ಸಂಸದೀಯ ನಾಯಕರಾಗಿ  ಸರ್ವಾನುಮತದಿಂದ ನರೇಂದ್ರ ಮೋದಿ ಆಯ್ಕೆ..

Promotion

ನವದೆಹಲಿ,ಮೇ,25,2019(www.justkannada.in): ಎನ್ ಡಿಎ ಮೈತ್ರಿಕೂಟದ ನಾಯಕರಾಗಿ, ಸಂಸದೀಯ ನಾಯಕರಾಗಿ ನರೇಂದ್ರ ಮೋದಿ ಅವರು ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ.

ಲೋಕಸಭೆಯಲ್ಲಿ ಗೆಲವು ಸಾಧಿಸಿದ ಎನ್ ಡಿಎ ನೂತನ ಸಂಸದರ ಎನ್ ಡಿಎ ಸಂಸದೀಯ  ಮಂಡಳಿ ಸಭೆ ನವದೆಹಲಿಯ ಸಂಸತ್ ಭವನದ ಸೆಂಟ್ರಲ್ ಹಾಲ್ ನಲ್ಲಿ ನಡೆಯುತ್ತಿದ್ದು, ಎನ್ ಡಿಎ ಮೈತ್ರಿಕೂಟದ ನಾಯಕರಾಗಿ ನರೇಂದ್ರ ಮೋದಿ ಆಯ್ಕೆಯಾದರು. ಮೋದಿ ಅವರನ್ನ  ಸಂಸದೀಯ ನಾಯಕರಾಗಿ ಆಯ್ಕೆ ಮಾಡಲು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ  ಪ್ರಸ್ತಾಪಿಸಿದರು. ಪ್ರಸ್ತಾಪವನ್ನ ರಾಜನಾಥ್ ಸಿಂಗ್ ಸೇರಿ ಎಲ್ಲಾ ಎನ್ ಡಿಎ ಸಂಸದರು ಅನುಮೋದಿಸಿದರು.

ಈ ವೇಳೆ ಬಿಜೆಪಿ ಹಿರಿಯ ನಾಯಕರಾದ ಎಲ್ ಕೆ ಅಡ್ವಾಣಿ, ಮುರುಳಿ ಮನೋಹರ ಜೋಶಿ, ಎನ್ ಡಿಎ ಮೈತ್ರಿ ಕೂಟದ ನಾಯಕರು ಉಪಸ್ಥಿತರಿದ್ದರು. ಎನ್ ಡಿಎ ಸಂಸದೀಯ ಮಂಡಳಿ ಸಭೆ ಬಳಿಕ ಎನ್ ಡಿಎ ನಾಯಕರ ಜತೆ ಮೋದಿ ಅವರು ಚರ್ಚೆ ನಡೆಸಲಿದ್ದಾರೆ. ನಂತರ ಸರ್ಕಾರ ರಚನೆ ಕುರಿತು ರಾಷ್ಟ್ರಪತಿ ಅವರನ್ನ ಭೇಟಿ ಮಾಡಲಿದ್ದಾರೆ.

Key words: Narendra Modi unanimously elected parliamentary leader

#Narendra Modi #elected #parliamentary #leader