ಕನ್ನಡದಲ್ಲೇ ಟ್ವೀಟ್ ಮಾಡಿ ಶುಭಕೋರಿದ ಪ್ರಧಾನಿ ಮೋದಿ…

ಬೆಂಗಳೂರು,ನವೆಂಬರ್,11,2020(www.justkannada.in): ಆರ್.ಆರ್ ನಗರ ಮತ್ತು ಶಿರಾ ಕ್ಷೇತ್ರದಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸಿದ ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿ ಕನ್ನಡದಲ್ಲೇ ಟ್ವೀಟ್ ಮಾಡಿ ಶುಭಕೋರಿದ್ದಾರೆ.BJP-won- RR Nagar – Shira-Prime Minister- Modi- tweet -Kannada

ಕನ್ನಡದಲ್ಲೇ ಟ್ವೀಟ್ ಮಾಡಿರುವ ಪ್ರಧಾನಿ ಮೋದಿ, ಕರ್ನಾಟಕದ ಶಿರಾ ಮತ್ತು ರಾಜರಾಜೇಶ್ವರಿ ನಗರದಲ್ಲಿ ಬಿಜೆಪಿ ಗೆಲುವು ಸಾಧಿಸಿರುವುದು ಅತ್ಯಂತ ವಿಶೇಷವಾದದ್ದು. ಕೇಂದ್ರ ಹಾಗೂ ಸಿಎಂ ಬಿಎಸ್ ವೈ ಅವರ ನೇತೃತ್ವದ  ರಾಜ್ಯ ಸರ್ಕಾರದ ಸುಧಾರಣಾ ಕಾರ್ಯಸೂಚಿಗಳ ಮೇಲೆ ಜನರು ಹೊಂದಿರುವ ಸ್ಥಿರ ವಿಶ್ವಾಸವನ್ನು ಇದು ಪುನಃ ದೃಢೀಕರಿಸುತ್ತದೆ ಎಂದು ಟ್ವೀಟ್ ಮೂಲಕ ಗೆಲುವಿಗೆ ಧನ್ಯವಾದ ತಿಳಿಸಿದ್ದಾರೆ.BJP-won- RR Nagar – Shira-Prime Minister- Modi- tweet -Kannada

ಇದಕ್ಕೂ ಮೊದಲು ಕನ್ನಡದಲ್ಲಿ ಟ್ವೀಟ್ ಮಾಡಿ ಶುಭಕೋರುವ ಮೂಲಕ ಗೃಹ ಸಚಿವ ಅಮಿತ್ ಶಾ ಗಮನಸೆಳೆದಿದ್ದರು. ಬಿಜೆಪಿಗೆ ನಿರಂತರ ಬೆಂಬಲ ನೀಡುತ್ತಿರುವ ಕರ್ನಾಟಕಕ್ಕೆ ಧನ್ಯವಾದಗಳು. ಉಪ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವಿಗಾಗಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ , ನಳೀನ್ ಕುಮಾರ್ ಕಟೀಲ್ ಮತ್ತು ಕಾರ್ಯಕರ್ತರನ್ನ ಅಭಿನಂದಿಸುತ್ತೇನೆ. ಪ್ರಧಾನಿ ನರೇಂದ್ರ ಮೋದಿ ಅವರ ಮಾರ್ಗದರ್ಶನದಡಿ ರಾಜ್ಯವು ಅಭಿವೃದ್ಧಿ ಸಾಧಿಸಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಟ್ವೀಟ್ ಮಾಡಿ ಶುಭಹಾರೈಸಿದ್ದರು.

English summary…..

PM Modi tweets in Kannada wishing BJP candidates victory in the byelections
Bengaluru, Nov. 11, 2020 (www.justkannada.in): Following the victory of BJP candidates in the byelections, Prime Minister Sri Narendra Modi has tweeted in Kannada wishing them all the best.
Mentioning the party’s victory in the recently held byelections as special, he tweeted that this victory has yet again proved the confidence of the people of the state on the development agenda of the State govt. and the govt. at the centre, and thanked the people for their support.
Key words: Byelection-PM tweet in Kannada-BJP victory

Key words: BJP-won- RR Nagar – Shira-Prime Minister- Modi- tweet -Kannada