ರಾಷ್ಟ್ರೀಯ ತೋಟಗಾರಿಕಾ ಮೇಳಕ್ಕೆ ನಾಳೆ ತೆರೆ….

ಬೆಂಗಳೂರು,ಫೆಬ್ರವರಿ,11,2021(www.justkannada.in):  ಇಲ್ಲಿನ ಹೆಸರಘಟ್ಟದ ಐಐಎಚ್ಆರ್ ಆವರಣದಲ್ಲಿ ನಡೆಯುತ್ತಿರುವ ಐದು ದಿನಗಳ ರಾಷ್ಟ್ರೀಯ ತೋಟಗಾರಿಕಾ ಮೇಳ-2021 ನಾಳೆ (ಶುಕ್ರವಾರ) ತೆರೆಬೀಳಲಿದೆ.jk

ಮೊದಲ ಬಾರಿಗೆ ಅಪ್ಲೈನ್ ಮತ್ತು ಅನ್ಲೈನ್ ಮೂಲಕ ಮೇಳ ನಡೆಯುತ್ತಿದೆ. ಈಗಾಗಲೇ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಐವತ್ತು ಸಾವಿರಕ್ಕೂ ಹೆಚ್ಚು ರೈತರು ಭಾಗವಹಿಸಿದ್ದಾರೆ. ಕೊನೆಯ ದಿನವಾದ ನಾಳೆ ಮತ್ತಷ್ಟು ಅಧಿಕ ಸಂಖ್ಯೆಯಲ್ಲಿ ರೈತರು, ಆಸಕ್ತರು ಬರುವ ನಿರೀಕ್ಷೆ ಇದೆ.

ಕೊರೊನಾ ಹಿನ್ನೆಲೆಯಲ್ಲಿ ಐಐಎಚ್ಆರ್ ಸ್ಥಳೀಯ ರೈತರ ಭೇಟಿಗೆ ಮಾತ್ರ ಅವಕಾಶ ಕಲ್ಪಿಸಿತ್ತು. ಹೊರರಾಜ್ಯಗಳ ರೈತರಿಗೆ ಆನ್ಲೈನ್ ಮೂಲಕ ಮೇಳದ ವೀಕ್ಷಣೆಗೆ ಅನುವು ಮಾಡಿಕೊಂಡಿತ್ತು. ಆದರೂ, ನಮ್ಮ ನೆರೆಯ ರಾಜ್ಯಗಳಾದ ಕೇರಳ, ತೆಲಂಗಾಣ, ಆಂಧ್ರ, ತಮಿಳುನಾಡು, ಪುದುಚೇರಿಯಿಂದ ಕೃಷಿಕರು, ತೋಟಗಾರಿಕಾ ಉತ್ಪನ್ನಗಳ ಉದ್ದಿಮೆದಾರರು ಮೇಳಕ್ಕೆ ಖುದ್ದು ಭೇಟಿಕೊಟ್ಟಿದ್ದರು. ಕೇರಳದಿಂದ ಬಹುಸಂಖ್ಯೆಯಲ್ಲಿ ಕೃಷಿ ಆಸಕ್ತರು ಆಗಮಿಸಿದ್ದು ವಿಶೇಷ.

ಉತ್ತರ ಕರ್ನಾಟಕ ಭಾಗದ ರೈತರು ತೋಟಗಾರಿಕೆ ಬೆಳೆಗಳ ಬಗ್ಗೆ ಹೆಚ್ಚು ಆಕರ್ಷಿತಗೊಂಡು, ಸ್ತ್ರೀಶಕ್ತಿ, ಸ್ವಸಹಾಯ ಗುಂಪುಗಳ, ಕೃಷಿ ಆಧಾರಿತ ಸಸ್ವಹಾಯ ಸಂಘಗಳ ಮೂಲಕ ಭೇಟಿಕೊಟ್ಟಿದ್ದರು. ವಿಶೇಷ ಏನೆಂದರೆ, ಕೋವಿಡ್ ನಿರ್ಬಂಧದ ನಡುವೆಯೂ ಈ ಮೇಳಕ್ಕೆ ಅಧಿಕ ಸಂಖ್ಯೆಯಲ್ಲಿ ಮಹಿಳೆಯರು ಮತ್ತು ಮಕ್ಕಳು ಆಗಮಿಸಿದ್ದರು. ರೈತರು, ಸಂರಕ್ಷಿತ ಬೇಸಾಯ, ತೋಟಗಾರಿಕೆ ಬೇಸಾಯ ಪದ್ಧತಿಗಳ ಬಗ್ಗೆ ಸಮಗ್ರವಾಗಿ ಮಾಹಿತಿ ಪಡೆದರು.National Horticulture Fair-end - tomorrow.

ಐಐಎಚ್ಆರ್ನ ಬರೋಬ್ಬರಿ 720 ಎಕರೆ ಭೂ ವಿಸ್ತೀರ್ಣದಲ್ಲಿ ವಿಜ್ಞಾನಿಗಳು ಅವಿಷ್ಕರಿಸಿರುವ ವಿವಿಧ ಜಾತಿಗಳ ಹೂವು-ಹಣ್ಣು-ತರಕಾರಿಗಳನ್ನು ಕಣ್ತುಂಬಿಕೊಂಡರು. ಬಿತ್ತನೆ ಬೀಜ, ರಸಗೊಬ್ಬರ, ಯಂತ್ರೋಪಕರಣ, ಹೂವಿನ ಗಿಡ ಅಲಂಕಾರಿಕ ಪುಷ್ಪಗಳು, ಔಷಧೀಯ ಗಿಡಗಳು, ಸೌಗಂಧಿಕ ಬೆಳೆಗಳು ಹಾಗೂ ಅಣಬೆ ಬೆಳೆಗಳ ಉತ್ಪಾದನೆ ಮತ್ತು ತಂತ್ರಜ್ಞಾನಗಳ ಸಮ್ಮೀಲನವೇ ನಡೆದಿತ್ತು. ಒಂದು ರೀತಿ ಈ ಮೇಳ, ವಿಜ್ಞಾನಿಗಳು-ರೈತರು-ಉದಯೋನ್ಮುಖ ಉದ್ದಿಮೆದಾರರ ದೊಡ್ಡ ಸಂತೆಯಾಗಿ ಮಾರ್ಪಾಟ್ಟಿತು.

Key words: National Horticulture Fair-end – tomorrow.