ಸಾರಾ ಕಲ್ಯಾಣ ಮಂಟಪದ ಸರ್ವೇ ಮಾಡಲು ಅಧಿಕಾರಿಗಳು ಬೇಡ ಎಂದು ಶಾಸಕ ಮಹೇಶ್ ಹೇಳಿದ್ದು ಯಾಕೆ ಗೊತ್ತ..?

 

ಮೈಸೂರು, ಸೆ.06, 2021 : (www.justkannada.in news) ಕಾನೂನು ಪ್ರಕಾರವೇ ಕಲ್ಯಾಣ ಮಂಟಪ ನಿರ್ಮಾಣ ಮಾಡಲಾಗಿದೆ. ಒತ್ತುವರಿಯಾಗಿದ್ದರೆ ಬಂದು ಪರಿಶೀಲನೆ ಮಾಡಿ. ಸರ್ವೇ ಮಾಡಲು ಅಧಿಕಾರಿಗಳು ಬೇಡ. ಖುದ್ದು ಮನೀಷ್ ಮುದ್ಗಲ್ ಅವರೇ ಬಂದು ಸರ್ವೇ ಮಾಡಲಿ.

ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಶಾಸಕ ಸಾ.ರಾ.ಮಹೇಶ್ ಹೇಳಿದಿಷ್ಟು…

ಗೋಮಾಳ ಆಗಿದ್ದರೆ ನಿಮ್ಮ ಬಳಿಯೇ ದಾಖಲೆ ಇದೆ. ನೀವೊಬ್ಬ ಪ್ರಾಮಾಣಿಕ ಅಧಿಕಾರಿ. ಅದಕ್ಕೆ ಕುಮಾರಸ್ವಾಮಿ ರೈತ ಸಾಲ ಮನ್ನಾಗೆ ನಿಮ್ಮನ್ನು ನೇಮಕ ಮಾಡಿದರು. 54 ಸಾವಿರ ರೈತರ ಅರ್ಜಿ ನಿಮ್ಮ ಬಳಿ ಇದೆ. ನೀವು ಈ ರಾಜ್ಯದಲ್ಲಿ ಭೂದಾಖಲೆ ಸರ್ವೇಗೆ ರೈತರು ಅರ್ಜಿ ಕೊಟ್ಟಿದ್ದಾರೆ. ಖಾಸಗಿಯವರದ್ದು 2.5 ಲಕ್ಷ ಹಾಗೂ ಸರ್ಕಾರದ್ದು 2.5 ಲಕ್ಷ ಅರ್ಜಿ ಬಾಕಿ ಇದೆ. ಅದಕ್ಕೆ ಯಾವುದೇ ಸಮಿತಿ ಏಕೆ ಮಾಡಿಲ್ಲ.

ನೀವೆ ಬನ್ನಿ :

ನೀವೇ ಬಂದು ಸರ್ವೇ ಮಾಡಿ ನಾನು ಬೊಕ್ಕೆ ಹಿಡಿದು ಸ್ವಾಗತಿಸುತ್ತೇನೆ. ರಾಜ ಕಾಲುವೆ ಒತ್ತುವರಿ ಮಾಡಿಲ್ಲ ಇದು ಗೋಮಾಳ ಅಲ್ಲ ಇದಕ್ಕೆ ನಾನು ಈಗಲೂ ಬದ್ದ. ನಾನು ನನ್ನ ಹೆಂಡತಿ ಇಬ್ಬರು ಮಕ್ಕಳು ನನ್ನ ಆಸ್ತಿ ಘೋಷಣೆ ಮಾಡಿದ್ದೀನಿ.
ನಾನೇ ಪ್ರಾದೇಶಿಕ ಆಯುಕ್ತರ ಕಚೇರಿ ಮುಂದೆ ಧರಣಿ ಮಾಡಿ ತನಿಖೆಗೆ ಆಗ್ರಹಿಸಿದ್ದೆ. ನನ್ನ ಒತ್ತಡ, ಹೋರಾಟದ ಮೇಲೆ ಸರ್ವೇ ಕಾರ್ಯ ನಡೆದಿತ್ತು. ಈಗ ಸರ್ವೇ ಆಯುಕ್ತರು ಒಂದು ಪತ್ರ ಬರೆದಿದ್ದಾರೆ.

Social,Website,Sa.ra.Mahesh,District,Collector,Rohini Sindhuri

ಆರ್‌ಟಿಸಿ ಎಲ್ಲಿ ತೆಗೆದರೂ ದಾಖಲೆಗಳು ಸಿಗುತ್ತವೆ. ನನ್ನ ಹೇಳಿಕೆಗೆ ನಾನು ಈಗಲೂ ಬದ್ಧ. ಚೌಲ್ಟ್ರಿ ಜಾಗದಲ್ಲಿ ಒಂದೇ ಗುಂಟೆ ಒತ್ತುವರಿ ಆಗಿದ್ದರೆ ಅದನ್ನ ರಾಜ್ಯಪಾಲರಿಗೆ ಬರೆದುಕೊಡುವೆ. ಸಾರ್ವಜನಿಕ ಬದುಕು, ರಾಜಕೀಯ ಬದುಕಿನಿಂದ ನಿವೃತ್ತಿ ತೆಗೆದುಕೊಳ್ಳುವೆ. ಒತ್ತುವರಿ, ಗೋಮಾಳ ಅಥವಾ ಒಂದೇ ಒಂದು ಗುಂಟೆ ಖರಾಬು ನಿಮ್ಮ ಜಾಗದಲ್ಲಿದ್ದರೆ ತೋರಿಸಿ.

