ರೈತರ ಹೆಸರಿಗೆ ಮಸಿ ಬಳಿಯಲು ಹುನ್ನಾರ: ಸಮಾಜಘಾತುಕ ಶಕ್ತಿಗಳೇ ದೆಹಲಿಯಲ್ಲಿ ಘಟನೆಗೆ ಕಾರಣ- ಕುರುಬೂರು ಶಾಂತಕುಮಾರ್…

ಬೆಂಗಳೂರು,ಜನವರಿ,27,2021(www.justkannada.in): ದೆಹಲಿಯಲ್ಲಿ ಘಟನೆ ನಡೆದದ್ದು ದುರದೃಷ್ಟಕರ, ಚಳುವಳಿನಿರತ ರೈತರ ಹೆಸರಿಗೆ ಮಸಿ ಬಳಿಯಲು, ಸಮಾಜಘಾತುಕ ಶಕ್ತಿಗಳು ದೆಹಲಿಯಲ್ಲಿ ನಡೆದ ಘಟನೆಗೆ ಕಾರಣ ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.jk

ಈ ಕುರಿತು ಮಾತನಾಡಿರುವ ಕುರುಬೂರು ಶಾಂತಕುಮಾರ್, ರೈತರಿಗೆ ಮಾರಕವಾಗುವ ಕಾಯ್ದೆಗಳನ್ನು ವಾಪಸ್ ಪಡೆಯುವಂತೆ 60 ದಿನಗಳಿಂದ ಶಾಂತಿಯುತವಾಗಿ ಚಳುವಳಿ ನಡೆಸುತ್ತಿದಾಗ, 145 ರೈತರು ತಮ್ಮ ಪ್ರಾಣ ಬಲಿದಾನ ಮಾಡಿದರು ತಾಳ್ಮೆ ಕಳೆದುಕೊಳಲಿಲ್ಲ, ಐದು ಲಕ್ಷ ಟ್ರ್ಯಾಕ್ಟರ್ ರ್ಯಾಲಿಯಲ್ಲಿ ರಾಷ್ಟ್ರ ಧ್ವಜವನ್ನು ಹಿಡಿದು ರಾಷ್ಟ್ರಪ್ರೇಮ ಮೆರೆದಿದ್ದಾರೆ.  ಆದರೆ ಸಮಾಜಘಾತುಕ ವ್ಯಕ್ತಿಗಳು ಹೋರಾಟದಲ್ಲಿ ಸೇರಿಕೊಂಡು ಈ ಕೃತ್ಯ ನಡೆಸಿದ್ದಾರೆ.  ಈ ಬಗ್ಗೆ  ಮಾಹಿತಿ ಬೇಹುಗಾರಿಕೆ ಇಲಾಖೆಯ ಮೂಲಕ ಕೇಂದ್ರ ಸರ್ಕಾರಕ್ಕೆ ಗೊತ್ತಿದ್ದರೂ ಯಾವುದೇ ಮುಂಜಾಗ್ರತ ಕ್ರಮ ಕೈಗೊಳ್ಳದೆ, ನಿರ್ಲಕ್ಷ ತಾಳಿದ್ದು ಯಾಕೆ  ಎನ್ನುವ ಅನುಮಾನ ಬರುತ್ತಿದೆ ಕೇಂದ್ರ ಸರ್ಕಾರ ಉತ್ತರಿಸಬೇಕು, ಘಟನೆಯ ಬಗ್ಗೆ ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರಿಂದ  ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.dehli-farmer –protest-farmer leader-  Kuruburu Shanthakumar

ಕೇಂದ್ರ ಸರ್ಕಾರ ರೈತರಿಗೆ ಮಾರಕವಾಗುವ ಕೃಷಿ ಕಾಯ್ದೆಗಳನ್ನು ಸುಗ್ರೀವಾಜ್ಞೆ ಮೂಲಕ, ಲಾಕಡೌನ್ ಸಂದರ್ಭದಲ್ಲಿ ರೈತರನ್ನು ಮನೆಯಲ್ಲಿ  ಕೂಡಿ ಹಾಕಿ ಯಾವುದೇ ಚರ್ಚೆಯಿಲ್ಲದೆ  ಜಾರಿಗೆ ತರುವ ಅವಶ್ಯಕತೆ ಏನಿತ್ತು, ಈ ಕಾಯ್ದೆ ಜಾರಿಯಾಗುವ ಮೊದಲೇ ಸಮಸ್ಯೆ ಅರಿವಿಲ್ಲದೆ ರೈತರಿಗೆ ಅನುಕೂಲವಾಗುವುದು ಎಂದು ಬಿಂಬಿಸುತ್ತಿರುವುದು ಏತಕ್ಕಾಗಿ, ಚಳುವಳಿ ನಡೆಸುತ್ತಿದ್ದ ರೈತರ ಜೊತೆ  ನಾಟಕಿಯವಾಗಿ ಹನ್ನೊಂದು ಸಭೆ ನಡೆಸಿ ಯಾವುದೇ ತೀರ್ಮಾನ ಕೈಗೊಳ್ಳದೆ  ಕೇಂದ್ರ ಸರ್ಕಾರ ನಾಟಕೀಯ ಬೆಳವಣಿಗೆ ತೂರೀದ್ದು ಏಕೆ,..?  145 ರೈತರು ಚಳುವಳಿ ಮೂಲಕ ಪ್ರಾಣ ಕಳೆದುಕೊಂಡಿದ್ದರು ರೈತರ ಬಗ್ಗೆ ಕನಿಕರ ಏಕೆ ಬರಲಿಲ್ಲ ಇದು ರೈತರ ಕಣ್ಣಿಗೆ ಮಣ್ಣೆರಚುವ ತಂತ್ರಗಾರಿಕೆ ಅಲ್ಲವೇ ಎಂದು ಕೇಂದ್ರ ಸರ್ಕಾರದ ವಿರುದ್ಧ ಕುರುಬೂರು ಶಾಂತಕುಮಾರ್ ಕಿಡಿಕಾರಿದ್ದಾರೆ.

Key words: dehli-farmer –protest-farmer leader-  Kuruburu Shanthakumar