ಸೋಂಕು ಗುಣಮುಖರೊಬ್ಬರ ವಿಕ್ಟೋರಿಯ ಆಸ್ಪತ್ರೆಯ “ಪಾಸಿಟಿವ್” ಸ್ಟೋರಿ..

ಬೆಂಗಳೂರು,ಜು,13,2020(www.justkannada.in): ಇಂಡಿಯನ್ ಆರ್ಮಿಯಲ್ಲಿ ಟೆಕ್ನಿಷಿಯನ್ ಆಗಿರುವ ಆದಿತ್ಯ ಗಣೇಶಯ್ಯ ಎಂಬುವವರಿಗೆ ಕಳೆದ ತಿಂಗಳು ಕೊರೋನಾ ಸೋಂಕು ದೃಢಪಟ್ಟಿತ್ತು.  ಈ ವೇಳೆ ಅವರಿಗೆ ಆದ ಅನುಭವವನ್ನ ಬಿಚ್ಚಿಟ್ಟಿದ್ದಾರೆ.

ಕೊರೋನಾ ಪಾಸಿಟಿವ್ ಕಂಡು ಬಂದ ನಂತರ ಅವರು ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದರು. ಈ ವೇಳೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಹೇಗಿತ್ತು ಎಂಬುದರ ಬಗ್ಗೆ ಗುಣಾತ್ಮಕವಾಗಿ ವಿವರಿಸಿದ್ದಾರೆ. ಎಲ್ಲಾ ಮಾಧ್ಯಮಗಳಲ್ಲೂ ಆಸ್ಪತ್ರೆಯ ಬಗ್ಗೆ ನೆಗೆಟಿವ್ ಸ್ಟೋರಿ ಬರುತ್ತಿದೆ. ಆದರೆ ಇಲ್ಲಿ ಆದಿತ್ಯ ಗಣೇಶಯ್ಯ ಅವರು ಸರ್ಕಾರಿ ಆಸ್ಪತ್ರೆಗಳಲ್ಲೂ ಉತ್ತಮ ಗುಣಮಟ್ಟದ ಚಿಕಿತ್ಸೆ ಸಿಗುತ್ತದೆ ಎಂಬುದನ್ನ ಪಾಸಿಟಿವ್ ಆಗಿ ತಿಳಿಸಿದ್ದಾರೆ.  ಅವರು ಹಂಚಿಕೊಂಡಿರುವ ಅನುಭವ ಹೀಗಿದೆ ನೋಡಿ…

13 ಜೂನ್ 2020 ಯ೦ದು ಕಛೇರಿಯಿ೦ದ  ನಾನು ಮನೆಗೆ ಬಂದಾಗ  ನನ್ನ ಹೆಂಡತಿ ಜ್ವರವಿದ್ದ ಕಾರಣ ಕೆಂಗೇರಿಯ ಫೀವರ್ ಕ್ಲೀನ್ ಗೆ ಗೆ ಹೋಗಿದ್ದವು. ಅಲ್ಲಿನ ವೈದ್ಯರು ಚಿಕಿತ್ಸೆ ನೀಡಿದರು. ನಂತರ 17 ರಂದು ನನ್ನ ಮಗಳಿಗೆ ಜ್ವರ ಬಂತು. ಈ ವೇಳೆ ನಾವು ಕೆಂಗೇರಿ  ಬಿಜಿಎಸ್ ಗ್ಲೋಬಲ್ ಆಸ್ಪತ್ರೆಗೆ ಹೋದಾಗ ಕೋವಿಡ್ ಟೆಸ್ಟ್ ಮಾಡಲು ವೈದ್ಯರು ಸೂಚಿಸಿದರು.

