NASSCOM ಜತೆ ಉನ್ನತ ಶಿಕ್ಷಣ ಪರಿಷತ್ ಒಡಂಬಡಿಕೆ ; ಟ್ಯಾಬ್ಲೆಟ್, ಸ್ಮಾರ್ಟ್ ಫೋನ್ ಮೂಲಕವೂ ಕಲಿಕೆಗೆ ಅವಕಾಶ

 

ಬೆಂಗಳೂರು, ಅ.12, 2021 : (www.justkannada.in news) ಉದ್ಯಮರಂಗವು ನಿರೀಕ್ಷಿಸುವಂತಹ ಕೌಶಲ್ಯಗಳನ್ನು ವಿದ್ಯಾರ್ಥಿಗಳಲ್ಲಿ ಬೆಳೆಸುವ ಮಹತ್ವಾಕಾಂಕ್ಷೆಯಿಂದ ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್ತು ಇಂದು ನಾಸ್ಕಾಂ (ನ್ಯಾಷನಲ್ ಅಸೋಸಿಯೇಷನ್ ಆಫ್ ಸಾಫ್ಟ್ವೇರ್ ಅಂಡ್ ಸರ್ವೀಸ್ ಕಂಪನೀಸ್) ಜೊತೆ ಒಡಂಬಡಿಕೆಗೆ ಸಹಿ ಹಾಕಿತು.

ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರ ಸಮ್ಮುಖದಲ್ಲಿ ವಿಧಾನಸೌಧದಲ್ಲಿ ಮಂಗಳವಾರ ನಡೆದ ಸಮಾರಂಭದಲ್ಲಿ ಇದಕ್ಕೆ ಅಂಕಿತ ಹಾಕಲಾಯಿತು. ಬಳಿಕ ಮಾತನಾಡಿದ ಸಚಿವ ಡಾ.ಅಶ್ವಥ್ ನಾರಾಯಣ್ ಹೇಳಿದಿಷ್ಟು..

ಒಡಂಬಡಿಕೆಯು ರಾಜ್ಯದ ಎಲ್ಲ ಸರಕಾರಿ ಮತ್ತು ಖಾಸಗಿ ಕಾಲೇಜು/ ವಿಶ್ವವಿದ್ಯಾಲಯಗಳಲ್ಲಿ ಓದುವ ವಿದ್ಯಾರ್ಥಿಗಳಿಗೆ ಅನ್ವಯವಾಗಲಿದೆ. ಇದರಿಂದ ಪ್ರತೀವರ್ಷ 5 ಲಕ್ಷ ವಿದ್ಯಾರ್ಥಿಗಳಿಗೆ ಮತ್ತು ಬೋಧಕರಿಗೆ ಲಾಭವಾಗಲಿದೆ. ಈ ಉಪಕ್ರಮದಿಂದಾಗಿ ನಾಸ್ಕಾಂನ `ಫ್ಯೂಚರ್ ಸ್ಕಿಲ್ಸ್ ಪ್ರೈಮ್’ ವೇದಿಕೆಯಲ್ಲಿರುವ ಕೌಶಲ್ಯಾಭಿವೃದ್ಧಿ ಕೋರ್ಸುಗಳು ರಾಜ್ಯದ ಪದವಿ ವಿದ್ಯಾರ್ಥಿಗಳಿಗೆ ಮತ್ತು ಬೋಧಕರಿಗೆ ಆನ್-ಲೈನ್ ಮೂಲಕ ಸುಲಭವಾಗಿ ಲಭ್ಯವಾಗಲಿವೆ. ಈ ಒಡಂಬಡಿಕೆಯಲ್ಲಿ ಗುಣಮಟ್ಟದಿಂದ ಕೂಡಿರುವ ಕೋರ್ಸುಗಳು, ಬೋಧಕ ಸಿಬ್ಬಂದಿಗೆ ತರಬೇತಿ ಮತ್ತು ಮೂಲಸೌಲಭ್ಯ ಸಂಪನ್ಮೂಲಗಳ ಅಭಿವೃದ್ಧಿಗೆ ಆದ್ಯ ಗಮನ ಕೊಡಲಾಗಿದೆ.

