ನಸೀರುದ್ದೀನ್ ಶಾ ಆನಾರೋಗ್ಯ ವದಂತಿಗಳಿಗೆ ಸ್ಪಷ್ಟನೆ ನೀಡಿದ ಪುತ್ರ

Promotion

ಬೆಂಗಳೂರು, ಜುಲೈ 01, 2021 (www.justkannada.in): ಹಿರಿಯ ನಟ ನಸೀರುದ್ದೀನ್ ಶಾ ಆಸ್ಪತ್ರೆಗೆ ದಾಖಲಾಗಿದ್ದಾರೆ.

ನ್ಯುಮೋನಿಯಾದಿಂದ ನಸಿರುದ್ಧೀನ್ ಶಾ ಬಳಲುತ್ತಿದ್ದು, ಆಸ್ಪತ್ರೆಗೆ ದಾಖಲಾದ ಮಾಹಿತಿಯನ್ನು ಅವರ ಮ್ಯಾನೇಜರ್ ಖಚಿತಪಡಿಸಿದ್ದಾರೆ.

ಸದ್ಯ ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ. ನಸೀರುದ್ದೀನ್ ಶಾ ಜೊತೆ ಪತ್ನಿ ರತ್ನ ಪಾಠಕ್ ಮತ್ತು ಅವರ ಮಕ್ಕಳು ಇದ್ದಾರೆ” ಎಂದು ಮ್ಯಾನೇಜರ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

ಅವರ ಪುತ್ರ ವಿವಾನ್ ಶಾ ಕೂಡ ಈ ಕುರಿತು ಮಾಹಿತಿ ನೀಡಿದ್ದು, ಬಾಬಾ ಆರೋಗ್ಯದ ಬಗ್ಗೆ ಹರಿದಾಡುತ್ತಿರುವ ಎಲ್ಲಾ ವದಂತಿ ಸುಳ್ಳು. ಅವರು ಆರೋಗ್ಯವಾಗಿದ್ದಾರೆ ಎಂದು ಪ್ರತಿಕ್ರಿಯೆ ನೀಡುವ ಮೂಲಕ ಸುಳ್ಳು ಸುದ್ದಿಗೆ ಬ್ರೇಕ್ ಹಾಕಿದ್ದಾರೆ.