ಎಸ್‌ಟಿಐ ಕ್ಷೇತ್ರದೊಳಗೆ ಆರ್ಥಿಕ ಅಭಿವೃದ್ಧಿ, ಸಾಮಾಜಿಕ ಸೇರ್ಪಡೆ ಪರಿಸರ ಸುಸ್ಥಿರತೆಗೆ ಕರೆ ನೀಡಿದ ಪ್ರೊ.ಕೆ.ಎಸ್ ರಂಗಪ್ಪ.  

ಮೈಸೂರು, ಫೆಬ್ರವರಿ 28, 2022 (www.justkannada.in): ಅಮೃತ ವಿಶ್ವವಿದ್ಯಾಪೀಠಂ, ಮೈಸೂರು, ಐಇಇಇ ಮೈಸೂರು ಸಬ್‌ ಸೆಕ್ಷನ್‌ ನ ಸಹಯೋಗದೊಂದಿಗೆ ರಾಷ್ಟ್ರೀಯ ವಿಜ್ಞಾನ ದಿನ-2022 ಅನ್ನು ಆಯೋಜಿಸಿತು.

ಮೈಸೂರು ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ  ಪ್ರೊ. ಕೆ.ಎಸ್. ರಂಗಪ್ಪ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು. ಪ್ರೊ. ಎಸ್.ಎಸ್. ಮೂರ್ತಿ, ಐಇಇಇ ಫೆಲೊ, ಸೆಂಟ್ರಲ್ ಯೂನಿವರ್ಸಿಟಿ ಆಫ್ ಕರ್ನಾಟಕದ ಮಾಹಿ ಉಪಕುಲಪತಿಗಳು ಹಾಗೂ ಸೂರತ್ಕಲ್ ನ  ಎನ್‌ ಐಟಿಕೆನ ಮಾಜಿ ನಿರ್ದೇಶಕರಾದ ಪ್ರೊ. ಎಸ್.ಎಸ್. ಮೂರ್ತಿ ಅವರು ಗೌರವ ಅತಿಥಿಯಾಗಿ ಆಗಮಿಸಿದ್ದರು.

ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರೊ. ರಂಗಪ್ಪ ಅವರು,  ಶಿಕ್ಷಣ ವ್ಯವಸ್ಥೆಯನ್ನು ಬೇರು ಮಟ್ಟದಿಂದ ಉನ್ನತ ಮಟ್ಟದವರೆಗೂ ಪುನರ್‌ ಕಲ್ಪಿಸುವ ತುರ್ತು ಅಗತ್ಯದ ಕುರಿತು ತಿಳಿಸಿದರು. ಸಾಂಪ್ರದಾಯಿಕ ಮೌಖಿಕ ಕಲಿಕೆಯಿಂದಾಚೆಗೆ, ಯುವಜನರನ್ನು ಮೂಲಭೂತ ವಿಜ್ಞಾನದೆಡೆಗೆ ಪ್ರೋತ್ಸಾಹಿಸುವ ಪೋಷಿತ ಹಾಗೂ ಸ್ವತಂತ್ರ ಹಾಗೂ ಮೂಲ ಆಲೋಚನೆಗೆ ಅನುಕೂಲವನ್ನು ಒದಗಿಸುವಂತಹ ಪರಿಸರವ್ಯವಸ್ಥೆಯ ಕಡೆಗೆ ಪರಿವರ್ತಿಸುವ ಅಗತ್ಯದ ಕುರಿತು ವಿವರಿಸಿದರು.

ಕುತೂಹಲ-ಚಾಲಿತ ವಿಜ್ಞಾನ ಹಾಗೂ ಅಗತ್ಯ-ಚಾಲಿತ ವಿಜ್ಞಾನದ ನಡುವಿನ ದೃಢವಾದ ಪರಸ್ಪರ ಕ್ರಿಯೆಯನ್ನು ವಿವರಿಸುತ್ತಾ ಪ್ರೊ. ರಂಗಪ್ಪ ಅವರು,  ಹಾಲಿ ಸಂಶೋಧನೆ ದೊರೆಯುವಿಕೆಯನ್ನು ಸಾಧ್ಯವಾಗಿಸಲು ವಿಜ್ಞಾನ ಸಂವಹನ ಹಾಗೂ ವೈಜ್ಞಾನಿಕ ಪ್ರಗತಿಯ ಕುರಿತು ಅರಿವು ಸೃಷ್ಟಿಸುವ ಚುಟುವಟಿಕೆಗಳನ್ನು ಪ್ರೋತ್ಸಾಹಿಸಿದರು.

