”ಬಿಜೆಪಿಯವರು ಗ್ರಾಪಂ ಸದಸ್ಯರಿಗೆ ಅಮಿಷವೊಡ್ಡುತ್ತಿದ್ದಾರೆ” : ಮಾಜಿ ಸಚಿವ ಎಚ್​.ಡಿ ರೇವಣ್ಣ ಆರೋಪ…!

ಹಾಸನ,ಜನವರಿ,04,2021(www.justkannada.in) : ಜೆಪಿಯವರು ಗ್ರಾಪಂ ಸದಸ್ಯರಿಗೆ ಅಮಿಷವೊಡ್ಡುತ್ತಿದ್ದಾರೆ. ನಾವು ಜಿಲ್ಲಾಧಿಕಾರಿಗಳಿಗೆ ಹೇಳಿ ಕ್ಯಾಟಗಿರಿ ಚೆಂಜ್ ಮಾಡುತ್ತೇವೆ ಅನ್ನುತ್ತಿದ್ದಾರೆ. ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನದ ಆಕಾಂಕ್ಷಿಗಳಿಗೆ ಈ ರೀತಿ ಮಾಡುತ್ತಿದ್ದಾರೆ ಎಂದು ಮಾಜಿ ಸಚಿವ ಎಚ್​.ಡಿ ರೇವಣ್ಣ ಆರೋಪಿಸಿದರು.jk-logo-justkannada-mysore

ಗ್ರಾಪಂ ಮೀಸಲಾತಿ ಪ್ರಕಟ ಹಿನ್ನೆಲೆ, ಬಿಜೆಪಿಯವರು ಮಾತನಾಡುವ ವಾಯ್ಸ್​ ರೆಕಾರ್ಡ್ ಇದೆ. ಅದನ್ನು ಕಾಲ ಬಂದಾಗ ಬಿಡುಗಡೆ ಮಾಡುತ್ತೇವೆ. ಈ ಮೊದಲೇ ರಿಸರ್ವೇಷನ್ ಮಾಡಬೇಕಿತ್ತು ಇವರು ಲೇಟ್ ಆಗಿ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸದ್ಯ ರಾಜ್ಯ ಚುನಾವಣ ಆಯೋಗ ಸತ್ತು ಹೋಗಿದೆ. ಗ್ರಾಮ ಪಂಚಾಯತಿ ಮೀಸಲಾತಿ ಬಗ್ಗೆ ಬಿಜೆಪಿ ನಾಯಕರೊಬ್ಬರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಎರಡು ಗಂಟೆ ಮೀಟಿಂಗ್ ಮಾಡಿದ್ದಾರೆ. ಇದು ಪ್ರಜಾಪ್ರಭುತ್ವದ ಕಗ್ಗೊಲೆ ಆಗಿದೆ. ನಾವು ಜಿಲ್ಲಾಧಿಕಾರಿಗಳ ಕಚೇರಿ ಬಳಿ ಪ್ರತಿಭಟನೆ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.

ಇನ್ನು ಸದಸ್ಯರು ಬೆಳಗ್ಗೆ ಕಾಂಗ್ರೆಸ್​​, ರಾತ್ರಿ ಬಿಜೆಪಿ ಅನ್ನುತ್ತಿದ್ದಾರೆ. ಮುಂಬರುವ ಜಿಲ್ಲಾ ಹಾಗೂ ತಾಲೂಕು ಪಂಚಾಯತ್ ಚುನಾವಣೆ ಕ್ಯಾಟಗಿರಿಯನ್ನು ಆರು ತಿಂಗಳ ಮೊದಲೆ ಅನೌನ್ಸ್​ ಮಾಡಬೇಕು. ಮಾಡಲಿಲ್ಲ ಅಂದ್ರೆ ನಾವು ಕೋರ್ಟ್ ಮೊರೆ ಹೋಗುತ್ತೇವೆ. ಕೆಲ ದಿನಗಳಲ್ಲಿ ಅಧಿಕಾರಿಗಳು ಜೈಲಿಗೆ ಹೋಗುತ್ತಾರೆ ನೋಡಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.BJP,Grapham,members,offering,Former,Minister,H.D.Ravennaಎನ್​ಡಿಎ ಜೊತೆ ಮೈತ್ರಿ ವಿಚಾರ ವದಂತಿ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ನಾವು ಯಾವ ಎನ್​ಡಿಎ ಯುಪಿಎ ಜೊತೆ ಕೂಡ ಮೈತ್ರಿ ಆಗೋದಿಲ್ಲ, ಇದೆಲ್ಲಾ ಸುಳ್ಳು ಸುದ್ದಿ ಎಂದು ತಿಳಿಸಿದರು.

key words : BJP-Grapham- members-offering-Former-Minister-H.D.Ravenna