Mysore University: ಎನ್.ಐ.ಆರ್.​ಎಫ್​​ ನಿಂದ 33ನೇ ರ್ಯಾಂಕ್.

Promotion

ಮೈಸೂರು,ಜುಲೈ,15,2022(www.justkannada.in):  ಪ್ರತಿಷ್ಠಿತ ಮೈಸೂರು ವಿಶ್ವವಿದ್ಯಾನಿಲಯಕ್ಕೆ ಎನ್.ಐ.ಆರ್.​ಎಫ್ ​​ನಿಂದ 33ನೇ ರ್ಯಾಂಕ್ ಸಿಕ್ಕಿದೆ.

ಕೇಂದ್ರ ಸರಕಾರದ ಶಿಕ್ಷಣ ಸಚಿವಾಲಯವು, ಎನ್.ಐ.ಆರ್.ಎಫ್.ನ ಸಮೀಕ್ಷೆಯ ಮುಖಾಂತರ ನಡೆಸಿದ ರಾಷ್ಟ್ರಮಟ್ಟದ ಮೌಲ್ಯಮಾಪನದಲ್ಲಿ  ಮೈಸೂರು ವಿಶ್ವವಿದ್ಯಾನಿಲಯ ಈ ಸಾಧನೆ ಮಾಡಿದೆ.  ಭಾರತದ ಉನ್ನತ ಶಿಕ್ಷಣ ಸಂಸ್ಥೆಗಳ ಶ್ರೇಯಾಂಕ ಪಟ್ಟಿಯನ್ನು ಕೇಂದ್ರದ ಶಿಕ್ಷಣ ಸಚಿವರಾದ ಧರ್ಮೇಂದ್ರ ಪ್ರಧಾನ್ ಶುಕ್ರವಾರ ಬಿಡುಗಡೆ ಮಾಡಿದರು. ಕಳೆದ ಬಾರಿ ಮೈಸೂರು ವಿವಿ 27 ನೇ ಸ್ಥಾನ ಪಡೆದಿತ್ತು.

“ಮೈಸೂರು ವಿಶ್ವವಿದ್ಯಾಲಯವು ತನ್ನ ಉತ್ತಮ ಸಾಧನೆಯಿಂದಾಗಿ ಈ ಸಾಲಿನಲ್ಲಿ ಕರ್ನಾಟಕ ರಾಜ್ಯದ ವಿಶ್ವವಿದ್ಯಾನಿಲಯಗಳ ಪೈಕಿ ಅಗ್ರಸ್ಥಾನ ಪಡೆದಿದೆ” ಎಂದು ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಜಿ.ಹೇಮಂತ್ ಕುಮಾರ್ ಸಂತಸ ವ್ಯಕ್ತಪಡಿಸಿದ್ದಾರೆ.

ಮಿತಿ ನಡುವೆಯೂ ಉತ್ತಮ ಸಾಧನೆ

2015ರಿ೦ದಲೂ ಎನ್.ಐ.ಆರ್.ಎಫ್ ಮುಖಾಂತರ ಉನ್ನತ ಶಿಕ್ಷಣ ಸಂಸ್ಥೆಗಳ ಮೌಲೀಕರಣವನ್ನು ಮಾಡಲಾಗುತ್ತಿದೆ. ‘ಒಟ್ಟಾರೆ ವರ್ಗ’, ‘ವಿಶ್ವವಿದ್ಯಾನಿಲಯಗಳ ವರ್ಗ’, ‘ಎಂಜಿನಿಯರಿಂಗ್ ಸಂಸ್ಥೆಗಳ ವರ್ಗ’ ಸೇರಿದಂತೆ ಹತ್ತು ವಿವಿಧ ವರ್ಗಗಳಡಿ ಮೌಲ್ಯಾಂಕವನ್ನು ನಡೆಸಲಾಗುತ್ತದೆ. ಮೈಸೂರು ವಿಶ್ವವಿದ್ಯಾನಿಲಯವು ಈ ಬಾರಿ ಮೊದಲೆರಡು ವರ್ಗಗಳ ರ್ಯಾಂಕಿಂಗ್ ಪ್ರಕ್ರಿಯೆಯಲ್ಲಿ ಭಾಗವಹಿಸಿತ್ತು. ಕಾಯಂ ಆಧ್ಯಾಪಕರುಗಳ ಕೊರತೆ ಹಾಗೂ ಇನ್ನಿತರ ಮಿತಿಗಳ ನಡುವೆಯೂ ಮೈಸೂರು ವಿಶ್ವವಿದ್ಯಾನಿಲಯವು 33ನೇ ಸ್ಥಾನ ಪಡೆದಿರುವುದು ಶ್ಲಾಘನೀಯ ಸಂಗತಿಯಾಗಿದೆ.

ಏನೆಲ್ಲಾ ಮಾನದಂಡ?

ನೂರು ವಿವಿಗಳಲ್ಲಿ ಬೋಧನಾ ವಿಧಾನ, ಸಂಪನ್ಮೂಲಗಳು, ಸಂಶೋಧನೆ, ವೃತ್ತಿಪರ ಪ್ರಯೋಗಿಕತೆ, ಗ್ರಹಿಕೆ ಮೊದಲಾದ ಮಾನದಂಡಗಳನ್ನು ಆಧರಿಸಿ ಮೈಸೂರು ವಿವಿಗೆ  ರ್ಯಾಂಕ್ ನೀಡಲಾಗಿದೆ. ಮಾನವ ಸಂಪನ್ಮೂಲ ಇಲಾಖೆಯ ಅನುಮೋದಿತ ಸಂಸ್ಥೆ ನ್ಯಾಷನಲ್ ಇನ್ ​​ಸ್ಟಿಟ್ಯೂಟ್ ಆಫ್  ‌ರ್ಯಾಂಕಿಂಗ್​ ಫ್ರೇಮ್ ವರ್ಕ್ ​ನಿಂದ ಮೈಸೂರು ವಿವಿಗೆ ರ್ಯಾಂಕಿಂಗ್ ​ ಲಭಿಸಿದೆ.

