ಮೈಸೂರು ವಿವಿ ಶಿಕ್ಷಣ ಮಂಡಳಿಯ ಸಾಮಾನ್ಯ ಸಭೆ: ರಾಜ್ಯದಲ್ಲೇ ಮೊದಲ ಬಾರಿಗೆ ಅಂಗವೈಕಲ್ಯ ಮತ್ತು ಪುನರ್ವಸತಿ ಕೋರ್ಸ್ ಆರಂಭಕ್ಕೆ ಅನುಮೋದನೆ…

Promotion

ಮೈಸೂರು,ಡಿ,4,2019(www.justkannada.in): ಇಂದು ನಡೆದ ಮೈಸೂರು ವಿಶ್ವವಿದ್ಯಾನಿಲಯದ ಶಿಕ್ಷಣ ಮಂಡಳಿಯ ಸಾಮಾನ್ಯ ಸಭೆಯಲ್ಲಿ  ಅಂಗವೈಕಲ್ಯ ಮತ್ತು ಪುನರ್ವಸತಿ ಕೋರ್ಸ್ ಆರಂಭಕ್ಕೆ ಅನುಮೋದನೆ ನೀಡಲಾಯಿತು.

ನಗರದ ಕ್ರಾಫರ್ಡ್ ಭವನದ ಶಿಕ್ಷಣ ಮಂಡಳಿಯ ಸಭಾಂಗಣದಲ್ಲಿ ಮೈಸೂರು ವಿಶ್ವವಿದ್ಯಾನಿಲಯದ  ಕುಲಪತಿ ಪ್ರೊ.ಜಿ‌.ಹೇಮಂತ್ ಕುಮಾರ್ ನೇತೃತ್ವದಲ್ಲಿ ಶಿಕ್ಷಣ ಮಂಡಳಿಯ ಎರಡನೇ ಸಾಮಾನ್ಯ ಸಭೆ ನಡೆಯಿತು. ಸಭೆಯಲ್ಲಿ ಹೊಸ ಕೋರ್ಸ್ ಗಳ ಪರಿಷ್ಕರಣೆ, ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಮತ್ತೆ ಅವಕಾಶ, ದೈಹಿಕ ಶಿಕ್ಷಣ ಕಾಲೇಜಿನ ಸ್ಥಳಾಂತರ, ವಿಶ್ವೇಶ್ವರಯ್ಯ ಸ್ನಾತಕೋತ್ತರ ಕೇಂದ್ರದಲ್ಲಿ ಸಕ್ಕರೆ ತಂತ್ರಜ್ಞಾನಕ್ಕೆ ಸ್ಥಾನಮಾನ ನೀಡುವ ಕುರಿತು ಚರ್ಚೆ ನಡೆಸಲಾಯಿತು.

ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಮಂಡಿಸಿದ ಬಹುತೇಕ ವಿಷಯಗಳಿಗೆ ಸಭೆಯಲ್ಲಿ ಸದಸ್ಯರು ಸಮ್ಮತಿ ನೀಡಿದರು. ಸಭೆಯಲ್ಲಿ  ಚಿನ್ನದ ಪದಕ ದತ್ತಿ ಸ್ಥಾಪನೆ ಕುರಿತು ಅನುಮೋದನೆ ನೀಡಲಾಯಿತು.  ಹಾಗೂ ಅಂಗವೈಕಲ್ಯ ಮತ್ತು  ಪುನರ್ವಸತಿ ಅಧ್ಯಯನ ಇಲಾಖೆ ಸ್ಥಾಪನೆಗೆ ತೀರ್ಮಾನಿಸಲಾಯಿತು.

ಕರ್ಮಾಟಕದಲ್ಲೇ ಮೊದಲ ಬಾರಿಗೆ ಮೈಸೂರು ವಿವಿಯಿಂದ ಅಂಗವೈಕಲ್ಯ ಮತ್ತು ಪುನರ್ವಸತಿ ಕೋರ್ಸ್ ಆರಂಭಿಸಲು ಅನುಮೋದನೆ ನೀಡಲಾಯಿತು. ವಿದೇಶದಲ್ಲಿ ಹೆಚ್ಚು ಜನಪ್ರಿಯ ಹೊಂದಿರುವ ಕೋರ್ಸ್ ಇದಾಗಿದೆ. 2020ನೇ ಶೈಕ್ಷಣಿಕ ವರ್ಷದಿಂದ ಕೋರ್ಸ್ ಆರಂಭಕ್ಕೆ ಅನುಮೋದನೆ ಸಿಕ್ಕಿದೆ.

Key words: Mysore university-Education Board – General Meeting – Disability and Rehabilitation Course