ಆರು ಬಾರಿ 8 ವರ್ಷದಿಂದ ಅಲ್ಲೇ ಇದ್ದೀರಲ್ಲ, ಎಷ್ಟು ಸಾಗುವಳಿ ದಾಖಲಿ ಕೊಟ್ಟಿದ್ದೀರಿ ಮನೀಶ್ ಮೌದ್ಗಿಲ್ ಅವರೇ ?ಭೂಮಾಪನ ಇಲಾಖೆ ಆಯುಕ್ತ ಮನೀಶ್ ಮೌದ್ಗಿಲ್‌ ವಿರುದ್ಧ ಸಾ.ರಾ.ಮಹೇಶ್ ಕೆಂಡಾಮಂಡಲ.

ನನ್ನನ್ನು ಬ್ಲಾಕ್ ಮೇಲ್ ಮಾಡಿ ಹೆದರಿಸಲು ಸಾಧ್ಯವಿಲ್ಲ.

ರೋಹಿಣಿ ಸಿಂಧೂರಿಯಾಗಲಿ, ಮನೀಶ್ ಮುದ್ಗಿಲ್ ಆಗಲಿ ನನ್ನನ್ನು ಬ್ಲಾಕ್ ಮೇಲ್ ಮಾಡಿ ಹೆದರಿಸಲು ಸಾಧ್ಯವಿಲ್ಲ. ನಾನು ಯಾವುದೇ ಬ್ಲಾಕ್ ಮೇಲ್ ಗೂ ಹೆದರುವುದಿಲ್ಲ. ಇದು ಪ್ರಾಮಾಣಿಕತೆ ಮತ್ತು ಭ್ರಷ್ಟಾಚಾರದ ನಡುವೆ ನಡೆಯುತ್ತಿರುವ ಹೋರಾಟ. ಇದನ್ನು ನಾನು ಇಲ್ಲಿಗೆ ನಿಲ್ಲಿಸುವುದಿಲ್ಲ. ನನ್ನ ಹೋರಾಟವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುತ್ತೇನೆ.

ನನ್ನ ಇದುವರೆಗಿನ ಸಾರ್ವಜನಿಕ ಬದುಕಿನಲ್ಲಿ ಎಂದೂ ಕೂಡ‌‌ ಕಿಕ್ ಬ್ಯಾಕ್ ಪಡೆದಿಲ್ಲ. ನನ್ನ ವಿರುದ್ಧ ಮಾಡಿರುವ ಆರೋಪಗಳಲ್ಲಿ ಒಂದನ್ನು ಸಾಬೀತು ಮಾಡಿದರೂ ಕೂಡ ರಾಜಕೀಯ ನಿವೃತ್ತಿ ತೆಗೆದುಕೊಳ್ಳುತ್ತೇನೆ. ಸಾರ್ವಜನಿಕ ಬದುಕಿನಿಂದ ದೂರವಾಗುತ್ತೇನೆ. ಬೇರೆಯವರನ್ನು ಬ್ಲಾಕ್ ಮೇಲ್ ಮಾಡಬಹುದು, ಆದರೆ ನನ್ನನ್ನು ಬ್ಲಾಕ್ ಮೇಲ್ ಮಾಡಲು ಸಾಧ್ಯವಿಲ್ಲ. ಶಾಸಕ ಸಾ ರಾ ಮಹೇಶ್ ಮೈಸೂರಿನಲ್ಲಿ ಹೇಳಿಕೆ.

ಎಚ್ ವಿಶ್ವನಾಥ್ ಗೆ ಶಾಸಕ ಸಾ ರಾ ಮಹೇಶ್ ತಿರುಗೇಟು :

ಯಾವುದೇ ರೀತಿಯ ತನಿಖೆ ನಡೆಸಿದರೂ ನಾನು ಹೆದರುವುದಿಲ್ಲ. ಎಂ ಎಲ್ ಸಿ, ಎಚ್ ವಿಶ್ವನಾಥ್ ಅವರು ಒಂದುಕಡೆ ಚೈನ್ ಹಿಡಿಯಲಿ. ಮನೀಶ್ ಮುದ್ಗಿಲ್ ಮತ್ತೊಂದು ಕಡೆ ಚೈನ್ ಹಿಡಿಯಲಿ. ಅದೇನಾದರೂ ಜೋತು ಬಿದ್ದರೆ ರೋಹಿಣಿ ಸಿಂಧೂರಿ ಎತ್ತಿ ಹಿಡಿದುಕೊಳ್ಳಲಿ. ಅವರೇ ನಿಂತು ಸರ್ವೆ ಮಾಡಿಸಲಿ ನನ್ನದು ಅಭ್ಯಂತರ ಇಲ್ಲ. ಸಚಿವ ಎಸ್ ಟಿ ಸೋಮಶೇಖರ್ ಕೂಡ ಕಾನೂನಿನ ಪ್ರಕಾರ ಎಲ್ಲವೂ ನಡೆಯಲಿ ಎಂದಿದ್ದಾರೆ. ಅವರೇನು ನನ್ನ ಪರವಾಗಿ ಮಾತನಾಡಿಲ್ಲ. ಶಾಸಕ ಸಾ ರಾ ಮಹೇಶ್ ಮೈಸೂರಿನಲ್ಲಿ ಹೇಳಿಕೆ.

 

key words: mysore-survey-ias-politics-sa.ra.mahesh