“ನಾಮಧಾರಿಗೌಡ ಜನಾಂಗ 2ಎಗೆ ಸೇರ್ಪಡೆ. ರಾಜಕಾರಣಿಗಳ ನಂಬದೆ ಕಾನೂನಿನ ಹೋರಾಟ ಮಾಡಿ” : ಎಂಎಲ್ ಸಿ ಎಚ್.ವಿಶ್ವನಾಥ್ ಸಲಹೆ

Promotion

ಮೈಸೂರು,ಜನವರಿ,01,2021(www.justkannada.in): ಅಖಿಲ ನಾಮಧಾರಿಗೌಡ ಜನಾಂಗವನ್ನು 2ಎಗೆ ಸೇರಿಸಲು ಕಾನೂನಿನ ತೊಡಕಿದೆ.  ಹಾಗಾಗಿ, ರಾಜಕಾರಣಿಗಳನ್ನ ನಂಬದೆ ಅರ್ಜಿ ಹಾಕಿ ಕಾನೂನಿನ ಹೋರಾಟ ಮಾಡಿ ಎಂದು ವಿಧಾನಪರಿಷತ್ ಸದಸ್ಯ ಎಚ್.ವಿಶ್ವನಾಥ್ ಹೇಳಿದ್ದಾರೆ.jkಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, 1994ರಲ್ಲಿ ನಾಮಧಾರಿ‌ಗೌಡ ಸಭೆಗಳಲ್ಲಿ ನನ್ನ ವಿರುದ್ದವೇ ದೇವೇಗೌಡರು ಆರೋಪ ಮಾಡಿದ್ದರು. ಮತ್ತೆ 2ಎಗೆ ಸೇರಿಸುತ್ತೇನೆ ಎಂದು ಭರವಸೆ ನೀಡಿದ್ದಾರೆ ಎಂದು ಟೀಕಿಸಿದ್ದಾರೆ.

ದೇವೇಗೌಡರೇ ಮುಖ್ಯಮಂತ್ರಿಯಾಗಿದ್ದರು, ಪ್ರಧಾನಿಯಾಗಿದ್ದರು ಯಾಕೇ ಮಾಡಲಿಲ್ಲ. ಕುಮಾರಸ್ವಾಮಿ ಎರಡು ಬಾರಿ ಮುಖ್ಯಮಂತ್ರಿ ಆಗಿದ್ದರು ಅವರು ಏಕೆ‌ 2ಎ ಮಾಡಲಿಲ್ಲ. ಓಟ್ ಬ್ಯಾಂಕ್ ಗೋಸ್ಕರ ಏನು ಬೇಕಾದರೂ ಹೇಳಬಹುದು. ಈಗ ಸಾ.ರಾ.ಮಹೇಶ್ ಸಹ ಅದನ್ನೆ ಹೇಳುತ್ತಿದ್ದಾರೆ ಎಂದು ಕಿಡಿಕಾರಿದರು.Namadarigowda,Addition to 2A,politicians,Don't believe,Fight,law,MLC H.Vishwanath,Advice

ಸತ್ಯ ಎಲ್ಲರಿಗೂ ತಿಳಿದಿದೆ. ಆದರೆ, ಯಾರು ಏನು ಮಾಡುವುದಿಲ್ಲ. ಅಖಿಲ ನಾಮಧಾರಿಗೌಡ ಜನಾಂಗವನ್ನು ಪ್ರವರ್ಗ 2 ಎ ಗೆ ಸೇರಿಸಲು ಕಾನೂನಿನ ತೊಡಕಿದೆ. ಅರ್ಜಿ ಹಾಕಿ ಹೋರಾಟ ಮಾಡಿ‌ ನಾಮಧಾರಿಗೌಡ ಜನಾಂಗಕ್ಕೆ ಸಲಹೆ ನೀಡಿದ್ದಾರೆ.

key words : Namadarigowda-Addition to 2A-politicians-Don’t believe-Fight-law-MLC H.Vishwanath-Advice