ಮೂರು ವರ್ಷಕ್ಕೆ ಮೂರು ಕೋರ್ಸ್

ಈ ಒಡಂಬಡಿಕೆಯ ಫಲವಾಗಿ, ಕಂಪ್ಯೂಟರ್ ವಿಜ್ಞಾನವನ್ನು ಹೊರತುಪಡಿಸಿ ಬೇರೆ ವಿಭಾಗಗಳಲ್ಲಿರುವ ವಿದ್ಯಾರ್ಥಿಗಳಿಗೆ ಮತ್ತು ಬೋಧಕರಿಗೆ ಪದವಿಯ ಮೊದಲನೇ ವರ್ಷದಲ್ಲಿ ಡಿಜಿಟಲ್ ಫ್ಲೂಯೆನ್ಸಿ, ಎರಡನೇ ವರ್ಷದಲ್ಲಿ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ (ಎಐ) ಮತ್ತು ಮೂರನೇ ವರ್ಷದಲ್ಲಿ ಸೈಬರ್ ಸೆಕ್ಯುರಿಟಿ ಕೋರ್ಸುಗಳು ಲಭ್ಯವಾಗಲಿದ್ದು, ಇವುಗಳ ಕಲಿಕೆ ಕಡ್ಡಾಯವಾಗಿದೆ. ಈ ಕೋರ್ಸುಗಳನ್ನು ಮೈಕ್ರೋಸಾಫ್ಟ್ ಮತ್ತು ಸಿಸ್ಕೋ ಕಂಪನಿಗಳು ರೂಪಿಸಿದ್ದು, ಇವುಗಳ ಮೂಲಕ ವಿದ್ಯಾರ್ಥಿಗಳಿಗೆ ಕೌಶಲ್ಯಗಳನ್ನು ಕಲಿಸಲಾಗುವುದು. ಇದನ್ನು ಕಲಿಯಲು ಯಾವುದೇ ಶುಲ್ಕದ ಹೊರೆ ಇರುವುದಿಲ್ಲ.

ವಿದ್ಯಾರ್ಥಿಗಳು ತಮ್ಮ ಬಳಿ ಇರುವ ಟ್ಯಾಬ್ಲೆಟ್ ಮತ್ತು ಸ್ಮಾರ್ಟ್ ಫೋನುಗಳ ಮೂಲಕವೂ ಈ ಆನ್-ಲೈನ್ ಕೋರ್ಸುಗಳನ್ನು ಸುಲಭವಾಗಿ ಕಲಿಯಬಹುದು. ನಾಸ್ಕಾಂನ ಈ ಕೋರ್ಸುಗಳು ಎನ್ಎಸ್ ಕ್ಯೂಎಫ್ (ನ್ಯಾಷನಲ್ ಸ್ಕಿಲ್ಸ್ ಕ್ವಾಲಿಫಿಕೇಶನ್ ಫ್ರೇಂವರ್ಕ್) ರೂಪಿಸಿರುವ ಗುಣಮಟ್ಟ ಮಾನದಂಡಗಳಿಗೆ ಅನುಗುಣವಾಗಿವೆ.

ದೇಶದ ಐ.ಟಿ. ಸೇವಾ ವಲಯವು ಈಗ ವರ್ಷಕ್ಕೆ 150 ಶತಕೋಟಿ ಡಾಲರ್ ವಹಿವಾಟು ನಡೆಸುತ್ತಿದೆ. ಇದು 2025ರ ಹೊತ್ತಿಗೆ 350 ಶತಕೋಟಿ ಡಾಲರ್ ವಹಿವಾಟು ನಡೆಸುವ ಮಟ್ಟಕ್ಕೆ ಬೆಳೆಯಲಿದೆ. ಈಗ ರಾಷ್ಟ್ರದಲ್ಲಿರುವ ಡಿಜಿಟಲ್ ಪ್ರತಿಭಾವಂತರಿಗಿಂತ ಎಂಟು ಪಟ್ಟು ಹೆಚ್ಚಿನ ಬೇಡಿಕೆ ಇದ್ದು, 2024ರ ಹೊತ್ತಿಗೆ ಇದು 20 ಪಟ್ಟು ಹೆಚ್ಚಾಗಲಿದೆ. ಇದನ್ನೆಲ್ಲ ಗಂಭೀರವಾಗಿ ಪರಿಗಣಿಸಿ, ಹೊಸ ಹೆಜ್ಜೆಗಳನ್ನು ಇಡಲಾಗುತ್ತಿದೆ.

