ಮೈಸೂರು ವಿವಿ: ಆ.11ರಂದು ಯುವಜನ ಮಹೋತ್ಸವ.

ಮೈಸೂರು,ಆಗಸ್ಟ್,9,2022(www.justkannada.in): ಮೈಸೂರು ವಿಶ್ವವಿದ್ಯಾನಿಲಯದ ವತಿಯಿಂದ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಆಗಸ್ಟ್ 11ರಂದು ಮಹಾರಾಜ ಕಾಲೇಜು ಮೈದಾನದಲ್ಲಿ ಬೆಳಿಗ್ಗೆ 11 ಗಂಟೆಗೆ ಯುವಜನ ಮಹೋತ್ಸವ ಮತ್ತು ವಿವಿ ಎಂಜಿನಿಯರಿಂಗ್ ಕಾಲೇಜು ಹಾಗೂ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳನ್ನು ಸಿಎಂ ಬಸವರಾಜ್ ಬೊಮ್ಮಾಯಿ ಉದ್ಘಾಟಿಸಲಿದ್ದಾರೆ ಎಂದು ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ತಿಳಿಸಿದ್ದಾರೆ.

ನಗರದ ಕ್ರಾರ್ಡ್ ಹಾಲ್‌ ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥ್ ನಾರಾಯಣ್, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್, ನಟ ಯಶ್, ಸಂಸದರಾದ ಪ್ರತಾಪಸಿಂಹ, ವಿ.ಶ್ರೀನಿವಾಸ ಪ್ರಸಾದ್, ಶಾಸಕರಾದ ಜಿ.ಟಿ.ದೇವೇಗೌಡ, ಸಾ.ರಾ ಮಹೇಶ್ ಭಾಗವಹಿಸಲಿದ್ದಾರೆ. ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಅವರಿಂದ ಸಂಗೀತ ಕಾರ್ಯಕ್ರಮ ಇರಲಿದೆ ಎಂದರು.

ಏನೆಲ್ಲಾ  ಕಾರ್ಯಕ್ರಮ:

ಸ್ಕೂಲ್ ಆಫ್ ಎಂಜಿನಿಯರಿಂಗ್ ಕಾಲೇಜಿನ ತಂತ್ರಜ್ಞಾನ ಭವನದ ಕಟ್ಟಡ, ಕೋರ್ಸ್‌ ಗಳು ಹಾಗೂ ವಿದ್ಯಾರ್ಥಿನಿಲಯ, ಈ ವಿಶ್ವವಿದ್ಯಾನಿಲಯದ ಫಾರ್ಮಸಿ ಕಾಲೇಜು ಕಟ್ಟಡ, ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ಸುವರ್ಣ ಮಹೋತ್ಸವ ಕಟ್ಟಡ, ಭೂಗೋಳಶಾಸ್ತ್ರ ಮತ್ತು ಭೂವಿಜ್ಞಾನ ವಿಭಾಗಗಳ ವಿಸ್ತರಿಸಿದ ಮೊದಲನೇ ಮಹಡಿ ಕಟ್ಟಡ, ಗಣಕ ವಿಜ್ಞಾನ ಅಧ್ಯಯನ ವಿಭಾಗದ ನವೀಕೃತ ಸಭಾಂಗಣ,  ಪ್ರಾಚ್ಯವಿದ್ಯಾ ಸಂಶೋಧನಾಲಯ ಮತ್ತು ಮಿಥಿಕ್ ಸೊಸೈಟಿ ಕಾರ್ಯಕ್ರಮ ಹಾಗೂ ಗ್ರಹನಿಧಿ ಕೃತಿ ಬಿಡುಗಡೆ, ಬಸವೇಶ್ವರ ಅಧ್ಯಯನ, ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರದ ಕಟ್ಟಡ ಉದ್ಘಾಟನೆ, ವಿಶ್ವಕೋಶ 8 ಮತ್ತು 9ನೇ ಸಂಪುಟ ಅನಾವರಣ, ಸೆಂಟರ್ ಆಫ್ ಎಕ್ಸಲೆನ್ಸ್, ಸ್ಯಾಪ್, ಐಐಎಂ ಮತ್ತು ಇಸಿ (ವೃತ್ತಿ ಆಧಾರಿತ ಮತ್ತು ಕೌಶಲ್ಯ ಅಭಿವೃದ್ಧಿ ಕೋರ್ಸುಗಳ ಉದ್ಘಾಟನೆ ನೆರವೇರಲಿದೆ. ಎರಡು ಕಾರ್ಯಕ್ರಮವನ್ನು ಸಿಎಂ ನೆರವೇರಿಸಲಿದ್ದು, ಉಳಿದವುಗಳನ್ನು ವರ್ಚುವಲ್ ಮೂಲಕ ಉದ್ಘಾಟಿಸಲಿದ್ದಾರೆ ಎಂದು ಮಾಹಿತಿ ನೀಡಿದರು. ಕುಲಸಚಿವ ಪ್ರೊ.ಆರ್.ಶಿವಪ್ಪ ಇದ್ದರು.

Key words: Mysore University- Youth Festival – August 11.

ENGLISH SUMMARY…

UoM: Yuvajana Mahotsava on Aug. 11
Mysuru, August 9, 2022 (www.justkannada.in): The University of Mysore has organized the Yuvajana Mahotsava on August 11, as part of the 75th Indian Independence day celebrations. Chief Minister Basavaraj Bommai will inaugurate the Mahotsav, the University of Mysore Engineering College, and other development programs.
Addressing a press meet held at the Crawford Hall today, Prof. G. Hemantha Kumar, Vice-Chancellor, University of Mysore, informed that the Higher Education Minister Dr. C.N. Ashwathanarayana, District In-charge Minister S.T. Somashekar, Sandalwood actor Yash, MP Pratap Simha, V.Srinivas Prasad, MLAs G.T. Devegowda, Sa. Ra. Mahesh and others will participate in the program. A musical program by renowned music director Arjun Janya has also been organized on the occasion.
Programs:
Inauguration of the School of Engineering College building, courses, Pharmacy College building, Golden Jubilee building of the Communications and Journalism Department, extended the first floor of the Department of Geology and Archeology Departments, renovated auditorium of the Computer Science Research Center, Oriental Sciences Research Center and Mythic Society programs and Gruhanidhi book release, Basaveshwara Research, Study and Extension Center building, releasing of the Encyclopedia 8 and 9th editions, Center of Excellence Sap, IIM and EC (inauguration of the vocational based and skill development courses). While the CM will inaugurate two programs, he will inaugurate the others virtually.
Registrar R. Shivappa was present at the press meet.
Keywords: University of Mysore/ Prof. G. Hemantha Kumar/ August 11/ CM inauguration