ಮೈಸೂರು ಯೂನಿವರ್ಸಿಟಿ ಸಬ್ ಡೊಮೈನ್ ಹ್ಯಾಕ್ ಗೆ ವಿಫಲ ಯತ್ನ…

Promotion

 

ಮೈಸೂರು, ಮೇ 14, 2019 : (www.justkannada.in news) : ಪ್ರತಿಷ್ಠಿತ ಮೈಸೂರು ವಿಶ್ವವಿದ್ಯಾನಿಲಯದ ವೆಬ್ ಸೈಟ್ ಹ್ಯಾಕ್ ಮಾಡುವ ವಿಫಲ ಯತ್ನ ನಡೆದಿರುವುದು ಇದೀಗ ಬೆಳಕಿಗೆ ಬಂದಿದೆ. ಈ ಬಗ್ಗೆ ಮಾಹಿತಿ ಲಭಿಸುತ್ತಿದ್ದಂತೆ ವಿವಿ ಕಂಪ್ಯೂಟರ್ ಸೈನ್ಸ್ ವಿಭಾಗದ ಸಿಬ್ಬಂದಿ , ವೆಬ್ ಸೈಟ್ ನಿರ್ವಹಣೆಗೆ ಮುಂದಾಗಿದೆ.

ಈ ಸಂಬಂಧ ಜಸ್ಟ್ ಕನ್ನಡ ಡಾಟ್ ಇನ್ ಜತೆ ಮಾತನಾಡಿದ ಮೈಸೂರು ವಿವಿ ಕುಲಪತಿಗಳ ವಿಶೇಷಾಧಿಕಾರಿ ಹಾಗೂ ಕಂಪ್ಯೂಟರ್ ತಜ್ಞ ಡಾ.ಎಚ್.ಕೆ.ಚೇತನ್ ಹೇಳಿದಿಷ್ಟು…

ಮಂಗಳವಾರ ಮಧ್ಯಾಹ್ನದ ವೇಳೆ ಮೈಸೂರು ವಿವಿಯ ಉಪ ವೆಬ್ ಸೈಟ್ ಗೆ ಹ್ಯಾಂಕರ್ ಗಳಿಂದ ಸಮಸ್ಯೆ ಇರುವುದು ಗಮನಕ್ಕೆ ಬಂತು. ಕೂಡಲೇ ವೆಬ್ ಸೈಟ್ ಅನ್ನು ಡೌನ್ ಮಾಡಿ ರಿಪೇರಿ ಕಾರ್ಯ ಕೈಗೆತ್ತಿಕೊಳ್ಳಲಾಯಿತು. ಇಂದು ಸಂಜೆ ವೇಳೆಗೆ ಸಮಸ್ಯೆ ಬಗೆಹರಿದು ವೆಬ್ ಸೈಟ್ ಸಾಮಾನ್ಯ ಸ್ಥಿತಿಗೆ ಮರಳಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮೈಸೂರು ವಿವಿಯ ಪ್ರಮುಖ ವೆಬ್ ಸೈಟ್ ಗೆ ಯಾವುದೇ ಆಡಚಣೆಯಾಗಿಲ್ಲ. ಕಾರಣ ಈ ವೆಬ್ ಸೈಟ್ ಗೆ ಅತ್ಯುತ್ಕೃಷ್ಟ ಗುಣಮಟ್ಟದ ‘ Barracuda ‘ ಫೈರ್ ವಾಲ್ ಅಳವಡಿಸಲಾಗಿದೆ. ಹಾಗಾಗಿ ಇದನ್ನು ಹ್ಯಾಂಕಿಂಗ್ ಮಾಡುವುದು ಅಸಾಧ್ಯ. ಆದ್ದರಿಂದಲೇ ಮೈಸೂರು ವಿವಿಯ ಸಬ್ ಡೊಮೈನ್ ಆದ ದೂರ ಶಿಕ್ಷಣಕ್ಕೆ ಸಂಬಂಧಿಸಿದ ಪ್ರವೇಶಾತಿಗೆಂದು ಆರಂಭಿಸಿದ ವೆಬ್ ಸೈಟ್ ಹ್ಯಾಕ್ ಮಾಡಲು ವಿಫಲ ಯತ್ನ ನಡೆಸಲಾಗಿದೆ. ಈ ಬಗ್ಗೆ ನಮಗೆ ಅಲರ್ಟ್ ಮೆಸೆಜ್ ಬರುತ್ತಿದ್ದಂತೆ ಎಚ್ಚೆತ್ತುಕೊಂಡು ಸಮಸ್ಯೆ ಬಗೆಹರಿಸಲು ಮುಂದಾದೆವು ಎಂದು ಡಾ. ಚೇತನ್ ವಿವರಿಸಿದರು.


key words : mysore-university-website-hack-barracuda-firewall