ತಲೆಗೆ ಹೆಲ್ಮೆಟ್ ಹೇಗೋ ಹಾಗೆ, ಮಾಸ್ಕ್‌ ನಮಗೆ ಜೀವ ಭದ್ರತೆ ಒದಗಿಸುತ್ತದೆ.

Promotion

 

ಮೈಸೂರು, ಜ.07, 2022 : (www.justkannada.in news ) ಸರಕಾರಗಳು ಅಥವಾ ತಜ್ಞರ ಸಮಿತಿ ಕೋವಿಡ್ ನಿಯಂತ್ರಣಕ್ಕೆ ಏನೇ ಕ್ರಮಗಳನ್ನು ಕೈಗೊಂಡರೂ ಅದು ಯಶಸ್ವಿಯಾಗಬೇಕಾದರೆ ಸಾರ್ವಜನಿಕರ ಸಹಭಾಗಿತ್ವ ತುಂಬಾ ಮುಖ್ಯ ಎಂದು ಮೈಸೂರು ವಿಶ್ವವಿದ್ಯಾಲಯದ ಮುಖ್ಯ ವೈದ್ಯಾಧಿಕಾರಿ ಡಾ.ಎಂ.ಎಸ್.ಬಸವರಾಜ್ ತಿಳಿಸಿದರು.

ಮೈಸೂರು ವಿಶ್ವವಿದ್ಯಾಲಯದ ವತಿಯಿಂದ ಮಾನಸ ಗಂಗೋತ್ರಿಯ ಜೆನೆಟಿಕ್ಸ್ ಅಂಡ್ ಜೀನೋಮಿಕ್ಸ್ ಹಾಗೂ ಪ್ರಾಣಿಶಾಸ ವಿಭಾಗದ ಸಹಯೋಗದಲ್ಲಿ ವಿಜ್ಞಾನಭವನದಲ್ಲಿ ‘ಆ್ಯಂಟಿಜೆನಿಕ್ ವೇರಿಯೇಶನ್ ಇನ್ ಸಾರ್ಸ್-ಕೋವ್-2 ಅಂಡ್ ವ್ಯಾಕ್ಸಿನ್’ ಎಸ್ಕೇಪ್ ಕುರಿತು ನಡೆದ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕಳೆದ ಎರಡು ವರ್ಷಗಳಿಂದ ಇಡೀ ಜಗತ್ತನ್ನೇ ಕೋವಿಡ್ ತಲ್ಲಣಗೊಳಿಸಿದೆ. ಭಾರತಕ್ಕೆ ಇದೀಗ ಮೂರನೇ ಅಲೆ ಭೀತಿ ಉಂಟಾಗಿದೆ. ಡಿ.28ರಂದು ದೇಶದಲ್ಲಿ 6 ಸಾವಿರ ಪ್ರಕರಣ ಇತ್ತು. ಆದರೆ, ಜ.6ರಂದು 1.14 ಲಕ್ಷಕ್ಕೆ ಏರಿಕೆಯಾಗಿದೆ. ಇಡೀ ಜಗತ್ತಿನಲ್ಲಿ 300 ಮಿಲಿಯನ್ ಜನರು ಕೊರೊನಾ ಸೋಂಕಿಗೆ ತುತ್ತಾಗಿದ್ದಾರೆ. 5.5 ಮಿಲಿಯನ್ ಮಂದಿ ಕೋವಿಡ್‌ಗೆ ಬಲಿಯಾಗಿದ್ದಾರೆ. ಕಳೆದ ವರ್ಷ ಇದೇ ತಿಂಗಳು 8 ಲಕ್ಷ ಇದ್ದ ಕೊರೊನಾ ಕೇಸು ಈ ವರ್ಷ 25 ಲಕ್ಷ ಆಗಿದೆ. ಲಸಿಕೆ ನಮಗೆ ಇಮ್ಯೂನಿಟಿ ಶಕ್ತಿ ನೀಡುತ್ತದೆ ಹೊರತು ಅದು ಆ್ಯಂಟಿಬಯಟಿಕ್ ಅಲ್ಲ ಎಂದು ಹೇಳಿದರು.

ವಿಜ್ಞಾನಿಗಳು ಕೋವಿಡ್ ಮಾರ್ಗಸೂಚಿ ಪಾಲಿಸಿ ಎಂದರೆ ಸಾರ್ವಜನಿಕರಿಗೆ ಅದು ಸಿಲ್ಲಿ ಅನ್ನಿಸುತ್ತದೆ. ಅಮೆರಿಕಾ ಕೊರೊನಾ 5ನೇ ಅಲೆಯನ್ನು ಎದುರಿಸುತ್ತಿದೆ. ಪ್ರತಿದಿನ 9 ಸಾವಿರಕ್ಕೆ ಇಳಿದಿದ್ದ ಪ್ರಕರಣ ಇದೀಗ 7 ಲಕ್ಷಕ್ಕೆ ಏರಿಕೆಯಾಗಿದೆ. 33 ಕೋಟಿ ಜನಸಂಖ್ಯೆ ಇರುವ ಯುಎಸ್‌ಎಗೆ 7 ಲಕ್ಷ ಪ್ರಕರಣ ಕಂಡು ಬರುತ್ತಿರುವಾಗ ಭಾರತದ ಜನಸಂಖ್ಯೆ 130 ಕೋಟಿ. ನಮ್ಮಲ್ಲಿ ಎಷ್ಟು ಪ್ರಕರಣ ಕಾಣಿಸಿಕೊಳ್ಳಬಹುದು ಅಂದಾಜಿಸಿ. ಜೊತೆಗೆ ಕೊರೊನಾ, ಓಮಿಕ್ರಾನ್ ಬಗ್ಗೆ ಖಂಡಿತವಾಗಿ ನಿರ್ಲಕ್ಷ್ಯ ಸಲ್ಲದು ಎಂದು ಹೇಳಿದರು.