ಕಾರ್ಯಕ್ರಮದ ವಿಷಯ ‘ಸುಸ್ಥಿರ ಭವಿಷ್ಯಕ್ಕಾಗಿ ವಿಜ್ಞಾನ ಮತ್ತು ತಂತ್ರಜ್ಞಾನದ ಸಮಗ್ರ ದೃಷ್ಟಿಕೋನ’ಕ್ಕೆ ಪೂರಕವಾಗಿ, ರಾಯಲ್ ಸೊಸೈಟಿ ಆಫ್ ಕೆಮಿಸ್ಟ್ರಿಯ ಫೆಲೊ ಆದಂತಹ ಪ್ರೊ. ರಂಗಪ್ಪ ಅವರು ಎಸ್‌ಟಿಐ (ವಿಜ್ಞಾನ, ತಂತ್ರಜ್ಞಾನ, ನಾವೀನ್ಯತೆ) ಕ್ಷೇತ್ರದೊಳಗೆ ಆರ್ಥಿಕ ಅಭಿವೃದ್ಧಿ, ಸಾಮಾಜಿಕ ಸೇರ್ಪಡೆ ಹಾಗೂ ಪರಿಸರ ಸುಸ್ಥಿರತೆಗಳಿಗಾಗಿ ಕರೆ ನೀಡಿದರು.

ಭಾರತೀಯ ಚಿಂತಕರ ಸಾಮರ್ಥ್ಯಕ್ಕೆ ದೃಢ ಒಪ್ಪಿಗೆಯನ್ನು ಸೂಚಿಸುವುದರ ಜೊತೆಗೆ, ಮುಂದಿನ ವರ್ಷಗಳಲ್ಲಿ ಭಾರತ ವಿಜ್ಞಾನ ಕ್ಷೇತ್ರದಲ್ಲಿ ಜಾಗತಿಕ ಮಟ್ಟದಲ್ಲಿ ಸ್ಪರ್ಧಿಸುವುದೆಂದು ತಿಳಿಸುತ್ತಾ ತಮ್ಮ ಭಾಷಣವನ್ನು ಮುಕ್ತಾಯಗೊಳಿಸಿದರು.

ನಂತರ ಮಾತನಾಡಿದ ಪ್ರೊ. ಮೂರ್ತಿ ಅವರು,  ಮಾನವೀಯ ಮೌಲ್ಯಗಳಿಲ್ಲದಿರುವಂತಹ ವಿಜ್ಞಾನ ಪ್ರತಿಕೂಲವಾದ ಮಾರ್ಗ ಎಂದು ಪ್ರತಿಪಾದಿಸಿದರು. ತಾರ್ಕಿಕ ಹಾಗೂ ವೈಜ್ಞಾನಿಕ ಆಲೋಚನೆ ಯಾವ ರೀತಿ ಸಮಾನತೆಯನ್ನು ಪ್ರೋತ್ಸಾಹಿಸುತ್ತದೆ ಎಂದು ವಿವರಿಸುತ್ತಾ, ಹಾಲಿ ಸಾಮಾಜಿಕ-ರಾಜಕೀಯ ಸ್ಥಿತಿಗತಿಗಳ ಪ್ರಕಾರವಾಗಿ ಈ ಅಂಶಕ್ಕೆ ಏಕೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಬೇಕು ಎಂಬುದನ್ನು ತಿಳಿಸಿದರು. ಭಾರತ ಹೊಸ ತಲೆಮಾರು, ವೈಜ್ಞಾನಿಕ ಸಂಶೋಧನೆಯಲ್ಲಿ ಭಾರತ ಸಾಧಿಸಿರುವ ಅಭೂತಪೂರ್ವ ಸಂಸ್ಕೃತಿಯೊಂದಿಗೆ ಪುನರ್‌ ಸಂಪರ್ಕ ಕಲ್ಪಿಸುವ ಅಗತ್ಯವನ್ನು ಒತ್ತಿ ಹೇಳಿದರು.

ಮುಂದುವರೆದು, ಸಾರ್ವಜನಿಕ ಆರೋಗ್ಯ, ವೃತ್ತಿಪರತೆ, ಜಾತ್ಯಾತೀತತೆ ಹಾಗೂ ಸುಸ್ಥಿರ ಅಭ್ಯಾಸಗಳನ್ನು ಪೋಷಿಸುವ ತಾತ್ವಿಕ ನಡತೆಯನ್ನು ಗುರುತಿಸುವ ಐಇಇಇನ ಸೈದ್ಧಾಂತಿಕ ಸಂಹಿತೆಯನ್ನು ಹಂಚಿಕೊಂಡರು.

