøತಿಕ ನಗರಿ ಮೈಸೂರಿಗೆ ಆಗಮಿಸಿ, ಸರ್ಕಾರಿ ಅತಿಥಿ ಗೃಹದಲ್ಲಿ ವಾಸ್ತವ್ಯ ಹೂಡಿದ್ದ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್ , ಭಾನುವಾರ ಬೆಳಿಗ್ಗೆ ಪತ್ನಿ ಹಾಗೂ ಪುತ್ರನ ಜತೆಗೆ ಚಾಮುಂಡಿಬೆಟ್ಟಕ್ಕೆ ತೆರಳಿ ದೇವಿ ದರ್ಶನ ಪಡೆದು ಪೂಜೆ ಸಲ್ಲಿಸಿದ್ದು ವಿಶೇಷ ಎನಿಸಿಕೊಳ್ಳಲು ಈ ಅಂಶವೇ ಕಾರಣ.
ಎಸ್ಲಾರ್ಟ್ ವಾಹನ ತ್ಯಜಿಸಿ ಸಾಮಾನ್ಯ ವ್ಯಕ್ತಿಯಂತೆಯೇ ಕುಟುಂಬ ಸಮೇತ ಬೆಟ್ಟಕ್ಕೆ ಆಗಮಿಸಿದ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್, ಬೆಟ್ಟದಲ್ಲಿನ ವಾಹನ ನಿಲುಗಡೆ ಸ್ಥಳದಲ್ಲೇ ಕಾರು ನಿಲ್ಲಿಸಿ, ಅಲ್ಲಿಂದ ದೇವಸ್ಥಾನದ ತನಕ ಸಾರ್ವಜನಿಕರ ಜತೆಗೆ ನಡೆದೆ ಬಂದರು. New Chief Secretary- P.Ravikumar- visits- Chamundi Temple-Mysore
ಸರ್ಕಾರದ ಮುಖ್ಯ ಕಾರ್ಯದರ್ಶಿಯಾಗಿ ನೇಮಕಗೊಂಡ ಬಳಿಕ ಮೊದಲ ಬಾರಿಗೆ ಚಾಮುಂಡಿಬೆಟ್ಟಕ್ಕೆ ಬರುವ ಹಿನ್ನೆಲೆಯಲ್ಲಿ ಪ್ರೊಟೊಕಾಲ್ ಅಂತೆ ದೇವಾಲಯದ ಮುಂದೆ ಮುಖ್ಯ ಕಾರ್ಯದರ್ಶಿಗಳನ್ನು ಸ್ವಾಗತಿಸಲು ಅಧಿಕಾರಿಗಳು ನೆರೆದಿದ್ದರು. ಜತೆಗೆ ಅವರಿಗೆ ಪೂರ್ಣಕುಂಭ ಸ್ವಾಗತ ನೀಡಲು ವ್ಯವಸ್ಥೆ ಮಾಡಿಕೊಳ್ಳಲಾಗಿತ್ತು. ಮುಖ್ಯಕಾರ್ಯದರ್ಶಿ ದೇವಾಲಯದ ಬಾಗಿಲ ತನಕ ಸರಕಾರಿ ಕಾರಿನಲ್ಲೇ ಬರುತ್ತಾರೆ ಎಂದುಕೊಂಡಿದ್ದ ಅಧಿಕಾರಿಗಳು, ಮುಖ್ಯಕಾರ್ಯದರ್ಶಿ ಕಾಲ್ನಡಿಗೆಯಲ್ಲೇ ಆಗಮಿಸಿದ್ದನ್ನು ಕಂಡು ತಬ್ಬಿಬ್ಬಾದರು.
ನಾಡ ದೇವತೆ, ತಾಯಿ ಚಾಮುಂಡಿಯ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದ ಬಳಿಕ ದೇವಾಲಯದಿಂದ ಹೊರಬಂದ ಪಿ.ರವಿಕುಮಾರ್, ಭದ್ರತೆಗೆಂದು ಆಗಮಿಸಿದ ಪೊಲೀಸರನ್ನು ಹಿಂದಕ್ಕೆ ಕಳುಹಿಸಿ ಸಾಮಾನ್ಯರಂತೆ ಪಾರ್ಕಿಂಗ್ ಕಟ್ಟಡದತ್ತ ತೆರಳಿ ಅಲ್ಲಿಂದ ನಿರ್ಮಿಸಿದರು.
ಬಹುತೇಕ ಅಧಿಕಾರಾಸ್ತರು, ತಮ್ಮ ಪ್ರಭಾವ ಬಳಸಿ ದೇವಾಲಯ ಸಮೀಪದವರೆಗೂ ವಾಹನದಲ್ಲಿ ಬರುವುದು ಸಾಮಾನ್ಯವಾಗಿದೆ. ಈ ನಡುವೆ ಮುಖ್ಯ ಕಾರ್ಯದರ್ಶಿಯಂತಹ ಉನ್ನತ ಹುದ್ದೆಯಲ್ಲಿರುವ ಅಧಿಕಾರಿ, ಪಾರ್ಕಿಂಗ್ ಕಟ್ಟಡದಲ್ಲೇ ವಾಹನ ನಿಲುಗಡೆ ಮಾಡಿ ಸಾಮಾನ್ಯರಂತೆ ವರ್ತಿಸಿದ್ದು ಸಾರ್ವಜನಿಕ ವಲಯದಲ್ಲಿ ಪ್ರಶಂಸೆಗೆ ಪಾತ್ರವಾಗಿದೆ.

Keywords: New Chief Secretary- P.Ravikumar- visits- Chamundi Temple-Mysore

ENGLISH SUMMARY :
P. Ravikumar, CS to Govt. of Karnataka visits Chamundi temple in Mysuru
The new Chief Secretary to the Government, P. Ravikumar, visited Chamundi hills in Mysuru along with his family and had the darshan of goddess Chamundeshwari.
P. Ravikumar has succeeded the former Chief Secretary T.M. Vijayabhaskar, who retired on Dec. 31, 2020. He along with his family members visited the Chamundeshwari Temple and offered special pooja.
He set an example by parking the vehicle at the multi-level parking building atop the hill, whereas other officials of lower rank use their power to take the vehicle right in front of the temple.