ಕೂಡಲೇ ಸಿಬ್ಬಂದಿಯ ಡಿಸೆಂಬರ್ ತಿಂಗಳ ವೇತನ ಬಿಡುಗಡೆಗೆ ತ್ವರಿತ ಕ್ರಮ- ಮೈಸೂರು ವಿವಿ ಕುಲಸಚಿವ ಪ್ರೊ.ಆರ್.ಶಿವಪ್ಪ

Promotion

ಮೈಸೂರು,ಜನವರಿ,20,2022(www.justkannada.in): ಮೈಸೂರು ವಿಶ್ವವಿದ್ಯಾನಿಲಯದ ಸಿಬ್ಬಂದಿಗೆ  ಡಿಸೆಂಬರ್  ತಿಂಗಳ ವೇತನ ಬಿಡುಗಡೆ ವಿಳಂಬವಾಗಿರುವುದಕ್ಕೆ ಮೈಸೂರು ವಿವಿ ಕುಲಸಚಿವ ಪ್ರೊ.ಆರ್.ಶಿವಪ್ಪ ಸ್ಪಷ್ಟನೆ ನೀಡಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು, ಕರ್ನಾಟಕ ಸರ್ಕಾರದ (Human Resource Management Service) ಸರ್ವರ್, ಮೈಗ್ರೇಷನ್ ಕೆಲಸವು (RSDCಯಿಂದ KSDC) ಪ್ರಗತಿಯಲ್ಲಿದ್ದುದ್ದರಿಂದ  ದಿನಾಂಕ 7-1-2022ರಿಂದ 19-01-2022 ರವರೆಗೆ ವಿಶ್ವವಿದ್ಯಾನಿಲಯದ ನೌಕರರ ವೇತನ ದತ್ತಾಂಶಗಳನ್ನು ಪರಿಷ್ಕರಿಸಲಾಗಿರುವುದಿಲ್ಲ. (updated) ಮತ್ತು HRMS ನಲ್ಲಿ ನವೆಂಬರ್ 2021 ರ ವಿಶ್ವವಿದ್ಯಾನಿಲಯದ ಉದ್ಯೋಗಿಗಳ ವೇತನವನ್ನು 23-12-2021ರಂದು ನೀಡಿರುವುದರಿಂದ ಕಾಲಾವಕಾಶ ಕಡಿಮೆಯಾದ ಕಾರಣ 7ನೇ ಜನವರಿ 2022 ರೊಳಗೆ ಡಿಸೆಂಬರ್ ತಿಂಗಳ ವೇತನದ ಮಾಹಿತಿಯನ್ನು ಪರಿಷ್ಕರಿಸಲು ಸಾಧ್ಯವಾಗಿರುವುದಿಲ್ಲ.

ಪ್ರಸ್ತುತ ಹೆಚ್‌ಆರ್‌ಎಂಎಸ್ ಸರ್ವರ್ ಚಾಲ್ತಿಯಲ್ಲಿದ್ದು, ಕೂಡಲೇ ಡಿಸೆಂಬರ್ ತಿಂಗಳ ವೇತನವನ್ನು ಬಿಡುಗಡೆಗೊಳಿಸಲು ತ್ವರಿತವಾಗಿ ಕ್ರಮವಹಿಸಲಾಗುತ್ತಿದೆ. ಇಷ್ಟರಲ್ಲೇ ಡಿಸೆಂಬರ್ ತಿಂಗಳ ವೇತನವು HRMS ಮುಖಾಂತರವೇ ಉದ್ಯೋಗಿಗಳಿಗೆ ಪಾವತಿಯಾಗಲಿದೆ. ಈ ಸಂಬಂಧ ವಿಶ್ವವಿದ್ಯಾನಿಲಯವು ಸರ್ಕಾರದ ಜೊತೆ ನಿರಂತರ ಸಂಪರ್ಕದಲ್ಲಿದೆ. ಈ ಹಿನ್ನೆಲೆಯಲ್ಲಿ ಹೊಸ ವ್ಯವಸ್ಥೆಗೆ ಸ್ವಲ್ಪಕಾಲ ಹೊಂದಿಕೊಳ್ಳಬೇಕಾಗಿರುವುದರಿಂದ ಎಲ್ಲಾ ಸಹೋದ್ಯೋಗಿಗಳು ಸಹಕರಿಸಬೇಕೆಂದು ಕೋರಿದ್ದಾರೆ.

Key words: mysore university- registrar- R.Shivappa- Wages