ಮೈಸೂರಿನಲ್ಲೊಂದು ಆತಂಕಕಾರಿ ಬೆಳವಣಿಗೆ: ‘ಆಧಾರ್’ ಗಾಗಿ ಸೀಲ್ಡೌನ್ ನಿಯಮವೇ ಉಲ್ಲಂಘನೆ…

kannada t-shirts

ಮೈಸೂರು,ಜು,2,2020(www.justkannada.in): ಕೊರೋನಾ ಸೋಂಕಿತರಿದ್ದ ಹಿನ್ನೆಲೆ  ಸೀಲ್ ಡೌನ್ ಮಾಡಿಲಾಗಿದ್ದ ಪ್ರದೇಶದಲ್ಲೇ ಆಧಾರ್ ಕೇಂದ್ರ ಕಾರ್ಯನಿರ್ವಹಿಸುತ್ತಿದ್ದು ಮೈಸೂರು ಮಹಾನಗರ ಪಾಲಿಕೆ  ಸೀಲ್ ಡೌನ್ ನಿಯಮ ಉಲ್ಲಂಘಿಸಿರುವ ಆರೋಪ ಕೇಳಿ ಬಂದಿದೆ.Mysore-violation - Sealdown -Rule - Aadhaar

ಮೈಸೂರಿನ ವಿಜಯನಗರದಲ್ಲಿ ಈ ಆತಂಕಕಾರಿ ಬೆಳವಣಿಗೆ ಕಂಡು ಬಂದಿದೆ. ವೈದ್ಯರ ಕುಟುಂಬದಲ್ಲೊಬ್ಬರಿಗೆ ಪಾಸಿಟಿವ್ ಬಂದಿರುವ ಹಿನ್ನಲೆ  ಮೈಸೂರು ಮಹಾನಗರ ಪಾಲಿಕೆ ಎರಡು ರಸ್ತೆಗಳನ್ನ ಸೀಲ್ಡೌನ್ ಮಾಡಿದೆ. ಮಾಜಿ ಸಚಿವ ಜಿ.ಟಿ ದೇವೇಗೌಡ ನಿವಾಸದ ಪಕ್ಕದಲ್ಲಿ ಸೀಲ್ಡೌನ್ ರಸ್ತೆ ಇದೆ.

ಈ ನಡುವೆ ಸೋಂಕಿತರ ಮನೆಯ ಕೂಗಳತೆ ದೂರದಲ್ಲಿಯೇ ಈ ಆಧಾರ್ ಕೇಂದ್ರ ಕಾರ್ಯನಿರ್ವಹಿಸುತ್ತಿದೆ. ಆಧಾರ್ ಕಾರ್ಡ್ ಪಡೆಯಲು ಬ್ಯಾರಿಕೇಡ್ ಮೂಲಕವೇ ಜನ ತೆರಳುತ್ತಿದ್ದು, ಅಲ್ಲಿನ ಸಿಬ್ಬಂದಿ ಬ್ಯಾರಿಕೇಡ್ ಮೂಲಕವೇ ಒಬ್ಬೊಬ್ಬರನ್ನ ಒಳಬಿಡುತ್ತಿದ್ದಾರೆ. ಆಧಾರ್ ಪಡೆಯಲು ಬರುತ್ತಿರುವ ಜನರನ್ನ ನಿಯಂತ್ರಿಸಲು  ಸಿಬ್ಬಂದಿ ಹರಸಾಹಸ ಪಡುತ್ತಿರುವ ದೃಶ್ಯ ಕಂಡು ಬಂದಿದೆ.

ಇನ್ನು ಈ ಬಗ್ಗೆ  ಪ್ರಶ್ನಿಸಿದರೇ ಪಾಲಿಕೆಯಿಂದ ಅನುಮತಿ ಪಡೆದು ಸೀಲ್ಡೌನ್ ಏರಿಯಾದಲ್ಲೇ ಆಧಾರ್ ವಿತರಿಸಲಾಗುತ್ತಿದೆ ಎಂದು ಕೇಂದ್ರದ ಮುಖ್ಯಸ್ಥರು ಹೇಳುತ್ತಿದ್ದಾರೆ. ಹೀಗಾಗಿ  ಆಧಾರ್  ಕಾರ್ಡ್ ಪಡೆಯುವುದಕ್ಕಾಗಿ ಸೀಲ್ ಡೌನ್ ಏರಿಯಾದಲ್ಲೇ ಬರುತ್ತಿದ್ದು, ಈ ಮೂಲಕ ಮೈಸೂರು ಮಹಾನಗರ ಪಾಲಿಕೆ ಸೀಲ್ಡೌನ್ ನಿಯಮವನ್ನೇ ಉಲ್ಲಂಘಿಸಿದೆ ಎಂಬ ಆರೋಪ ಕೇಳಿ ಬಂದಿದೆ. ಜತೆಗೆ  ಸೀಲ್ಡೌನ್ ಪ್ರದೇಶದಲ್ಲೇ ಖಾಸಗಿ ಕಟ್ಟಡ ಕಾಮಗಾರಿ ನಡೆಯುತ್ತಿದೆ ಎನ್ನಲಾಗುತ್ತಿದೆ.

Key words: Mysore-violation – Sealdown -Rule – Aadhaar

website developers in mysore