ಎನ್.ಐ.ಆರ್.ಎ‌ ವತಿಯಿಂದ ಪ್ರತಿ ವರ್ಷ ಭಾರತದಲ್ಲಿನ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ರ್ಯಾಂಕಿಂಗ್ ನೀಡಲಾಗುತ್ತದೆ. ಈ ಐದು ಅಂಶಗಳೆಂದರೆ : ಬೋಧನೆ, ಕಲಿಕೆ ಮತ್ತು ಸಂಪನ್ಮೂ ಸಂಶೋಧನೆ ಮತ್ತು ವೃತ್ತಿಪರ ಅಭ್ಯಾಸಗಳು: ಪದವಿ ಫಲಿತಗಳು; ವಿಸ್ತರಣೆ ಮತ್ತು ಒಳಗೊಳ್ಳುವಿಕೆ ಹಾಗೂ ಸಹವರ್ತಿಗಳ ಅಭಿಪ್ರಾಯ, ಈ ಎಲ್ಲಾ ಅಂಶಗಳು ಉನ್ನತ ಶಿಕ್ಷಣ ಸಂಸ್ಥೆಗಳ ಮುಖ್ಯ ಆಶಯಗಳಾದ ಬೋಧನೆ ಹಾಗೂ ಕಲಿಕೆಯಲ್ಲಿನ ಔನ್ನತ್ಯ, ಸಾಮಾಜಿಕವಾಗಿ, ಆರ್ಥಿಕವಾಗಿ ಮತ್ತು ಸಾಂಸ್ಕೃತಿಕವಾಗಿ ಅಂಚಿಗೆ ತಳ್ಳಲ್ಪಟ್ಟ ಸಮುದಾಯಗಳ ತಲುಪುವಿಕೆ ಇತ್ಯಾದಿಗಳಿಗೆ ಸಂಬಂಧಿಸಿವೆ. ಎಲ್ಲಾ ಆಯಾಮಗಳಲ್ಲೂ ಮೈಸೂರು ವಿಶ್ವವಿದ್ಯಾನಿಲಯವು ಅಭೂತಪೂರ್ವವಾದ ಸಾಧನೆಗೈದಿದೆ.

“ಮೈಸೂರು ವಿಶ್ವವಿದ್ಯಾನಿಲಯದ ಯಶಸ್ಸಿಗೆ ಕಾರಣಕರ್ತರಾದ ಸಿಂಡಿಕೇಟ್ ಹಾಗೂ ಶೈಕ್ಷಣಿಕ ಮಂಡಳಿಯ ಸದಸ್ಯರು, ಅಧ್ಯಾಪಕ ಹಾಗೂ ಆಧ್ಯಾಪಕೇತರ ವರ್ಗದವರು, ಅಧಿಕಾರಿಗಳು, ಸಂಶೋಧಕರು, ವಿದ್ಯಾರ್ಥಿಗಳು, ಪೋಷಕರನ್ನು ಈ ಸ೦ದರ್ಭದಲ್ಲಿ ಅಭಿನಂದಿಸುತ್ತೇನೆ. ಮುಂದಿನ ವರ್ಷಗಳಲ್ಲಿ ಇನ್ನೂ ಹೆಚ್ಚಿನ ಸಾಧನೆಯನ್ನು ಮಾಡುವಂತಾಗಲೆಂದು ಹಾರೈಸುತ್ತೇನೆ” ಎಂದು ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಜಿ‌.ಹೇಮಂತ್ ಕುಮಾರ್ ತಿಳಿಸಿದ್ದಾರೆ.

Key words: Mysore University –ranked- 33rd– NIRF

ENGLISH SUMMARY…

UoM gets 33rd rank from NIRF
Mysuru, July 15, 2022 (www.justkannada.in): The University of Mysore’s has earned 33rd rank from NIRF.
The University of Mysore has earned this significant ranking in a national-level survey undertaken by the NIRF of the Union Education Secretariat. Union Minister Dharmendra Pradhan released the list of ranking of the best higher educational institutions in the country today. The University of Mysore had secured 27th rank last year.
University Vice-Chancellor Prof. G. Hemanth Kumar informed that the University of Mysore secured first place in the State through its significant achievements.
Achievement despite several limitations
The NIRF has been evaluating higher education institutions across the country since 2015. The evaluation is done under various categories including ‘Overall Category,’ ‘Universities Category,’ ‘Engineering Institutions Category,’ etc. The University of Mysore had taken part in the first two categories this time. Despite several limitations like shortage of permanent teaching staff, etc., the University has secured 33rd ranking, which is appreciable.
Criteria
The University of Mysore has secured this ranking outscoring 100 universities in the aspects of teaching method, resources, research activities, professional experimentation, perspectives. The ranking is accorded by the National Institute of Ranking Framework (NIRF), approved by the Ministry of Human Resources, Govt. of India.
Keywords: University of Mysore/ Prof. G. Hemanth Kumar/ NIRF ranking/ 33rd rank