ಮಾತೃ ಭಾಷೆಯೇ ಸರ್ವಸ್ವ, ಕಾರಣ ನಮ್ಮ ಭಾಷೆ ನಮ್ಮ ಐಡೆಂಟಿಯನ್ನು ತೋರಿಸುತ್ತೆ : ವೆಂಕಯ್ಯನಾಯ್ಡು

 

ಮೈಸೂರು, ಜು.13, 2019 : (www.justkannada.in news) ನಮ್ಮ ಮಾತೃ ಭಾಷೆಯನ್ನು ಉಳಿಸುವ ಕೆಲಸ ಆಗಬೇಕು. ಒಂದು ಹಂತದ ವರೆಗೆ ನಮ್ಮ ಭಾಷೆಯಲ್ಲೇ ಮಾತನಾಡಬೇಕು ಎಂದು ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಅಭಿಪ್ರಾಯಪಟ್ಟರು.

ಮೈಸೂರಿನ ಭಾರತೀಯ ಭಾಷಾ ಸಂಸ್ಥಾನದ ಸ್ವರ್ಣ ಜಯಂತಿ ಕಾರ್ಯಕ್ರಮದಲ್ಲಿ ಮಾತೃಭಾಷೆಯ ಮಹತ್ವದ ಬಗ್ಗೆ ಭಾಷಣ ಮಾಡಿದ ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಹೇಳಿದಿಷ್ಟು……..

ಹಳ್ಳಿಯವನಿಗೆ ಇಂಗ್ಲಿಷ್ನನಲ್ಲಿ ಮಾತನಾಡಿಸಿದರೆ ಅವನಿಗೆ ಏನು ಅರ್ಥ ಆಗುತ್ತದೆ. ಪಿರಿಯಾಪಟ್ಟಣದಲ್ಲಿ ತಂಬಾಕು ಬೆಳೆಯುವ ರೈತನಿಗೆ ಇಂಗ್ಲಿಷ್ ಅರ್ಥ ಆಗುತ್ತ. ಇಂಗ್ಲಿಷ್ ಕಾನ್ವೇಂಟ್ ನಲ್ಲಿ ಓದಿದರೇ ದೊಡ್ಡವಾರಾಗುತ್ತೇವೆ ಎನ್ನುವುದು ತಪ್ಪು ಕಲ್ಪನೆ. ಕರ್ನಾಟಕ ಸಿಎಂ ಎಚ್.ಡಿ.ಕುಮಾರಸ್ವಾಮಿ ಯಾವ ಕಾನ್ವೆಂಟ್ನಲ್ಲಿ ಓದಿದ್ರೂ. ಪ್ರಧಾನಿ ಮೋದಿ ಯಾವು ಕಾನ್ವೆಂಟ್ ನೋಡಿದ್ರೂ. ಪಕ್ಕದ ರಾಜ್ಯದ ಸಿಎಂ ಯಾವ ಕಾನ್ವೆಂಟ್ ಗೆ ಹೋಗಿದ್ರು. ನಾನು ಯಾವಾ ಕಾನ್ವೆಂಟ್ ಗೆ ಹೋಗಿದ್ದೆ..? ಈಗ ಉಪ ರಾಷ್ಟ್ರಪತಿ ಆಗಿಲ್ವೇ..! ನಮಗೆ ಮೊದಲು ಮಾತೃ ಭಾಷೆ ಮುಖ್ಯ.

ಮಮ್ಮಿ ಡ್ಯಾಡಿ ಅನ್ನುವುದು ಅಂತರಾಳದಿಂದ ಬರುವ ಶಬ್ದ ಅಲ್ಲ. ಅಮ್ಮ ಅನ್ನುವುದು ನಮ್ಮ ಅಂತರಾಳದಿಂದ ಬರುತ್ತದೆ.
ನ್ಯಾಯಾಲಯಗಳಲ್ಲೂ ಸ್ಥಳೀಯ ಭಾಷೆಗೆ ಆಧ್ಯತೆ ನೀಡಬೇಕು. ಯಾಕಂದ್ರೆ ನ್ಯಾಯಾಲಯದಲ್ಲಿನ ವಾದ ವಿವಾದಗಳು ಸುಲಭವಾಗಿ ಅರ್ಥವಾಗಬೇಕಿದೆ. ಯಾವುದೇ ಗೊಂದಲವಾಗಬಾರದು. ಇಲ್ಲವಾದರೆ ವಕೀಲರು ವಾದ ಮಾಡುವುದು ಕಕ್ಷಿದಾರನಿಗೆ ಎನು ಅರ್ಥವಾಗೋದಿಲ್ಲ. ಸಮಸ್ಯೆಗಳು ಹೆಚ್ಚಾಗ್ತಾವೆ. ಪ್ರತಿಯೊಬ್ಬರಿಗೂ ಮಾತೃಭಾಷೆ ಬಹಳ ಮುಖ್ಯ.

ಪ್ರತಿಯೊಂದು ಅಂಗಡಿಮುಂಗಟ್ಟು, ಹೋಟೆಲ್ ಎಲ್ಲಾ ಕಡೆ ಮೊದಲು ಮಾತೃ ಭಾಷೆಯ ಫಲಕವಿರಲಿ. ನಂತರ ಬೇರೆ ಭಾಷೆಗಳಿಗೆ ಆದ್ಯತೆ ಕೊಡಿ. ಎಲ್ಲಾ ಭಾಷೆಯನ್ನೂ ಕಲಿಯಿರಿ‌. ಯಾವ ಭಾಷೆಯನ್ನೂ‌ ವಿರೋದ ಮಾಡಬೇಡಿ. ಆದ್ರೆ ನಿಮ್ಮ ಭಾಷೆ ಮಾತ್ರ ಮರಿಬೇಡಿ. ಭಾಷೆಯಲ್ಲಿ ನಮ್ಮ ಸಂಸ್ಕ್ರತಿ ಅಡಗಿರುತ್ತದೆ. ನಮ್ಮ ಭಾಷೆ ನಮ್ಮ ಐಡೆಂಟಿಯನ್ನು ತೋರಿಸುತ್ತೆ. ಭಾರತೀಯ ಭಾಷೆಗಳಿಗೆ ತನ್ನದ ಆದ ವೈಜ್ಞಾನಿಕ ನೆಲಗಟ್ಟು ಇದೆ. ನಮ್ಮ ಭಾಷೆಯನ್ನು ಸಂರಕ್ಷಣೆ ಮಾಡಬೇಕು‌. ಆಗ ಮಾತ್ರ ಮಾತೃ ಭಾಷೆ ಉಳಿಯಲು ಸಾಧ್ಯ.

key words : mysore-vice-president-venkaiaha.naidu-mother-tounge-learn-mother-language