ರಾಷ್ಟ್ರ ರಾಜಕಾರಣಕ್ಕೆ ತೆರಳಲು ಹಿಂದೇಟು: ಇದು ಸಿದ್ದರಾಮಯ್ಯ ರಾಜಕೀಯ ಪುಕ್ಕಲುತನಕ್ಕೆ ಸಾಕ್ಷಿ ಎಂದು ಟೀಕಿಸಿದ ಹೆಚ್.ವಿಶ್ವನಾಥ್

Promotion

ಮೈಸೂರು,ಅಕ್ಟೋಬರ್,11,2021(www.jusykannada.in):  ಮಾಜಿ ಸಿಎಂ ಸಿದ್ದರಾಮಯ್ಯ ರಾಷ್ಟ್ರ ರಾಜಕಾರಣಕ್ಕೆ ತೆರಳಲು ಹಿಂದೇಟು ಹಾಕಿರುವ ವಿಚಾರಕ್ಕೆ ಸಂಬಂಧಿಸಿದಂತೆ ವಿಧಾನಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಟೀಕಿಸಿದ್ದು, ಇದು ಸಿದ್ದರಾಮಯ್ಯ ರಾಜಕೀಯ ಪುಕ್ಕಲುತನಕ್ಕೆ ಸಾಕ್ಷಿ ಎಂದು ಲೇವಡಿ ಮಾಡಿದ್ದಾರೆ.

ಮೈಸೂರಿನಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಹೆಚ್.ವಿಶ್ವನಾಥ್, ಮುಖ್ಯಮಂತ್ರಿ ಆಗಿದ್ದ ಹೆಚ್ ಡಿ ದೇವೇಗೌಡ ಈ ದೇಶದ ಪ್ರಧಾನಿಯಾದರು. 3 ನೇ ಬಾರಿ ಗುಜರಾತ್ ಮುಖ್ಯಮಂತ್ರಿ ಆಗಿದ್ದ ನರೇಂದ್ರ ಮೋದಿ ಕಳೆದ ಏಳು ವರ್ಷದಿಂದ ಪ್ರಧಾನಿಯಾಗಿದ್ದಾರೆ. ಪ್ರಧಾನಿ ಹುದ್ದೆ ದೇಶದ ಪರಮೋಚ್ಚ ಸ್ಥಾನವಾಗಿದೆ. ನನಗೂ ಪ್ರಧಾನಿ ಹುದ್ದೆ ಕೊಟ್ಟರೆ ರಾಷ್ಟ್ರ ರಾಜಕಾರಣಕ್ಕೆ ಬರುತ್ತೇನೆಂದು ಸೋನಿಯಾಗಾಂಧಿಗೆ ಸಿದ್ದರಾಮಯ್ಯ ಹೇಳಬೇಕಿತ್ತು. ದೇವೇಗೌಡ, ನರೇಂದ್ರ ಮೋದಿ ತೋರಿದ ಧೈರ್ಯ ಸಿದ್ದರಾಮಯ್ಯಗೆ ಇಲ್ಲ. ಸಿದ್ದರಾಮಯ್ಯ ಮತ್ತೇಕೆ ಮೋದಿ ವಿರುದ್ಧ ಗುಡುಗಬೇಕು ಎಂದು ಹರಿಹಾಯ್ದರು.

ದೇವೇಗೌಡರು ಪ್ರಧಾನಿಯಾದಾಗ ಎಲ್ಲರಿಗೂ ಸಿಹಿ ಹಂಚಿದ್ದೆ. ನಮ್ಮ ಕನ್ನಡಿಗರೊಬ್ಬರು ಪ್ರಧಾನಿಯಾಗೊದು ನಮ್ಮ ಹೆಮ್ಮೆ‌. ಈಗಲೂ ಸಿದ್ದರಾಮಯ್ಯಗೂ ವಿಶ್ ಮಾಡ್ತಿನಿ ಅವರೂ ಪ್ರಧಾನಿಯಾಗಲಿ ಎಂದು ಹೆಚ್. ವಿಶ್ವನಾಥ್ ಹೇಳಿದರು.

ಬಿಎಸ್ ವೈ ಆಪ್ತನ ಮನೆ ಮೇಲೆ ಐಟಿ ದಾಳಿ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಹೆಚ್.ವಿಶ್ವನಾಥ್,  ಈ ಹಿಂದೆ ಯಡಿಯೂರಪ್ಪ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ನೀವೆ ಭ್ರಷ್ಟಾಚಾರದ ಬಗ್ಗೆ ಮಾತನಾಡಿದ್ರಿ.! ಈಗ ಇದ್ದಕ್ಕಿದ್ದ ಹಾಗೆಯೇ ಅವರ ಪರ ಮೊಸಳೆ ಕಣ್ಣೀರು ಹಾಕ್ತಿದ್ದಾರೆ. ಈಗ ಯಡಿಯೂರಪ್ಪನ ಮೇಲೆ ಹುಸಿ ಪ್ರೇಮ ತೋರಿಸ್ತಿದ್ದೀರಿ. ಇಂತಹ ಹೇಳಿಕೆಗಳಿಂದ ಯಾರಿಗೂ ಲಾಭ ಇಲ್ಲ. ಕಾಂಗ್ರೆಸ್ ಗೂ ಲಾಭ ಇಲ್ಲ, ಜೆಡಿಎಸ್ ಗೂ ಲಾಭ ಇಲ್ಲ, ಬಿಜೆಪಿಗೆ ನಷ್ಟ ಅಂತೂ ಇಲ್ವೇ ಇಲ್ಲ.! ಯಡಿಯೂರಪ್ಪನ ಓಲೈಸಿದ್ರೆ ವೀರಶೈವ ಮತಗಳು ಬರ್ತಾವೆ ಅಂತ ಯೋಚನೆ ಮಾಡ್ತಿದ್ದೀರಿ. ಆದರೆ ವೀರಶೈವ ಸಮಾಜ ಅತ್ಯಂತ ಬುದ್ದಿವಂತ ಸಮಾಜ. ಯಡಿಯೂರಪ್ಪನ ಪರ ಮಾತನಾಡಿದ್ರೆ ಓಟ್ ಸಿಗುತ್ತೆ ಅನ್ಕೊಂಡ್ರೆ ನೀವು ದಡ್ಡರು. ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿ ಇಬ್ಬರೂ ದಡ್ಡರು ಎಂದು ಕಿಡಿಕಾರಿದರು.

