ಕೊರೋನಾ ಸಂತ್ರಸ್ತರ ನೆರವಿಗೆ ಮೈಸೂರು ವಿವಿ ಅಧ್ಯಾಪಕರು ಮತ್ತು ಸಿಬ್ಬಂದಿ: ಕುಲಪತಿ ಪ್ರೊ. ಜಿ. ಹೇಮಂತ್ ಕುಮಾರ್ ರಿಂದ ನೆರವಿನ ಚೆಕ್ ಹಸ್ತಾಂತರ….  

Promotion

ಮೈಸೂರು,ಆ,15,2020(www.justkannada.in):  ರಾಜ್ಯದಲ್ಲಿ ಕೊರೋನಾ , ಲಾಕ್ ಡೌನ್ ನಿಂದಾಗಿ ಸಂಕಷ್ಟಕ್ಕೆ ಸಿಲುಕಿರುವ ಸಂತ್ರಸ್ತರ ನೆರವಿಗೆ  ಮೈಸೂರು ವಿಶ್ವ ವಿದ್ಯಾನಿಲಯದ ಅಧ್ಯಾಪಕರು, ಉದ್ಯೋಗಿಗಳು ಧಾವಿಸಿದ್ದಾರೆ.mysore-university-faculty-assist-corona-victims-one-day-salary-cm-compensation-fund

ಮೈಸೂರು ವಿಶ್ವ ವಿದ್ಯಾನಿಲಯದ ಅಧ್ಯಾಪಕರು ಮತ್ತು ಸಿಬ್ಬಂದಿಗಳು  ತಮ್ಮ ಒಂದು ದಿನದ ವೇತನವನ್ನ ಸಿಎಂ ಪರಿಹಾರ ನಿಧಿ ಕೋವಿಡ್-19 ಗೆ  ನೀಡಿದ್ದಾರೆ. ಏಪ್ರಿಲ್ ತಿಂಗಳ ಒಂದು ದಿನದ ವೇತನವನ್ನ ಅಂದರೆ ಒಟ್ಟು  30, 17,000 ರೂಪಾಯಿ ಅನ್ನ ಸಿಎಂ ಪರಿಹಾರ ನಿಧಿಗೆ ನೀಡಲಾಗಿದೆ.mysore-university-faculty-assist-corona-victims-one-day-salary-cm-compensation-fund

ಇಂದು ಮೈಸೂರು ವಿಶ್ವ ವಿದ್ಯಾನಿಲಯ ಕುಲಪತಿ ಪ್ರೊ. ಜಿ. ಹೇಮಂತ್ ಕುಮಾರ್   ನೆರವಿನ ಚೆಕ್ ಅನ್ನ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ  ಎಸ್.ಟಿ ಸೋಮಶೇಖರ್ ಅವರಿಗೆ ಹಸ್ತಾಂತರಿಸಿದರು. ಈ ವೇಳೆ ಶಾಸಕ ಜಿ.ಟಿ ದೇವೇಗೌಡ ಸೇರಿ ಮತ್ತಿತರರು ಉಪಸ್ಥಿತರಿದ್ದರು.

Key words: Mysore university- faculty -assist -Corona victims-one day –salary- CM compensation fund.