ಸಂಬಳ ಕೊಡದ ಆರೋಪ: ಮೈಸೂರು ವಿವಿ ಹಾಸ್ಟೆಲ್ ಅಡುಗೆ ನೌಕರರಿಂದ ಪ್ರತಿಭಟನೆ…

Promotion

ಮೈಸೂರು,ಜು,17,2019(www.justkannada.in): ಗುತ್ತಿಗೆದಾರರು 3 ತಿಂಗಳಿಂದ ಕಾರ್ಮಿಕರಿಗೆ ಸಂಬಳ ನೀಡಿಲ್ಲವೆಂದು ಮೈಸೂರು ವಿಶ್ವವಿದ್ಯಾನಿಲಯದ ಹಾಸ್ಟೆಲ್ ಅಡುಗೆ ನೌಕರರು ಪ್ರತಿಭಟನೆ ನಡೆಸಿದರು.

ವಿಲೇಜ್ ಹಾಸ್ಟೆಲ್ ಮುಂಭಾಗದ ಡೈನಿಂಗ್ ಹಾಲ್ ಬಳಿ ಜಮಾಯಿಸಿ ಹಾಸ್ಟೆಲ್ ಅಡುಗೆ ನೌಕರರು ಧರಣಿ ನಡೆಸಿದರು. ಬೆಂಗಳೂರು ಮೂಲದ ಪಾನೋರೋಪ ಕಂಪನಿ ಗುತ್ತಿಗೆ ಪಡೆದಿದೆ. ಆದರೆ ಗುತ್ತಿಗೆದಾರರು 3 ತಿಂಗಳಿಂದ ಕಾರ್ಮಿಕರಿಗೆ ಸಂಬಳ ನೀಡಿಲ್ಲ. ಗುತ್ತಿಗೆದಾರರು ಕಾರ್ಮಿಕರ ಸಂಪರ್ಕಕ್ಕೆ ಸಿಗೆದೆ ಸಂಬಳ ನೀಡದ ಆಟವಾಡಿಸುತ್ತಿದ್ದಾರೆಂದು ಆರೋಪಿಸಿದ್ದು, ಬೆಳ್ಳಿಗ್ಗೆಯಿಂದ ಅಡುಗೆ ಕೆಲಸ ಬಿಟ್ಟು ನೌಕರರು ಪ್ರತಿಭಟನೆ ನಡೆಸಿದರು.

Key words:  Mysore university- hostel- employees- protest