ಮೈಸೂರಿನಲ್ಲಿ ನಾಡದೇವಿ ಚಾಮುಂಡೇಶ್ವರಿ ವರ್ಧಂತಿ ಉತ್ಸವ:  ರಾಜವಂಶಸ್ಥ ಯದುವೀರ್  ದಂಪತಿ ಭಾಗಿ…

Promotion

ಮೈಸೂರು,ಜು,13,2020(www.justkannada.in): ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಇಂದು ನಾಡದೇವಿ ಚಾಮುಂಡೇಶ್ವರಿ ವರ್ಧಂತಿ ಉತ್ಸವ ಹಿನ್ನೆಲೆ, ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಉತ್ಸವಕ್ಕೆ ಚಾಲನೆ ನೀಡಿದರು.jk-logo-justkannada-logo

ರಾಜ್ಯದಲ್ಲಿ ಕೊರೋನಾ ಮಹಾಮಾರಿ ಹರಡುತ್ತಿರುವ ಹಿನ್ನಲೆ ಅದ್ದೂರಿ ಆಚರಣೆಗೆ ಜಿಲ್ಲಾಡಳಿತ ಬ್ರೇಕ್ ಹಾಕಿದ್ದು, ಹೀಗಾಗಿ ಸರಳವಾಗಿ ಸಾಂಪ್ರದಾಯಿಕವಾಗಿ  ವರ್ದಂತಿ  ಉತ್ಸವ ನಡೆಯಿತು. ವರ್ದಂತಿ ಉತ್ಸವಕ್ಕೆ ಯದುವೀರ್ ದಂಪತಿ ಚಾಲನೆ ನೀಡಿದರು.Nadadevi Chamundeshwari -Vardhanthi -Festival -Mysore.-Yadavir

ಈ ವೇಳೆ ರಾಜವಂಶಸ್ಥ ಯದುವೀರ್ ಹಸಿರು ಪೇಟ ಸಾಂಪ್ರದಾಯಿಕ ಉಡುಪಿನಲ್ಲಿ ಕಂಗೊಳಿಸಿದರು. ದೇವಾಲಯದ ಆವರಣದಲ್ಲಿ ಉತ್ಸವ ಪ್ರದಕ್ಷಿಣೆ ಹಾಕಿತು. ಉತ್ಸವದ ಜೊತೆ ಯದುವೀರ್ ದಂಪತಿ ಪ್ರದಕ್ಷಿಣೆ ಹಾಕಿದರು. ಕೊರೊನಾ ಹಿನ್ನಲೆ ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ  ವಿಧಿಸಲಾಗಿದೆ.

Key words: Nadadevi Chamundeshwari -Vardhanthi -Festival -Mysore.-Yadavir