ಮೈಸೂರು ದಸರಾ ಮಹೋತ್ಸವ: ತಾಲೀಮು ಆರಂಭಿಸಿದ ಕ್ಯಾಪ್ಟನ್ ಅರ್ಜುನ ನೇತೃತ್ವದ ಗಜಪಡೆ…

Promotion

ಮೈಸೂರು,ಆ,28,2019(www.justkannada.in):  ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಆಗಮಿಸಿರುವ ದಸರಾ ಗಜಪಡೆಯ ಆನೆಗಳಿಗೆ ಇಂದಿನಿಂದ ತಾಲೀಮು ಆರಂಭವಾಗಿದೆ.

ನಗರದ ಕೆ.ಆರ್.ವೃತ್ತ, ಸಯ್ಯಾಜಿರಾವ್ ರಸ್ತೆ ಮಾರ್ಗ ಬನ್ನಿಮಂಟಪವರೆಗೆ ಗಜಪಡೆಗೆ ಇಂದು ತಾಲೀಮು ನಡೆಸಲಾಯಿತು. ವಾಹನಗಳ ಶಬ್ಧ ಹಾಗೂ ಜನಸಂದಣಿ ಪರಿಚಯಿಸಲು . ಕ್ಯಾಪ್ಟನ್ ಅರ್ಜುನ ನೇತೃತ್ವದ ಆನೆಗಳಿಗೆ ರಿಹರ್ಸಲ್ ನಡೆಸಲಾಯಿತು.  ಅರಮನೆಯಿಂದ ಬನ್ನಿಮಂಟಪವರೆಗೆ  5 ಕಿಲೋಮೀಟರ್ ವರೆಗೆ ದಸರಾ ಆನೆಗಳು ಹೆಜ್ಜೆ ಹಾಕಿದವು.

ಮೈಸೂರಿನ ರಾಜಬೀದಿಯಲ್ಲಿ ಸಾಲು ಸಾಲಾಗಿ ಸಾಗಿದ ಗಜಪಡೆ ಕಂಡು ಮೈಸೂರಿಗರು ಸೆಲ್ಫಿ ಕ್ಲಿಕ್ಕಿಸಿಕೊಂಡರು. ಇನ್ನು ದಸರಾ ಗಜಪಡೆಯ ತಾಲೀಮಿನ ವೇಳೆ ಬಿಗಿ ಪೊಲೀಸ್ ಭದ್ರತೆ ವಹಿಸಲಾಗಿತ್ತು.

ಸೆಪ್ಟಂಬರ್ 28ರಂದು ಮೈಸೂರು ದಸರಾ ಮಹೋತ್ಸವ ಆರಂಭವಾಗಲಿದ್ದು ಈಗಾಗಲೇ ಮೊದಲ ಹಂತದ ಆರು ಆನೆಗಳ ತಂಡ ಆರಮನೆಗೆ ಆಗಮಿಸಿ ಬೀಡುಬಿಟ್ಟಿವೆ.
key words: mysoreDasara  -Captain -Arjuna -team -started -workout ..