ನಮೋ ದಿವಸ್ ನಮಸ್ಕಾರ-ಫೆಸ್ಟಿವಲ್ ಆಫ್ ಡೆವಲಪ್ ಮೆಂಟ್ಸ್ ಕಾರ್ಯಕ್ರಮ ಯಶಸ್ವಿ : ಶಾಸಕ ಎಸ್.ಎ.ರಾಮದಾಸ್

ಮೈಸೂರು,ನವೆಂಬರ್,11,2020(www.justkannada.in) : ನರೇಂದ್ರ ಮೋದಿ ಹುಟ್ಟುಹಬ್ಬದ ಅಂಗವಾಗಿ ನಡೆದ ನಮೋ ದಿವಸ್ ನಮಸ್ಕಾರ-ಫೆಸ್ಟಿವಲ್ ಆಫ್ ಡೆವಲಪ್ ಮೆಂಟ್ಸ್ ಕಾರ್ಯಕ್ರಮ ಯಶಸ್ವಿಯಾಗಿ ನಡೆಯುತ್ತಿದೆ ಎಂದು ಶಾಸಕ ಎಸ್.ಎ.ರಾಮದಾಸ್ ಹೇಳಿದರು.kannada-journalist-media-fourth-estate-under-loss

ಬುಧವಾರ ನಗರದ ಖಾಸಗಿ ಹೋಟೆಲ್ ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಶಾಸಕ ಎಸ್.ಎ. ರಾಮದಾಸ್ ಮಾಹಿತಿ ನೀಡಿದರು.

ಮೋದಿಯವರ 70ನೇ  ಹುಟ್ಟುಹಬ್ಬದ ದಿನದಂದು ಎರಡು ತಿಂಗಳ ಆನ್ ಲೈನ್ ಕಾರ್ಯಕ್ರಮವನ್ನು  ಸಾಹಿತಿ ಎಸ್.ಎಲ್.ಭೈರಪ್ಪ ಉದ್ಘಾಟಿಸಿದ್ದರು. ಕೇಂದ್ರ ಸರ್ಕಾರದ ಯೋಜನೆಗಳ ಕುರಿತು ಸಲಹೆ, ಅಭಿಪ್ರಾಯ ಹಂಚುಕೊಳ್ಳುವ ಕೆಲಸ ಮಾಡಲಾಗುತ್ತಿದೆ. ಆನ್ ಲೈನ್ ಹಾಗೂ ಆಫ್ ಲೈನ್ ಮೂಲಕ ಮಾಡಲಾಗಿತ್ತು ಎಂದರು.

ಅತ್ಯುತ್ತಮ ಸಲಹೆ ನೀಡಿದ ಅಭ್ಯರ್ಥಿಗೆ 50 ಸಾವಿರ ರೂ. ನಗದು ಬಹುಮಾನ

ಅತ್ಯುತ್ತಮ ಸಲಹೆ ನೀಡಿದ ಅಭ್ಯರ್ಥಿಗೆ 50 ಸಾವಿರ ರೂ. ನಗದು ಬಹುಮಾನ. ಹಾಗೂ 10 ಮಂದಿಗೆ ಒಟ್ಟು 2.75 ಲಕ್ಷ ರೂ. ಬಹುಮಾನ ನೀಡಲಾಗುತ್ತಿದೆ. ಮೊದಲ ಬಹುಮಾನ ಪಡೆದವರಿಗೆ ಆತ್ಮನಿರ್ಭರ ಭಾರತೀಯ ಎಂದು ಪ್ರದಾನಿ ಮೋದಿಯವರನ್ನ ಭೇಟಿ ಮಾಡಿಸುವ ಕಾರ್ಯ ಹಮ್ಮಿಕೊಂಡಿದ್ದೇವೆ ಎಂದು ಹೇಳಿದರು.

ಉತ್ತಮ ಸಲಹೆಗಳನ್ನು ಪೈಲೆಟ್ ಪ್ರಾಜೆಕ್ಟ್ ಆಗಿ ಕಾರ್ಯರೂಪಕ್ಕೆ ತರಲಾಗುವುದು

ಸಾಮಾಜಿಕ ಜಾಲತಾಣದ ಮೂಲಕ ಭಾರತೀಯ ಎಲ್ಲ ಭಾಷೆಗಳಲ್ಲಿ ತಿಳಿಸುವ ಕೆಲಸ ಮಾಡಿದ್ದೇವೆ. ಒಟ್ಟು 70 ಲಕ್ಷ ಜನಕ್ಕೆ ಇದು ತಲುಪಿದೆ. ಉತ್ತಮ ಸಲಹೆಗಳನ್ನು ಮೈಸೂರಿನಲ್ಲಿ ಪೈಲೆಟ್ ಪ್ರಾಜೆಕ್ಟ್ ಆಗಿ ಕಾರ್ಯ ರೂಪಕ್ಕೆ ತರಲಾಗುವುದು ಎಂದರು.

ಇನ್ನು ಐದು ದಿನಗಳ ಈ ಕಾರ್ಯಕ್ರಮದಲ್ಲಿ ಭಾಗವಹಿಸಬಹುದಾಗಿದೆ‌. ನಮೋ ದಿವಸ್ ಕಾರ್ಯಕ್ರಮದಲ್ಲಿ ಭಾಗವಹಿಸಿ ದೇಶದ ಅಭಿವೃದ್ಧಿ ಅಮೂಲ್ಯ ಸಲಹೆ ನೀಡುವಂತೆ ಸುದ್ಧಿಗೋಷ್ಠಿಯಲ್ಲಿ ಶಾಸಕ ಎಸ್ ಎ ರಾಮದಾಸ್ ಮನವಿ ಮಾಡಿದರು.Namo-Divas-Namaskara-Festival-Development- Measures-Program-Successful-Legislator-S.A.Ramadas

English summary…

Festival of Development programme successful – MLA S.A. Ramadas
Mysuru, Nov. 11, 2020 (wwwjustkannada.in): At a press meet held in a private hotel in Mysuru, MLA S.A. Ramadas informed that the ‘Namo Diwas Namaskar-Festival of Developments’ Programme, held as part of PM Narendra Modi’s birthday celebrations is being held successfully.
The two-month long online programme being held to observe the 70th birthday of Prime Minister Sri Narendra Modi was inaugurated by litterateur Sri S.L. Byrappa. As part of the programme, efforts are made to collect suggestions, opinions and views about various government of India programmes from citizens.
A sum of Rs. 50,000 cash prize is given to the candidate who gives the best suggestion. A total sum of Rs.2.75 lakh will be distributed as cash prize for 10 persons. The first prize winner will be declared as ‘Atmanirbhar Bharatiya’ and will get an opportunity to meet PM Modi, he said.

key words : Namo-Divas-Namaskara-Festival-Development- Measures-Program-Successful-Legislator-S.A.Ramadas