ಬಸವೇಶ್ವರ ದೇವಾಲಯದ ನಂದಿ ವಿಗ್ರಹಕ್ಕೆ ಬೆಂಕಿ ಹಚ್ಚಿದ ದುಷ್ಕರ್ಮಿಗಳು….

mysore- Victims - fire - Nandi statue-Basaveshwara Temple.
Promotion

ಮೈಸೂರು,ಜೂ,6,2020(www.justkannada.in): ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲೂಕಿನ ಕುರಗಲ್ಲು ಗ್ರಾಮದಲ್ಲಿರುವ ಬಸವೇಶ್ವರ ದೇವಾಲಯದ ನಂದಿ ವಿಗ್ರಹಕ್ಕೆ ದುಷ್ಕರ್ಮಿಗಳು ಬೆಂಕಿ ಹಚ್ಚಿರುವ ಘಟನೆ ನಡೆದಿದೆ.mysore- Victims - fire - Nandi statue-Basaveshwara Temple.

ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರ  ಸಮೀಪದ ಕುರಗಲ್ಲು ಗ್ರಾಮದ ಬಸವೇಶ್ವರ ದೇವಾಲಯದಲ್ಲಿ ಈ ದುಷ್ಕೃತ್ಯ ನಡೆದಿದೆ.ದೇವಾಲಯದ ನಂದಿ ವಿಗ್ರಹಕ್ಕೆ ಪ್ಲಾಸ್ಟಿಕ್ ಹಾಗೂ ಕಾಗದಗಳನ್ನು ಬಳಸಿ ವಿಗ್ರಹಕ್ಕೆ ಬೆಂಕಿ ಹಾಕಲಾಗಿದೆ. ದೇವಾಲಯದಲ್ಲಿ ಮಾಂಸದ ತ್ಯಾಜ್ಯವನ್ನು ಹಾಕಿ, ಕಿಡಿಗೇಡಿಗಳು ಅಪವಿತ್ರ ಗೊಳಿಸಿದ್ದಾರೆ.

ಈ ಹಿಂದೆ ದೇವಾಲಯದ ವಿಗ್ರಹ ಎರಡು ಬಾರಿ ಅಪಹರಿಸಾಲಾಗಿತ್ತು, ಇದೀಗ ದೇವಾಲಯವನ್ನ ಅಪವಿತ್ರ ಗೊಳಿಸಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ. ಕೂಡಲೇ ಕಿಡಿಗೇಡಿಗಳನ್ಜು ಬಂಧಿಸುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

Key words: mysore- Victims – fire – Nandi statue-Basaveshwara Temple.