ನಾಸ್ಕಾಂ ಪರವಾಗಿ ನವನೀತ್ ಸಮೈಯಾರ್ ಮತ್ತು ದಿನೇಶ್ ಕುಮಾರ್ ಪಾಣಿಗ್ರಾಹಿ ಇದ್ದು, ಒಪ್ಪಂದ ಪತ್ರಗಳನ್ನು ವಿನಿಮಯ ಮಾಡಿಕೊಂಡರು.

ರಾಜ್ಯ ಉನ್ನತ ಶಿಕ್ಷಣ ಪರಿಷತ್ತಿನ ಉಪಾಧ್ಯಕ್ಷ ಪ್ರೊ.ಬಿ.ತಿಮ್ಮೇಗೌಡ, ಕಾರ್ಯನಿರ್ವಾಹಕ ನಿರ್ದೇಶಕ ಪ್ರೊ. ಗೋಪಾಲಕೃಷ್ಣ ಜೋಶಿ, ಆಡಳಿತಾಧಿಕಾರಿ ಡಾ.ಟಿ.ಎನ್.ತಾಂಡವೇಗೌಡ ಈ ಸಂದರ್ಭದಲ್ಲಿ ಉಪಸ್ಥಿತರಿದರು.

key words : Karnataka State Higher Education Council – MoU- with – the National Association of Software and Service Companies -NASSCOM

ENGLISH SUMMARY:

 

Aims to benefit over 5 lakh students and faculty every year : SHEC enters into a pact with NASSCOM to skill align students

 

Bengaluru: To provide industry-aligned skill development experiences to students of higher education, Karnataka State Higher Education Council entered into an MoU with the National Association of Software and Service Companies (NASSCOM) on Tuesday.
The Memorandum of Understanding (MoU) was signed in presence of Dr.C.N.Ashwatha Narayana, the Minister for Higher Education and IT/bt at Vidhana Soudha. Speaking on the occasion, Narayana told, all universities in the state are covered under this MoU will benefit more than 5 lakh students of (studying in govt and private institutions) higher education evry year.
This MoU will allow Skill development courses available on the “Future Skills Prime” platform of NASSCOM to be available to all the students and faculty members of Higher Education Institutions of Karnataka state, Minister Narayana Stated.
“ Skill development needs to focus on aligning skill courses with standards, faculty training, and infrastructure resources. All these three aspects are considered in this initiative. The courses available on “Future Skills Prime” are as per national occupational standards of the National Skills Qualification Framework (NSQF). All these courses will have access online for both faculty and students and those who want to learn these courses can access it on computers as well as tablets /smartphones”, the Minister explained.
Under the MoU, three courses of Digital Fluency, Artificial Intelligence, and Cyber Security will become part of the curriculum. They will be made available free of cost to non-Computer Science students and faculty members of the state. All these courses will have the theory and practical components guarantying the skill development among the learners, the Minister pointed out.


As per study reports, though the Indian IT services industry has the potential to touch $300-350 billion in revenues by 2025, the lack of digital talent would be a major challenge to be resolved in reaching this milestone. The demand for digital skills in India is eight times what is available and will rise 20 times by 2024, he told.
National Education Policy 2020 emphasizes skill development. Undergraduate degree programs will focus on employability skills thereby preparing the state for digital transformation, he said.
Prof.B.Thimmegowda, Vice-Chairman, SHEC, Prof.Gopalakrishna Joshi, ED, SHEC. Tandava Gowda, Administrator, SHEC, Navneet Samaiyar of NASSCOM, Dinesh Kumar Panigrahi of NASSCOM were present.
Key Points of 3 courses:
‘Digital Fluency’ is an introductory course for UG first year focusing on five technologies like Cloud, IoT, Data Analytics, Artificial Intelligence, and Cyber Security and their application in day to day life
‘Artificial Intelligence’ course for UG second year designed by Microsoft is aligned with national occupational standards of NSQF and has provision for certification by Microsoft.
‘Cyber Security’ course for UG second year designed by CISCO is aligned with NSQF has provision for certification by CISCO.