ಜ್ಞಾನವನ್ನು ರಾಷ್ಟ್ರಕ್ಕೆ ಸಮರ್ಪಿಸಲು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಕರೆ.

ಮೈಸೂರು ಮಾರ್ಚ್‌ 23,2022(www.justkannada.in): ಜ್ಞಾನವನ್ನು ಸೃಷ್ಟಿಸುವುದರ ಜತೆಗೆ ಮನುಕುಲದ ಭವಿಷ್ಯದ ಸವಾಲುಗಳನ್ನು ಎದುರಿಸುವ ನಿಟ್ಟಿನಲ್ಲಿ ಯುವ ಸಮುದಾಯವನ್ನು ಅಣಿಗೊಳಿಸುವುದು ಉನ್ನತ ಶಿಕ್ಷಣದ ಉದ್ದೇಶವಾಗಿದೆ ಎಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಅಭಿಪ್ರಾಯಪಟ್ಟರು.

ಮೈಸೂರು ವಿಶ್ವವಿದ್ಯಾಲಯ ಮತ್ತು ಭಾರತೀಯ ವಿಶ್ವ ವಿದ್ಯಾಲಯಗಳ ಸಂಘ ವತಿಯಿಂದ ಇಂದು  ಆಯೋಜಿಸಲಾಗಿದ್ದ 96ನೇ ವಾರ್ಷಿಕ ಸಭೆ ಮತ್ತು “ಉನ್ನತ ಶಿಕ್ಷಣ ಸಂಸ್ಥೆಗಳ ಮೂಲಕ ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ಅರಿತುಕೊಳ್ಳುವುದು” ಕುರಿತ ಕುಲಪತಿಗಳ ರಾಷ್ಟ್ರೀಯ ಸಮ್ಮೇಳನವನ್ನು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಉದ್ಘಾಟಿಸಿ ಮಾತನಾಡಿದರು.

ಜ್ಞಾನ ಗಳಿಸುವುದು ಶಿಕ್ಷಣದ ಮೂಲ ಉದ್ದೇಶವಾಗಿದೆ. ಶಿಕ್ಷಣದಿಂದ ಸರ್ವಾಂಗೀಣ ಪ್ರಗತಿಗೆ ದಾರಿ ದೊರಕುತ್ತದೆ. ಹೊಸ ಹೊಸ ಆವಿಷ್ಕಾರಗಳನ್ನು ಅರಿತುಕೊಳ್ಳಲು ಶಿಕ್ಷಣ ಅತ್ಯಗತ್ಯವಾಗಿದೆ. ಈ ನಿಟ್ಟಿನಲ್ಲಿ ಭಾರತ ಸರ್ಕಾರ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೊಳಿಸಿದೆ ಎಂದರು.

ಸೂಕ್ತ ಅವಕಾಶಗಳು; ನ್ಯಾಯ, ನೈತಿಕ ಮೌಲ್ಯಗಳೊಂದಿಗೆ ಭಾರತವು ಸದೃಢವಾಗುವುದರ ಜತೆಗೆ ನಿಜವಾದ ಅರ್ಥದಲ್ಲಿ ವಿಶ್ವ ನಾಯಕನಾಗಿ ಹೊರಹೊಮ್ಮುವುದು ಸಾಧ್ಯವಾಗಲಿದೆ. ಈ ನಿಟ್ಟಿನಲ್ಲಿ ಯುವ ಸಮುದಾಯಕ್ಕೆ ಅಗತ್ಯ ಶಿಕ್ಷಣ ಮತ್ತು ಅವಕಾಶಗಳನ್ನು ಒದಗಿಸುವ ಕೆಲಸವಾಗಬೇಕಿದೆ. ಭಾರತಕ್ಕೆ ವಿಶ್ವಗುರುವಿನ ಗೌರವವನ್ನು ಮತ್ತೆ ದೊರಕಿಸಿಕೊಡುವ ನಿಟ್ಟಿನಲ್ಲಿ ‌ನಾವೆಲ್ಲರೂ ದೃಢಹೆಜ್ಜೆಯನ್ನು ಇಡಬೇಕಿದೆ ಎಂದು ಹೇಳಿದರು.