ಕೋವಿಡ್ ರೋಗಲಕ್ಷಣ ರಹಿತರು ಎಲ್ಲೆಂದರಲ್ಲಿ ಅಲೆದರೆ ಸೋಂಕಿನ ಪ್ರಮಾಣ ಮತ್ತಷ್ಟು ಹೆಚ್ಚುತ್ತದೆ. ಅಲ್ಲದೆ, ಜನದಟ್ಟಣೆ ಕೊರೊನಾ ಹರಡುವ ಪ್ರಮುಖ ತಾಣ ಎಂಬುದನ್ನು ಮರೆಯಬಾರದು. ತಲೆಗೆ ಹೆಲ್ಮೆಟ್ ಹೇಗೆ ರಕ್ಷಣೆ ನೀಡುತ್ತದೆಯೋ ಅದೇ ರೀತಿ ಮಾಸ್ಕ್‌ ನಮಗೆ ಜೀವ ಭದ್ರತೆಯನ್ನು ಒದಗಿಸುತ್ತದೆ. ತೈವಾನ್ ಹಾಗೂ ನ್ಯೂಜಿಲ್ಯಾಂಡ್‌ನಲ್ಲಿ ಕೇಸು ಕಂಡು ಬಂದ ತಕ್ಷಣ ಸೋಂಕಿನ ಮ್ಯಾಪಿಂಗ್ ಮಾಡಿ ಸಂಪರ್ಕಿರನ್ನು ತಪಾಸಣೆ ಮಾಡಿ ಹೊರಗಡೆ ಬಿಡದೆ ಚಿಕಿತ್ಸೆ ನೀಡುತ್ತಾರೆ. ಫಿಲಿಪೈನ್ಸ್‌ನಲ್ಲಿ ಕೊರೊನಾ ನಿಯಮ ಪಾಲಿಸದಿದ್ದರೆ ಬಂಧನ ಮಾಡಲಾಗುತ್ತದೆ ಎಂದರು.

ಜೆನೆಟಿಕ್ಸ್ ಅಂಡ್ ಜೀನೋಮಿಕ್ಸ್ ವಿಭಾಗದ ಮುಖ್ಯಸ್ಥೆ ಪ್ರೊ.ಎಸ್.ಎಸ್.ಮಾಲಿನಿ, ಡಾ.ಪ್ರತಿಭಾ ಕೆ.ಪಿ., ಡಾ.ಚೈತ್ರಾ ಪಿ.ಟಿ., ಡಾ.ಸೋಮಣ್ಣ ಎ.ಎನ್., ಕೌಶಿಕ್ ಪೊನ್ನಣ್ಣ ಸಿ.ಎಸ್. ಲಕ್ಷ್ಮಿ ಕೆ. ಹಾಗೂ ಸಂಶೋಧನಾರ್ಥಿಗಳು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.

key words : Mysore-university-zoology-webinar-covid

ENGLISH SUMMARY…

Mask protects our life, like a helmet that protects our head
Mysuru, January 7, 2022 (www.justkannada.in): “Whatever measures the government or the experts’ committee may take, cooperation of the public is very important if those rules want to become successful,” opined M.S. Basavaraj, Chief Medical Officer, University of Mysore.
He participate in a lecture program on the topic, “Antigenic Variation in SARS-COV-2 and Vaccine,” Escape, jointly organized by the Genetics and Genomics and Zoology Departments, University of Mysore, held at the Vignana Bhavana, in Manasagangotri campus.
“The COVID-19 Pandemic that shook the entire world has entered its third wave. There were 6,000 cases on December 28, which increased to 1.14 lakh by January 6. More than 300 million people have been infected and 5.5 million have lost their lives due to the pandemic. There were 8 lakh cases last year which has increased to 25 lakh this year. The COVID vaccine provides us immunity, but it is not an antibiotic,” he said.
“If the scientists ask us to follow guidelines we feel it as silly. Whereas it is true that America is facing the 5th wave. The daily cases which were 9,000 have increased to 7 lakh now there. When a country like the USA
which has a 33 crore population is getting 7 lakh cases daily, what would be the situation in our country which has a 130 crore population. Above this, we should not neglect COVID or Omicron,” he said.
He informed, masks protect our lives and asked everyone to wear masks properly. “While helmet protects our head, masks protect our lives,” he added. “In countries like Taiwan and New Zealand when a COVID case is found, they find out the infected person through mapping and quarantine him and treat them. In Phillippines those who won’t follow COVID-appropriate rules will be arrested,” he opined.
Prof. S.S. Malini, Head, Genetics and Genomics Department, Dr. Pratibha K.P., Dr. Chaitra P.T., Dr. Somanna A.N., Koushik Ponnanna C.S., Lakhsmi K., and research students participated in the lecture program.
Keywords: COVID/ Lecture program/ Genetics and Genomics Department/ University of Mysore/ Masks protect our lives