ಹರಿಹರ ಕ್ಷೇತ್ರದಲ್ಲಿ 15 ಸಾವಿರ ಮತದಾರರ ಹೆಸರು ನಾಪತ್ತೆ-ಕಾಂಗ್ರೆಸ್ ಶಾಸಕ ಎಸ್.ರಾಮಪ್ಪ ಆರೋಪ.

Promotion

ದಾವಣಗೆರೆ,ಡಿಸೆಂಬರ್,1,2022(www.justkannada.in): ಹರಿಹರ ವಿಧಾನಸಭಾ ಕ್ಷೇತ್ರದಲ್ಲಿ 15 ಸಾವಿರ ಮತದಾರರ ಹೆಸರು ನಾಪತ್ತೆಯಾಗಿದೆ ಎಂದು ಕಾಂಗ್ರೆಸ್ ಶಾಸಕ ಎಸ್.ರಾಮಪ್ಪ ಆರೋಪ ಮಾಡಿದ್ದಾರೆ.

ಈ ಕುರಿತು ಇಂದು ಮಾತನಾಡಿದ ಶಾಸಕ ಎಸ್.ರಾಮಪ್ಪ, ಹರಿಹರ ಕ್ಷೇತ್ರದಲ್ಲಿ 2.9 ಲಕ್ಷ ಮತದಾರರಿದ್ದಾರೆ.   ಈಗ ಮತದಾರರ ಸಂಖ್ಯೆ 1.90ಕ್ಕೆ ಇಳಿದಿದೆ.  ಮತದಾರರ ವರ್ಗಾವಣೆ ಮತ್ತು ಸಾವು  ಸೇರಿ 5 ರಿಂದ 6 ಸಾವಿರ ಆಗಬಹುದು. ಆದರೆ ಇದ್ದಕ್ಕಿದಂತೆ 15 ಸಾವಿರ ಮತದಾರರ ಹೆಸರು ನಾಪತ್ತೆಯಾಗಿದ್ದು ಸಾಕಷ್ಟು ಅನುಮಾನ ಮೂಡಿಸುತ್ತಿದೆ ಎಂದಿದ್ದಾರೆ.

ಡಿಸೆಂಬರ್ 8 ರಂದು ಮತದಾರರ ಪಟ್ಟಿ ಪರಿಷ್ಕರಣೆಗೆ ಕೊನೆ ದಿನವಾಗಿದೆ.  ಮತದಾರರ ಹೆಸರು ನಾಪತ್ತೆ ಆಗಿದ್ದ ಬಗ್ಗೆ ಪರಿಶೀಲನೆ ಮಾಡುತ್ತೇವೆ ಎಂದು ಹರಿಹರ ಕ್ಷೇತ್ರದ ಕಾಂಗ್ರೆಸ್ ಶಾಸಕ ಎಸ್.ರಾಮಪ್ಪ ತಿಳಿಸಿದರು.

Key words: Names – 15,000 voters – missing – Harihar constituency-Congress MLA -S. Ramappa