ಈಗಾಗಲೇ ವಿಶ್ವವಿದ್ಯಾಲಯಗಳು ಶಿಕ್ಷಣ ಕ್ಷೇತ್ರಕ್ಕೆ ಅತ್ಯುತ್ತಮ ಸೇವೆ ಸಲ್ಲಿಸುತ್ತಿವೆ.  ದೇಶದ ಸರ್ವಾಂಗೀಣ ಅಭಿವೃದ್ಧಿ ಸರಕಾರದ‌ ಆಶಯವಾಗಿದೆ. ಎಲ್ಲರೂ ಇದಕ್ಕೆ ಕೈಜೋಡಿಸುವ ಮೂಲಕ ಆತ್ಮನಿರ್ಭರ ಭಾರತ ನಿರ್ಮಾಣಕ್ಕೆ ಸಹಕರಿಸಬೇಕು  ಎಂದು ತಿಳಿಸಿದರು.

ಉಪರಾಷ್ಟ್ರಪತಿಗಳಾದ ವೆಂಕಯ್ಯನಾಯ್ಡು ಅವರು ವರ್ಚುವಲ್ ಮೂಲಕ ಸಮ್ಮೇಳನ್ನುದ್ದೇಶಿಸಿ ಮಾತನಾಡಿದರು. ಭಾರತೀಯ ವಿಶ್ವ ವಿದ್ಯಾಲಯಗಳ ಸಂಘದ ಅಧ್ಯಕ್ಷ ಕರ್ನಲ್ ಡಾ.ಜಿ.ತಿರುವಾಸಗಂ, ಕುಲಪತಿಗಳಾದ ಪ್ರೊ.ಜಿ.ಹೇಮಂತ್ ಕುಮಾರ್, ಎಐಯು ಪ್ರಧಾನ ಕಾರ್ಯದರ್ಶಿ ಶ್ರೀಮತಿ ಡಾ.ಪಂಕಜ್ ಮಿತಲ್, ಕುಲಸಚಿವ ಶಿವಪ್ಪ ಸೇರಿದಂತೆ ಮುಂತಾದ ಗಣ್ಯರು  ಉಪಸ್ಥಿತರಿದ್ದರು.

Key words: mysore university- Governor-Thawar Chand Gehlot

ENGLISH SUMMARY…

Governor Thawar Chand Gehlot calls to contribute knowledge to the nation
Mysuru, March 23, 2022 (www.justkannada.in): “The objective of the higher education sector is to prepare the youth to face the future challenges of mankind apart from creating knowledge,” opined the Hon’ble Governor of Karnataka Sri Thawar Chand Gehlot.
He inaugurated the 96th Annual Conference and a national seminar on the topic, “Understanding the Sustainable Development Goals through Higher Educational System,” organized by the University of Mysore, in association with the Association of Indian Universities, New Delhi, in Mysuru today.
“The major objective of education is gaining knowledge. Education shows the way for overall progress. Education is essential for innovations. The Government of India has introduced the new National Education Policy – 2020 in achieving these objectives,” he observed.
“The NEP-2020 provides proper opportunities, and helps our country in emerging as the ‘Vishwaguru’ in the real sense by becoming stronger with moral values. In this regard, the educational institutions should work towards providing required education and opportunities to the youth. We all should walk together in getting back the ‘Vishwaguru’ title once again,” he added.
“The Universities are providing excellent service in the educational sector. Overall development of the country is the aim of the Govt. of India. Everyone should cooperate with the government by joining hands and make the country self-dependent,” he said.
Hon’ble Vice-President of India Sri Venkaiah Naidu inaugurated the conference virtually and addressed. Dr. G. Tiruvasagam, Chairperson, Association of Indian Universities, Prof. G. Hemanth Kumar, Vice-Chancellor, University of Mysore. Smt. Dr. Pankaj MIttal, Principal Secretary, AIU, Shivappa, Registrar, UoM and others were present.
Keywords: University of Mysore/ Association of Indian Universities/ Governor/ Thawar Chand Gehlot