ಸಿದ್ದರಾಮಯ್ಯ ಏನು ಆಗಲ್ಲ ಅಂತಾರೊ ಅದಾಗುತ್ತೆ-ಶಾಸಕ ಕೆ.ಎಸ್ ಈಶ್ವರಪ್ಪ ವ್ಯಂಗ್ಯ..

ಕೋಲಾರ,ಜೂ,30,2019(www.justkannada.in): ಸಿದ್ದರಾಮಯ್ಯ ಏನು ಆಗಲ್ಲ ಅಂತಾರೊ ಅದಾಗುತ್ತೆ, ಸಿದ್ದರಾಮಯ್ಯ ಏನು ಆಗತ್ತೆ ಅಂತಾರೊ ಅದು ಆಗಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಶಾಸಕ ಕೆಎಸ್ ಈಶ್ವರಪ್ಪ ವ್ಯಂಗ್ಯವಾಡಿದರು.

ಕೋಲಾರದ ಟಿ ಚನ್ನಯ್ಯ ರಂಗಮಂದಿರದಲ್ಲಿ ಕನಕ ನೌಕರರ ಸಂಘದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಬಳಿಕ ಮಾತನಾಡಿದ ಕೆಎಸ್ ಈಶ್ವರಪ್ಪ , ಮೋದಿ ಪ್ರಧಾನಿ ಆಗಲ್ಲ ಅಂದ್ರು, ಕುಮಾರಸ್ವಾಮಿ ಸಿಎಂ ಆಗಲ್ಲ ಅಂತಾ ಸಿದ್ದರಾಮಯ್ಯ ಅಂದ್ರು ಆದರೇ ಅದೆಲ್ಲವೂ ಆಗಿದೆ, ಸಿದ್ದರಾಮಯ್ಯ ಮತ್ತೆ ಮುಖ್ಯಮಂತ್ರಿ ಆಗ್ತೀನಿ ಅಂದ್ರು ಚಾಮುಂಡೇಶ್ಚರಿ ಕ್ಷೇತ್ರದಲ್ಲಿ ಸೋತರು ಎಂದು ಲೇವಡಿ ಮಾಡಿದರು.

ರಾಜ್ಯದಲ್ಲಿ ಹೆಸರಿಗೆ ಮಾತ್ರ ಒಂದು ಸರ್ಕಾರವಿದೆ ಸರ್ಕಾರದಿಂದ ಯಾವುದೇ ಜನರಿಗೆ ಲಾಭವಿಲ್ಲ, ಕೆಲಸಗಳು ಆಗ್ತಿಲ್ಲ, ದೇಶದಲ್ಲಿ ಕಾಂಗ್ರೆಸ್ ಸೋತಿದೆ,  ಇಲ್ಲಿ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡಿದೆ, ಉಸ್ತುವಾರಿ ಮಂತ್ರಿಗಳು ಜಿಲ್ಲೆಗಳಿಗೆ ಹೋಗ್ತಿಲ್ಲ ಎಂದು ಕೆ.ಎಸ್ ಈಶ್ವರಪ್ಪ ಕಿಡಿಕಾರಿದರು.

Keywords: kolar-MLA- KS Eshwarappa irony- Siddaramaiah