ಆ್ಯಸಿಡ್ ದಾಳಿ ಆರೋಪಿ ನಾಗೇಶ್ ನ ಸುಳಿವು ನೀಡಿದ್ದು ಆಟೋ ಚಾಲಕ: ಪೊಲೀಸ್ ತಂಡಕ್ಕೆ ಬಹುಮಾನ ಘೋಷಣೆ

Promotion

ಬೆಂಗಳೂರು,ಮೇ,14,2022(www.justkannada.in):  ಪ್ರೀತಿ ನಿರಾಕರಿಸಿದ ಯುವತಿ ಮೇಲೆ ಆ್ಯಸಿಡ್ ಎರಚಿ ತಲೆಮರಿಸಿಕೊಂಡಿದ್ಧ ಆರೋಪಿ ನಾಗೇಶ್ ನ ಸುಳಿವು ನೀಡಿದ್ದು ಆಟೋ ಚಾಲಕನಂತೆ. ಈ ಬಗ್ಗೆ ಬೆಂಗಳೂರು ಪೊಲೀಸ್ ಆಯುಕ್ತ ಕಮಲ್ ಪಂತ್ ಮಾಹಿತಿ ನೀಡಿದ್ದಾರೆ.

ಈ ಕುರಿತು ಸುದ್ಧಿಗೋಷ್ಠಿ ನಡೆಸಿದ ಪೊಲೀಸ್ ಆಯುಕ್ತ ಕಮಲ್ ಪಂತ್, ಆರೋಪಿ ನಾಗೇಶನ  ಸುಳಿವು ನೀಡಿದ್ದು ಆಟೋ ಡ್ರೈವರ್.  ಭಿತ್ತಿಪತ್ರ ನೋಡಿ ಆಟೋಡ್ರೈವರ್ ಪೊಲೀಸರಿಗೆ ಮಾಹಿತಿ ನೀಡಿದ್ದರು. ಏಪ್ರಿಲ್ 28 ರಂದು ಯುವತಿ ಮೇಲೆ ಆ್ಯಸಿಡ್ ದಾಳಿ ನಡೆದಿತ್ತು. ಈ ಬಗ್ಗೆ ಕಾಮಾಕ್ಷಿ ಪಾಳ್ಯದಲ್ಲಿ ಕೇಸ್ ದಾಖಲಾಗಿತ್ತು. ನಿನ್ನೆ ತಿರುವಣ್ಣಾಮಲೈನಲ್ಲಿ ಆರೋಪಿ ಬಂಧನವಾಗಿದೆ. ನಾಗೇಶ್ ಯಾವುದೇ ಸುಳಿವು ನೀಡದೇ ನಾಪತ್ತೆಯಾಗಿದ್ದ. ನಿನ್ನೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಡಿಸಿಪಿ ಸಂಜೀವ್ ಪಾಟೀಲ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿ ನಾಗೇಶ್ ನನ್ನ ಬಂಧಿಸಲಾಗಿದೆ. ಪಶ್ಚಿಮ ವಿಭಾಗದ ಪೊಲೀಸರಿಗೆ ಧನ್ಯವಾದ ಅರ್ಪಿಸುವುದಾಗಿ ತಿಳಿಸಿದರು. ನಾಗೇಶ್ ನನ್ನು ಹಿಡಿದ ತಂಡಕ್ಕೆ 2 ಲಕ್ಷ ರೂ. ಬಹುಮಾನ ಘೋಷಣೆ ಮಾಡುವುದಾಗಿ ತಿಳಿಸಿದರು.

ನಾಗೇಶ್ ಪೇಟ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ . ಕಂಪನಿ ಲೆಟರ್ ಹೇಡ್ ಬಳಸಿ ಮೇಲ್ ಮಾಡಿ ಕಂಪನಿ ಕೆಲಸಕ್ಕೆಂದು ಆ್ಯಸಿಡ್ ತರಿಸಿಕೊಂಡಿದ್ದ. 2020ರಲ್ಲೂ ಇದೇ ರೀತಿ ಆ್ಯಸಿಡ್ ತರಿಸಿಕೊಂಡಿದ್ದ. ಆಗ ಯುವತಿ ಮೇಲಿನ ಪ್ರೀತಿಯಿಂದ ಆ್ಯಸಿಡ್ ಬಳಕೆ ಮಾಡಿರಲಿಲ್ಲ. ಆದರೆ ಯುವತಿ ನೀನು ನನ್ನ ಅಣ್ಣನಂತೆ ಎಂದಿದ್ದಳು. ಹೀಗಾಗಿ ಯುವತಿ ಸಿಗಲ್ಲ ಎಂದು ಏಪ್ರಿಲ್ 28 ರಂದ ದಾಳಿ ಮಾಡಿದ್ದಾನೆ.   ಬಳಿಕ ಅಣ್ಣನಿಗೆ ಕರೆ ಮಾಡಿದ್ಧ ಆರೋಪಿ ನಾಗೇಶ್ ಈ ವಿಚಾರ ತಿಳಿಸಿದ್ದಾನೆ. ಈ ವೇಳೆ  ಠಾಣೆಗೆ ಹೋಗಿ ಶರಣಾಗುವಂತೆ ಅಣ್ಣ ಹೇಳಿದ್ದ. ನಾಗೇಶ್  ಹೊಸಕೋಟೆಗೆ ಹೋಗಿ ಆತ್ಮಹತ್ಯೆಗೆ ಶರಣಾಗಲು ನಿರ್ಧರಿಸಿದ್ದ. ಆದರೆ ಮನಸು ಬದಲಾಯಿಸಿ ತಿರುವಣ್ಣಮಲೈಗೆ ಹೋಗಿ ತಲೆಮರಿಸಿಕೊಂಡಿದ್ದ ಎಂದು ಕಮಲ್ ಪಂತ್ ಮಾಹಿತಿ ನೀಡಿದರು.

Key words: Nagesh -accused –arrest-acid attack – Police Commissioner – Kamal Pant