ಸ್ವತಃ ಐಟಿ ರೈಡ್ ಅನ್ನು ಯಡಿಯೂರಪ್ಪ ನವರೇ ಸ್ವಾಗತಿಸಿದ್ದಾರೆ. ಇದರಲ್ಲಿ ನಿಮ್ಮದೇನು ಕೊಸರು.? ಇದರಲ್ಲಿ ರಾಜಕೀಯ ಮಾಡುವಂತಹದ್ದು ಬೇಡ‌. ಹಾಗಾದರೇ ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರು ಭ್ರಷ್ಟಾಚಾರದ ಪರನಾ.? ಎಂದು ಹೆಚ್.ವಿಶ್ವನಾಥ್ ಪ್ರಶ್ನಿಸಿದರು.

ಜೈಲಿನಲ್ಲಿದ್ದ ವ್ಯಕ್ತಿ ನೀರಾವರಿ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದಾನೆ. ಲಕ್ಷ್ಮಣರಾವ್ ಪೇಶ್ವೆ ಅಂತ ಒಬ್ಬ ಇದ್ದಾನೆ.  ಈತ ಕಾವೇರಿ ನೀರಾವರಿ ನಿಗಮದ ಇಂಜಿನಿಯರಿಂಗ್ ಚೀಫ್. ಇದೇ ಪೇಶ್ವೆ 8 ತಿಂಗಳು ಜೈಲು ಶಿಕ್ಷೆ ಅನುಭವಿಸಿದ್ದಾನೆ.  ಈತ ಈಗಲೂ ಅಧಿಕಾರದಲ್ಲಿ ಮುಂದುವರಿಯುತ್ತಿದ್ದಾನೆ.  ಅನಿಲ್ ಕುಮಾರ್ ಮಳಲಿ ಅಂತ ನೀರಾವರಿ ಮಂತ್ರಿಗಳ ಸಲಹೆಗಾರ ಇದ್ದಾನೆ. ಎಂಡಿ ಹಂತದ ಹಲವು ಅಧಿಕಾರಿಗಳ ವಿರುದ್ಧ ಕೋಟ್ಯಂತರ ರೂ‌‌.ಗಳ ಅಕ್ರಮದ ಆರೋಪಗಳಿವೆ. ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾಗ 326 ಐಎಎಸ್, ಐಪಿಎಸ್, ಕೆಎಎಸ್ ಅಧಿಕಾರಿಗಳ ವಿರುದ್ಧ ಭ್ರಷ್ಟಾಚಾರದ ಆರೋಪ ಕೇಳಿಬಂದಿತ್ತು. ನಿಮ್ಮ ಸಚಿವ ಸಂಪುಟ ಆ ವಿಚಾರವನ್ನೇ ತಳ್ಳಿಹಾಕಿದ್ರಿ.  ಈಗ ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತೀರಿ.  ನೀವು ಯಾರ ಪರ ಇದ್ದೀರಿ ಅಂತ ಸ್ಪಷ್ಟವಾಗಿ ಹೇಳಿ ಎಂದು ಹೆಚ್.ವಿಶ್ವನಾಥ್ ಪ್ರಶ್ನಿಸಿದರು.

Key words: national politics-H. Vishwanath -criticized -Siddaramaiah

ENGLISH SUMMARY…

Not interested to enter national politics: H. Vishwanath criticizes Siddu’s decision
Mysuru, October 11, 2021 (www.justkannada.in): MLC H. Vishwanath has ridiculed former Siddaramaiah’s hesitancy to enter national politics calling him a coward.
Addressing a press meet in Mysuru today H.Vishwanath said, “H.D. Devegowda who was the Chief Minister of the state became the Prime Minister of India. Narendra Modi who was the Chief Minister of Gujarat thrice became the Prime Minister, and has continued to be in power for the last seven years. It is the supreme post of the country. Siddaramaiah should have told Sonia Gandhi that if he is given Prime Minister’s post he would come to national politics. This shows that Siddaramaiah doesn’t have the courage like Devegowda and Narendra Modi. Then why is he shouting against Modi,” he said.
Keywords: MLC H. Vishwanath/ former CM Siddaramaiah/ coward/ national politics