ಶೂಟೌಟ್ ಪ್ರಕರಣ: 500 ಕೋಟಿ ಹಣ ಬದಲಾವಣೆ ದಂಧೆ ವಿಷಯ ಬಹಿರಂಗ: ಎಫ್ ಐಆರ್ ದಾಖಲು

kannada t-shirts

ಮೈಸೂರು,ಮೇ,17,2019(www.justkannada.in): ಮೈಸೂರಿನಲ್ಲಿ ಪೊಲೀಸರ ಶೂಟ್ ಔಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ  ಪ್ರಕರಣದಲ್ಲಿ 500 ಕೋಟಿ ಹಣ ಬದಲಾವಣೆ ದಂಧೆ ನಡೆಯುತ್ತಿದ್ದ ವಿಷಯ ಬಹಿರಂಗವಾಗಿದ್ದು, ಎಫ್ ಐಆರ್ ದಾಖಲಾಗಿದೆ.

ಪ್ರಕರಣ ಸಂಬಂಧ ಇನ್ಸ್ ಪೆಕ್ಟರ್ ಬಿ.ಜಿ.ಕುಮಾರ್ ವಿಜಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರು ದಾಖಲಿಸಿಕೊಂಡು ಎಫ್‌ಐಆರ್ ಹಾಕಲಾಗಿದೆ.

ಪ್ರಕರಣ ಕುರಿತು ವಿವರವಾಗಿ ತಿಳಿಸಿರುವ ಇನ್ಸ್ ಪೆಕ್ಟರ್ ಬಿ.ಜಿ.ಕುಮಾರ್, ನಾನು ಪೋಲೀಸ್ ನಿರೀಕ್ಷಕನಾಗಿ ಮೈಸೂರು ನಗರ , ವಿಜಯನಗರ ಪೊಲೀಸ್ ಠಾಣೆಯಲ್ಲಿ 6 ತಿಂಗಳಿನಿಂದ ಕರ್ತವ್ಯ ನಿರ್ವಹಿಸುತ್ತಿದ್ದೇನೆ.  ಮೂರು ವಾರಗಳಿಂದ ಮೈಸೂರು ನಗರದಲ್ಲಿ ಹೆಚ್ಚಿನ ಸರಗಳ್ಳತನಗಳು ವರದಿಯಾಗುತ್ತಿದ್ದ ಹಿನ್ನೆಲೆ, ಪ್ರತಿ ದಿನ ಬೆಳಗಿನ ಜಾವ ನಗರದ ಎಲ್ಲಾ ಅಧಿಕಾರಿ ವತ್ತು ಸಿಬ್ಬಂದಿಗಳ ಜೊತೆ ಗಸ್ತು ಕರ್ತವ್ಯ ನಿರ್ವಹಿಸುತ್ತಿದ್ದೆ. ಈ ದಿನ ಬೆಳಗ್ಗೆ ಸುಮಾರು 8 – 00 ಗಂಟೆಗೆ ನನಗೆ ನಮ್ಮ ಬಾತ್ಮೀದಾರರೊಬ್ಬರು ದೂರವಾಣಿ ಕರೆ ಮಾಡಿ, ಅಮಾನೀಕರಣಗೊಂಡು ರದ್ದಾಗಿರುವ ಹಳೆ ಹಣವನ್ನು ಪಡೆದುಕೊಂಡು ಹೊಸದಾಗಿ ಚಲಾವಣೆಯಲ್ಲಿರುವ ಹಣವನ್ನು ನೀಡುವುದಾಗಿ ಒಬ್ಬ ವ್ಯಕ್ತಿ  ಹೇಳುತ್ತಿದ್ದಾನೆ.  ನನ್ನಿಂದ 10 ಲಕ್ಷ ಹಣವನ್ನು ಪಡೆದುಕೊಂಡು ವಾಪಸ್ ನೀಡದೆ ಮೋಸ ಮಾಡಿದ್ದಾನೆ. ಅದರ ಜೊತೆಗೆ ಈತ 500 ಕೋಟಿ ಅಮಾನೀಕರಣಗೊಂಡ ಹಣವನ್ನು ಬದಲಾಯಿಸಿ ಕೊಡುವುದಾಗಿ ತಿಳಿಸಿದ್ದ. ವಿಜಯನಗರದ ಎಸ್ . ವಿ ಅಪಾರ್ಟ್‌ಮೆಂಟ್ ಕಡೆ ಬರುವುದಾಗಿ ತಿಳಿಸಿದ್ದಾನೆಂದು ನನಗೆ  ಮಾಹಿತಿ ನೀಡಿದರು.

