ದಲಿತ ಯುವಕನ ಮೇಲೆ ಹಲ್ಲೆ ಬೆತ್ತಲೆ ಮೆರವಣಿಗೆ ಖಂಡಿಸಿ ಮೌನ ಪ್ರತಿಭಟನೆ…

Promotion

ಮೈಸೂರು,ಜೂ, 30,2019(www.justkannada.in): ಗುಂಡ್ಲುಪೇಟೆ ತಾಲ್ಲೂಕಿನ ಕಬ್ಬೆಕಟ್ಟೆಯಲ್ಲಿ ದಲಿತ ಯುವಕನ ಮೇಲೆ ಹಲ್ಲೆ ನಡೆಸಿ ಬೆತ್ತಲೆ ಮೆರವಣಿಗೆ ಮಾಡಿರುವರುವುದನ್ನ ಖಂಡಿಸಿ ಮೈಸೂರಿನಲ್ಲಿ ಮೌನ ಪ್ರತಿಭಟನೆ ಮಾಡಲಾಯಿತು.

ವಿಶ್ವಮಾನವ ಮೈಸೂರು ವಿಶ್ವವಿದ್ಯಾನಿಲಯ ನೌಕರರ ಸಂಘದ ವತಿಯಿಂದ ಕುವೆಂಪು‌ ನಗರದ ಅಶೋಕ ಪುರಂ ಠಾಣೆ ಎದುರಿನ ಡಾ.ಬಿ.ಆರ್.ಅಂಬೇಡ್ಕರ್ ಪುತ್ಥಳಿ ಬಳಿ ಮೌನ ಪ್ರತಿಭಟನೆ ಮಾಡಲಾಯಿತು.

ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಮೈಸೂರು ವಿವಿಯ ಪ್ರಾಚ್ಯವಿದ್ಯಾ ಸಂಶೋಧನಾಲಯ ನಿರ್ದೇಶಕರಾದ ಪ್ರೊ.ಶಿವರಾಜಪ್ಪ, ಈ ಪ್ರಕರಣದಿಂದ ಕರ್ನಾಟಕವೆ ತಲೆತಗ್ಗಿಸುವ ಸ್ಥಿತಿಗೆ ಬಂದಿದೆ. ಇಂತಹ ಪ್ರಕರಣಗಳ ಮತ್ತೆ ಸಮಾಜದಲ್ಲಿ ನಡೆಯಬಾರದು. ಇಂತಹ ಕೃತ್ಯಗಳು ನಡೆಯಲು ಯಾರು ಬೆಂಬಲ ನೀಡಬಾರದು. ಇಂತಹ ಪ್ರಕರಣಗಳಿಗೆ ಬೆಂಬಲ ನೀಡುವವರನ್ನ ಬಂಧಿಸಿ ಸೂಕ್ತ ಶಿಕ್ಷೆ ನೀಡಬೇಕು. ಇದು ವಿಶ್ವಮಾನವ ಸಂಘದ ಆಗ್ರಹವಾಗಿದೆ ಎಂದು ಹೇಳಿದರು.

Key words: mysore-Silent –protests- condemning -assault – Dalit youth