ಸ್ತನ ಕ್ಯಾನ್ಸರ್‌ಗೆ ‘ ಔಷಧ ಬೀಜ ‘ ಆವಿಷ್ಕರಿಸಿದ ಮೈಸೂರು ವಿವಿಯ ಡಾ.ಬಸಪ್ಪ

ಮೈಸೂರು, ಜ.27, 2021 : (www.justkannada.in news ) ಮಹಿಳೆಯರಿಗೆ ಕಾಡುವ ಸ್ತನ ಕ್ಯಾನ್ಸರ್‌ ನಿವಾರಣೆಗೆ ಸಂಬಂಧಿಸಿದಂತೆ ಮೈಸೂರು ವಿವಿ ಔಷಧ ಅಭಿವೃದ್ಧಿಪಡಿಸಿದೆ. jk
ಮೈಸೂರು ವಿಶ್ವವಿದ್ಯಾನಿಲಯದ ಸಾವಯವ ರಸಾಯನ ಶಾಸ್ತ್ರ ವಿಭಾಗದ ಅಧ್ಯಕ್ಷ ಡಾ. ಬಸಪ್ಪ ಅವರು ಸ್ತನ ಕ್ಯಾನ್ಸರ್‌ ವಿರುದ್ಧ ಹೋರಾಡಬಲ್ಲ ಔಷಧ ಬೀಜವನ್ನು (ಡ್ರಗ್‌ ಸೀಡ್‌) ಅಭಿವೃದ್ಧಿಪಡಿಸಿದ್ದಾರೆ. ಇದು ಕ್ಯಾನ್ಸರ್‌ ಔಷಧ ಕ್ಷೇತ್ರದಲ್ಲಿ ಬದಲಾವಣೆ ತರಲಿದೆ ಎನ್ನಲಾಗಿದೆ.
ಪ್ರಸ್ತುತ ಕ್ಯಾನ್ಸರ್‌ ಕಾಯಿಲೆಗಳಿಗೆ ಕಿಮೋ ಥೆರಪಿ, ರೇಡಿಯೇಷನ್‌ ಹಾಗೂ ಹಾರ್ಮೋನಲ್‌ ಥೆರಪಿ ಚಿಕಿತ್ಸೆ ಮೂಲಕ ಗುಣಪಡಿಸುವ ಪ್ರಯತ್ನ ನಡೆಯುತ್ತಿದೆ. ಜತೆಗೆ ರಲೋಕ್ಸಿಫೈನ್‌ ಮತ್ತು ಟಮೋಕ್ಸಿಕಿನ್‌ ಎನ್ನುವ ಔಷಧಗಳನ್ನು ಚಿಕಿತ್ಸೆಗೆ ಬಳಕೆ ಮಾಡಲಾಗುತ್ತಿದೆ. ಈಗಾಗಲೇ ಸ್ತನ ಕ್ಯಾನ್ಸರ್‌ ವಿರುದ್ಧ ಬಳಸಲಾಗುತ್ತಿರುವ ಈ ಔಷಧಗಳು ಮನುಷ್ಯನ ರೋಗನಿರೋಧಕ ಕಣಗಳ ಕಾರ್ಯವನ್ನೇ ಬದಲಾಯಿಸುವ ಸಾಧ್ಯತೆ ಇರುವುದರಿಂದ ಬಸಪ್ಪ ಅವರು ಆವಿಷ್ಕರಿಸಿರುವ ಔಷಧ ಬೀಜವು ಪರಿಣಾಮಕಾರಿ ಎಂದು ಹೇಳಲಾಗುತ್ತಿದೆ. ಸಧ್ಯಕ್ಕೆ ಈ ಔಷಧ ಬೀಜಕ್ಕೆ ಎಎಂಟಿಎ ಎಂದು ಹೆಸರಿಡಲಾಗಿದೆ.
ಈ ಔಷಧ ಬೀಜದ ಕುರಿತು ಮೊಲಕ್ಯುಲಸ್‌ ವೈಜ್ಞಾನಿಕ ನಿಯತಕಾಲಿಕೆಯಲ್ಲಿ ಸದ್ಯದಲ್ಲೇ ಲೇಖನ ಪ್ರಕಟವಾಗಲಿದೆ. ಈ ಆವಿಷ್ಕಾರದಲ್ಲಿ ಪ್ರೊ. ಪೀಟರ್‌, ಡಾ. ವಿಜಯ್‌. ಪಿ ಅವರು ಪಾಲ್ಗೊಂಡಿದ್ದರು ಎಂದು ಡಾ. ಬಸಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. mysore-university-chemistry-dr-basappa-discovers-drug-seed-for-brest-cancer
ಡಾ. ಬಸಪ್ಪ ಅವರು ಮೈಸೂರು ವಿಶ್ಚವಿದ್ಯಾಲಯದ ಪ್ರೊ. ಕೆ. ಎಸ್. ರಂಗಪ್ಪ ಅವರ ಮಾರ್ಗದರ್ಶನದಲ್ಲಿ ಅನೇಕ ಸಂಶೋಧನೆಗಳನ್ನು ನಡೆಸಿದ್ದು, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಪತ್ರಿಕೆಗಳಲ್ಲಿ ಸುಮಾರು 140 ಸಂಶೋಧನಾ ಪ್ರಬಂಧಗಳನ್ನು ಪ್ರಕಟಿಸಿದ್ದಾರೆ,

key words : mysore-university-chemistry-dr.basappa-discovers-drug-seed-for-brest-cancer