ಕೆ . ಎ – 09  6031 ಕಾರು ಎಂದು ನನ್ನ ಮೊಬೈಲ್‌ಗೆ ಮಸೇಜ್ ಮಾಡಿದರು. ಸಿಬ್ಬಂದಿಗಳಾದ ಎಎಸ್‌ಐ ವೆಂಕಟೇಶ್‌ಗೌಡ , ಸಿಸಿ ಮಹೇಶ್ ಪಿಸಿ ವೀರಭದ್ರ ರವರೊಂದಿಗೆ ಸಮಯ ಬೆಳಗ್ಗೆ ಸುಮಾರು 9 – 15 ಗಂಟೆಗೆ ಎಸ್ . ಎ ಅಪಾರ್ಟ್‌ಮೆಂಟ್ ಸ್ಥಳಕ್ಕೆ ಹೋಗಿದ್ದವು. ಕಾರಿನಲ್ಲಿದ್ದಾತ ನನಗೆ ಕಾಲಿನಿಂದ ಒದ್ದು ನನ್ನ ಬಳಿ ಇದ್ದ ಪಿಸ್ತೂಲನ್ನು ಕಿತ್ತುಕೊಳ್ಳಲು ಪ್ರಯತ್ನಿಸಿದನು.

ಆ ಸಮಯದಲ್ಲಿ ನಾನು ನಮ್ಮ ಸಿಬ್ಬಂದಿದವರನ್ನು ಬಿಡುವಂತೆ ವಿನಂತಿ ಮಾಡಿದ್ದೆ ಆದರೂ ಸಹ ಅವರನ್ನು ಬಿಡದಂತೆ ಬಿಗಿಯಾಗಿ ಹಿಡಿದುಕೊಂಡಿದ್ದನು. ನಾನು ಕೂಡಲೇ ನಮ್ಮ ಸಿಬ್ಬಂದಿದವರಿಗೆ ತೊಂದರೆಯಾಗುತ್ತದೆ ಎಂದು ಹೇಳಿ ನನ್ನ ಪಿಸ್ತೂಲಿನಿಂದ ಗಾಳಿಯಲ್ಲಿ ಗುಂಡು ಹಾರಿಸಿ ಎಚ್ಚರಿಕೆ ನೀಡಿದೆ.

ಆದರೂ ಅವರನ್ನು ಬಿಡದೆ, ತನ್ನ ಬಳಿಯಿದ್ದ ಗನ್ ಅನ್ನು ತೆಗೆದು ನಮ್ಮಗಳ ಮೇಲೆ ಗುರಿಯಿಟ್ಟು ಗುಂಡು ಹಾರಿಸಲು ಪ್ರಯತ್ನಿಸಿದ. ಕಾರಣ ನಾನು ನನ್ನ ಸಿಬ್ಬಂದಿಯವರುಗಳ ಮತ್ತು ನನ್ನ ಪ್ರಾಣಕ್ಕೆ ತೊಂದರೆಯಾಗುತ್ತದೆ ಎಂದು ತಿಳಿದು ಅಂತಿಮವಾಗಿ ಸದ ಸಿಬ್ಬಂದಿಗಳ ಪ್ರಾಣ ರಕ್ಷಣೆ ಮತ್ತು ನನ್ನ ಆತ್ಮ ರಕ್ಷಣೆಗಾಗಿ ನನ್ನ ಬಳಿ ಇದ್ದ ಸರ್ವೀಸ್ ಪಿಸ್ತೂಲಿನಿಂದ ಗುಮಾನ ಆಸಾಮಿಗೆ ಗುಂಡು ಹಾರಿಸಿದೆ ಎಂದು ವಿವರಿಸಿದ್ದಾರೆ.

Key words: mysore-Shootout –case- Rs 500 crore – change – FIR filed

website developers in mysore