ಸಚಿವ ಸ್ಥಾನಕ್ಕೆ ಈ ಹಿಂದೆಯೂ ಯಾವುದೇ ಲಾಬಿ ಮಾಡಿಲ್ಲ, ಈಗಲೂ ಮಾಡಲ್ಲ : ಶಾಸಕ ಎಸ್.ಎ.ರಾಮದಾಸ್ 

Promotion

ಮೈಸೂರು,ನವೆಂಬರ್,11,2020(www.justkannada.in) : ಸಚಿವ ಸ್ಥಾನಕ್ಕಾಗಿ ನಾನು ಈ ಹಿಂದೆಯೂ ಯಾವುದೇ ಲಾಬಿ ಮಾಡಿಲ್ಲ ಈಗಲೂ ಮಾಡಲ್ಲ ಎಂದು ಶಾಸಕ ಎಸ್.ಎ.ರಾಮದಾಸ್ ಹೇಳಿದರು.kannada-journalist-media-fourth-estate-under-lossಸಚಿವ ಸ್ಥಾನ ಕುರಿತು ಮಾತನಾಡಿದ ಅವರು, ಮಂತ್ರಿ ಸ್ಥಾನಕ್ಕಾಗಿ ಲಾಬಿ ಮಾಡುವ ವ್ಯಕ್ತಿ ನಾನಲ್ಲ. ಯಡಿಯೂರಪ್ಪ ನನ್ನ ತಂದೆ ಸ್ಥಾನದಲ್ಲಿದ್ದಾರೆ. ಸೂಕ್ತ ಸಮಯದಲ್ಲಿ ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂಬ ನಂಬಿಕೆ ಇದೆ ಎಂದರು.

ದೇಶದ ಹಿರಿಯ ಮುಖ್ಯಮಂತ್ರಿಯಾಗಿ ಯಡಿಯೂರಪ್ಪ ರಾಜ್ಯ ಮುನ್ನಡೆಸುತ್ತಿದ್ದಾರೆ. ಅವರ ಮಾರ್ಗದರ್ಶನದಲ್ಲಿ ನಾವು ಶಾಸಕರಾಗಿ ಕೆಲಸ ಮಾಡುತ್ತಿದ್ದೇವೆ. ನಾನು ನನ್ನ ಕ್ಷೇತ್ರದ ಅಭಿವೃದ್ಧಿ ವಿಚಾರವಾಗಿ ಜನರ ಋಣ ತೀರಿಸಲು ಕೊನೆಯವರೆಗೂ ದುಡಿಯುತ್ತೇನೆ ಎಂದು ತಿಳಿಸಿದರು.

ಸಿದ್ದರಾಮಯ್ಯ ವಿರೋಧ ಪಕ್ಷದ ನಾಯಕ, ಆಡಳಿತ ಪಕ್ಷ ಟೀಕಿಸುವುದು ಅನಿವಾರ್ಯNeither,ever,lobbied,ministerial,post,still,does,MLA S.A.Ramadasರಾಜ್ಯದಲ್ಲಿ ಸಿಎಂ ಬದಲಾವಣೆ ಎಂಬ ಸಿದ್ದರಾಮಯ್ಯ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಎಸ್.ಎ.ರಾಮದಾಸ್. ಸಿದ್ದರಾಮಯ್ಯ ಒಬ್ಬ ವಿರೋಧ ಪಕ್ಷದ ನಾಯಕ, ಆಡಳಿತ ಪಕ್ಷವನ್ನ ಟೀಕಿಸಲೇಬೇಕಾದ ಅನಿವಾರ್ಯತೆ ಅವರಿಗಿದೆ. ಈ ಹಿನ್ನೆಲೆ ಆಗಾಗ ಇಂತಹ ವಿಚಾರ ಪ್ರಸ್ತಾಪ ಮಾಡುತ್ತಾರೆ. ಸಿಎಂ ಬದಲಾವಣೆ ವಿಚಾರವಾಗಿ  ಆಯಾ ಪಕ್ಷದ ರಾಷ್ಟೀಯ ಅಧ್ಯಕ್ಷರು ಹಾಗೂ ಪ್ರಮುಖರು ತೀರ್ಮಾನಿಸುತ್ತಾರೆ ಎಂದು ಹೇಳಿದರು.

key words : Neither-ever-lobbied-ministerial-post-still-does-MLA S.A.Ramadas