ಕರ್ನಾಟಕದಾದ್ಯಂತ 20ಕ್ಕೂ ಹೆಚ್ಚಿನ ಸಂಖ್ಯೆಯ ಕಾಲೇಜುಗಳ ಸುಮಾರು 100 ತಂಡಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ನೋಂದಾಯಿಸಿಕೊಂಡಿದ್ದವು. ವಿದ್ಯಾರ್ಥಿಗಳು ವಾಹನ ಸಂಚಾರ ದಟ್ಟಣೆ, ಕೋವಿಡ್-19 ನಿಗಾವಣೆ, ಜೈವಿಕ ಇಂಧನಗಳು ಹಾಗೂ ನೈಸರ್ಗಿಕ ವಿಕೋಪಗಳ ನಿರ್ವಹಣೆ, ಇತ್ಯಾದಿಯಂತಹ ಮುಖ್ಯವಾದ ವಿಷಯಗಳಿಗೆ ಪರಿಹಾರಗಳನ್ನು ಸೂಚಿಸುವ ವಿನೂತನ ಮಾದರಿಗಳನ್ನು ತಯಾರಿಸಿ ಪ್ರದರ್ಶಿಸಿದರು.

ಡಾ. ಪರಮೇಶಾಚಾರಿ ಬಿ.ಡಿ., ಪ್ರಾಧ್ಯಾಪಕರು ಹಾಗೂ ಮುಖ್ಯಸ್ಥರು, ಟೆಲಿಕಮ್ಯೂನಿಕಷನ್ ಇಂಜಿನಿಯರಿಂಗ್ ವಿಭಾಗ, ಜಿಎಸ್‌ಎಸ್‌ಎಸ್‌ ಐಇಟಿಡಬ್ಲ್ಯು, ಮೈಸೂರು ಹಾಗೂ ಮುಖ್ಯಸ್ಥರು, ಐಇಇಇ ಮೈಸೂರು ಸಬ್‌ ಸೆಕ್ಷನ್ ಇವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.

ಡಾ. ಜಿ. ರವೀಂದ್ರನಾಥ್, ಪ್ರಾಂಶುಪಾಲರು, ಅಮೃತ ಕಲಾ ಮತ್ತು ವಿಜ್ಞಾನ ಶಾಲೆ, ಮೈಸೂರು, ಬ. ಅನಂತಾನಂದ ಚೈತನ್ಯ, ನಿರ್ದೇಶಕರು  ಸೇರಿ ಹಲವರು ಉಪಸ್ಥಿತರಿದ್ದರು

ಪೋಸ್ಟರ್ ಪ್ರೆಸೆಂಟೇಷನ್ ಸ್ಪರ್ಧೆಯ ವಿಜೇತರು:

  1. ನಮಿತಾ ಪಾಪಿ ಶೆಟ್ಟಿ – ಅಲೈಯನ್ಸ್ ಯೂನಿವರ್ಸಿಟಿ, ಬೆಂಗಳೂರು – ೧
  2. ಅಪೂರ್ವ ಶೇಖರ್, ಶಿವ್‌ಕಿರಣ್ ಮಜಗೆ – ಅಲೈಯನ್ಸ್ ಯೂನಿವರ್ಸಿಟಿ, ಬೆಂಗಳುರು – ೨

ಮಾದರಿ ಪ್ರದರ್ಶನ ಸ್ಪರ್ಧೆ ವಿಜೇತರು:

  1. ಅಕ್ಷಿತ್ ಎ.ಎನ್., ದರ್ಶನ್ ಹೆಚ್.ಕೆ. – ಎನ್‌ಐಇ ಪ್ರಥಮ ದರ್ಜೆ ಕಾಲೇಜು, ಮೈಸೂರು
  2. ಭರತ್ ಕುಮಾರ್ ಎಸ್. ಸಲಳ್ಳಿ, ಹರಿಪಿರಯ ಶಿವಕುಮಾರ – ವಿದ್ಯಾ ವಿಕಾಸ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಅಂಡ್ ಟೆಕ್ನಾಲಜಿ

Key words: National -Science -Day -Amrita University