ಇದಾದ ಬಳಿಕ ಮೂರು ಜನ  ಕೋವಿಡ್ ಟೆಸ್ಟ್ ಮಾಡಿಸಿದವು. ಜೂನ್ 18 ರಂದು ಕೋವಿಡ್ ವರದಿ ಬಂದಿದ್ದು ನನ್ನ ಮಗಳಿಗೆ ಮತ್ತು ನಮಗೆ ಕೊರೋನಾ ಸೋಂಕಿರುವುದು ದೃಢಪಟ್ಟಿತ್ತು. ಬಳಿಕ  ಮೂವರನ್ನ ಒಂದೇ ಆಸ್ಪತ್ರೆಗೆ ದಾಖಲಿಸಿ ಎಂದು ಮನವಿ ಮಾಡಿದ್ದವು. ಹೀಗಾಗಿ ಮೂವರನ್ನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದರು.

10 ದಿನಗಳ ಕಾಲ ಆಸ್ಪತ್ರೆಯಲ್ಲಿ ಇದ್ದವು.  ಆಸ್ಪತ್ರೆಯಲ್ಲಿ ಸ್ವಚ್ಛತೆ ಉತ್ತಮವಾಗಿ ನಿರ್ವಹಣೆ ಮಾಡಿದ್ದರು. ಪಿಪಿಇ ಶ್ಯೂಟ್ ಧರಿಸಿದ್ದ ವೈದ್ಯರು ಮತ್ತು ನರ್ಸಿಂಗ್ ಸಿಬ್ಬಂದಿಗಳು  ದಿನಕ್ಕೆ ನಾಲ್ಕುಬಾರಿ ಬಂದು ಆರೋಗ್ಯ ವಿಚಾರಿಸುತ್ತಿದ್ದರು. ಆಸ್ಪತ್ರೆಯಲ್ಲಿ 10 ದಿನಗಳ ಕಾಲ ಇದ್ದವು ಚಿಕಿತ್ಸೆ ಊಟೋಪಚಾರ ಚೆನ್ನಾಗಿತ್ತು. ಬಳಿಕ ಜೂನ್ 27 ರಂದು ನಮ್ಮನ್ನ ಆಸ್ಪತ್ರೆಯಿಂದ ಬಿಡುಗಡೆ ಮಾಡಿದರು.   ಸದ್ಯ ನಾವು 14 ದಿನಗಳ ಕಾಲ ಹೋಂ ಕ್ವಾರಂಟೈನ್ ನಲ್ಲಿ ಇದ್ದೇವೆ.Victoria Hospital- "Positiv- Story - Infectionist.

ಕೊರೋನಾ ಒಂದು ನಿಕೃಷ್ಟ ದರ್ಜೆಯ ಚೀನಾ ವೈರಸ್ ಆಗಿದ್ದು ಯಾವುದೇ ಕಾರಣಕ್ಕೂ ಯಾರೂ ಸಹ ಗಾಬರಿಯಾಗಬಾರದು. ಸೋಂಕಿಗೆ ಒಳಗಾಗುತ್ತಿರುವವರ ಪೈಕಿ ಶೇ.90ರಷ್ಟು ಜನರಿಗೆ ಸೋಂಕಿನ ಲಕ್ಷಣಗಳೆ ಇಲ್ಲ ಎಂದು ವರದಿಯಾಗಿದೆ. ದೇಶದಲ್ಲಿ ಗುಣಮುಖರಾಗುವವರ ಸಂಖ್ಯೆ ಶೇ.60ರಷ್ಟಿದೆ. ಚಿಕಿತ್ಸೆ ವೇಳೆ ಸಣ್ಣ ಲೋಪದೋಷಗಳಾಗಬಹುದು ಅದಕ್ಕೆ ತಲೆಕೆಡಿಸಿಕೊಳ್ಳದೇ ಗುಣಮುಖರಾಗುವತ್ತ ಚಿಂತನೆ ಮಾಡಬೇಕಾಗುತ್ತದೆ ಎಂದು ಆದಿತ್ಯ ಗಣೇಶಯ್ಯ ಸಲಹೆ ನೀಡಿದ್ದಾರೆ.

Key words: Victoria Hospital- “Positiv- Story – Infectionist.