ನಂಜನಗೂಡು ಟಿಹೆಚ್ಓ ಆತ್ಮಹತ್ಯೆ ಪ್ರಕರಣ: ಪರಿಹಾರ ಮೊತ್ತ 50 ಲಕ್ಷಕ್ಕೆ ಏರಿಕೆ: ತನಿಖೆ ನಡೆಸಿ ವಾರದಲ್ಲಿ ವರದಿ ನೀಡುವಂತೆ ಸಿಎಂ ಸೂಚನೆ…

Promotion

ಬೆಂಗಳೂರು,ಆ,21,2020(www.justkannada.in):  ನಂಜನಗೂಡು ತಾಲ್ಲೂಕು ಆರೋಗ್ಯಾಧಿಕಾರಿ ನಾಗೇಂದ್ರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಿನ್ನೆ ಘೋಷಣೆ ಮಾಡಲಾಗಿದ್ದ 30 ಲಕ್ಷ ರೂ. ಪರಿಹಾರ ಮೊತ್ತವನ್ನ 50 ಲಕ್ಷ.ರೂ ಮೊತ್ತಕ್ಕೆ ಏರಿಕೆ ಮಾಡಲಾಗಿದೆ.Nanjangud –THO- suicide case- compensation- increase- Rs 50 lakh-CM – BS yeddyurappa

ಘಟನೆಗೆ ಸಂಬಂಧಿಸಿದಂತೆ ನಿಷ್ಪಕ್ಷಪಾತವಾಗಿ ಹಾಗೂ ಸಮಗ್ರವಾಗಿ ತನಿಖೆ ನಡೆಸಿ ಏಳು ದಿನಗಳೊಳಗೆ ವರದಿ ನೀಡುವಂತೆ ಸಿಎಂ ಬಿಎಸ್ ಯಡಿಯೂರಪ್ಪ ಸೂಚನೆ ನೀಡಿದ್ದಾರೆ. ಹಾಗೆಯೇ ಕುಟುಂಬ ಅವಲಂಬಿತರಿಗೆ ಅನುಕಂಪದ ಆಧಾರದ ಮೇಲೆ ನೇಮಕಾತಿಯನ್ನ ನೀಡುವುದು.  ಸರ್ಕಾರದಿಂದ ದೊರಯಬಹುದಾದ ಸೌಲಭ್ಯಗಳನ್ನ ವಿಳಂಬ ಮಾಡದೆ ಒದಗಿಸುವಂತೆ ಸಿಎಂ ಬಿಎಸ್ ಯಡಿಯೂರಪ್ಪ ಸೂಚನೆ ನೀಡಿದ್ದಾರೆ.Nanjangud –THO- suicide case- compensation- increase- Rs 50 lakh-CM – BS yeddyurappa

ಟಿಹೆಚ್ ಒ ನಾಗೇಂದ್ರ ಅವರ ಸಾವಿಗೆ ವಿಷಾದ ವ್ಯಕ್ತಪಡಿಸಿರುವ ಸಿಎಂ ಬಿಎಸ್ ಯಡಿಯೂರಪ್ಪ, ನಾಗೇಂದ್ರ ಅವರ ಕುಟುಂಬಕ್ಕೆ ನೋವನ್ನ ಭರಿಸುವ ಶಕ್ತಿಯನ್ನ ಭಗವಂತ ನೀಡಲಿ ಎಂದು ಪ್ರಾರ್ಥಿಸಿದ್ದಾರೆ.Nanjangud –THO- suicide case- compensation- increase- Rs 50 lakh-CM – BS yeddyurappa

ಹಾಗೆಯೇ ಕೋವಿಡ್ ಕರ್ತವ್ಯದಲ್ಲಿರುವ ಸರ್ಕಾರಿ ನೌಕರರು ಯಾವುದೇ ಒತ್ತಡಗಳಿದ್ದಲ್ಲಿ ಧೃತಿಗೆಡುವ ಅವಶ್ಯಕತೆ ಇಲ್ಲ. ಸರ್ಕಾರ ನಿಮ್ಮ ಜತೆ ಇದೆ. ನಿಮ್ಮಲ್ಲಿ ಯಾವುದೇ ಸಮಸ್ಯಗಳಿದ್ದರೇ ಮೇಲಾಧಿಕಾರಿಗಳ ಗಮನಕ್ಕೆ ತಂದು ಪರಿಹರಿಸಿಕೊಳ್ಳಬೇಕು ಎಂದು ಸಿಎಂ ಬಿಎಸ್ ವೈ ಸಲಹೆ ನೀಡಿದ್ದಾರೆ.

Key words: Nanjangud –THO- suicide case- compensation- increase- Rs 50 lakh-CM – BS yeddyurappa