ಮೈಸೂರಿಗೆ ಬಂದಿಳಿದ ನಟ ಅಕ್ಷಯ್ ಕುಮಾರ್ : ಬಂಡೀಪುರದಲ್ಲಿ  ಬಿಟೌನ್ ‘ಕಿಲಾಡಿ’

Promotion

 

ಮೈಸೂರು, ಜ.29, 2020 : (www.justkannada.in news ) : ಡಿಸ್ಕವರಿ ಚಾನಲ್ ನ ಡಾಕ್ಯೂಮೆಂಟರಿಯ ಚಿತ್ರೀಕರಣದಲ್ಲಿ ಭಾಘವಹಿಸುವ ಸಲುವಾಗಿ ಬಾಲಿವುಡ್ ನಟ ಅಕ್ಷಯ್ ಕುಮಾರ್ ಇಂದು ಸಂಜೆ ಮೈಸೂರಿಗೆ ಆಗಮಿಸಿದರು.

ಇಂದು ಸಂಜೆ ವಿಶೇಷ ವಿಮಾನದ ಮೂಲಕ  ಮೈಸೂರಿನ ಮಂಡಕ್ಕಳ್ಳಿ ವಿಮಾನ ನಿಲ್ದಾಣಕ್ಕೆ ಬಂದಿಳಿದ ನಟ ಅಕ್ಷಯ್ ಕುಮಾರ್, ಬಳಿಕ ಅಲ್ಲಿಂದ ರಸ್ತೆ ಮಾರ್ಗವಾಗಿ   ಬಂಡೀಪುರದ ಸೆರಾಯ್‌ ರೆಸಾರ್ಟ್‌ಗೆ ತೆರಳಿ ಇಂದು ಅಲ್ಲಿ  ವಾಸ್ತವ್ಯ ಹೂಡುವರು.

mysore-shooting-bandipura-man v/s wild-akshaykumar-bollywood-actor-mandakalli-airport

ನಾಳೆ ‘ ಇಂಟು ದಿ ವೈಲ್ಡ್ ವಿತ್ ಬೇರ್ ಗ್ರಿಲ್ಸ್ ಕಾರ್ಯಕ್ರಮದಲ್ಲಿ ಭಾಗವಹಿಸಲಿರುವ ಅಕ್ಷಯ್ ಕುಮಾರ್.

ಬೇರ್ ಗ್ರಿಲ್ಸ್ ನಡೆಸಿಕೊಡುವ ‘ ದಿ ವೈಲ್ಡ್ ವಿತ್ ಬೇರ್ ಗ್ರಿಲ್ಸ್ ‘  ಕಾರ್ಯಕ್ರಮ. ಈಗಾಗಲೇ ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ಚಿತ್ರೀಕರಣ ಪೂರ್ಣಗೊಂಡಿದ್ದು, ನಿನ್ನೆಯಷ್ಟೆ ಮೈಸೂರಿನಿಂದ ಚೆನ್ನೈಗೆ ಪ್ರಯಾಣಿಸಿದ್ದರು.

mysore-shooting-bandipura-man v/s wild-akshaykumar-bollywood-actor-mandakalli-airport

ಇದೀಗ ಬಾಲಿವುಡ್ ನಟ ಅಕ್ಷಯ್ ಕುಮಾರ್, ಚಿತ್ರೀಕರಣದಲ್ಲಿ  ಭಾಗವಹಿಸುವ ಸಲುವಾಗಿ ಆಗಮಿಸಿದ್ದು, ಜ.30 ರಂದು ಚಿತ್ರೀಕರಣ ಮುಗಿಸಿ ಮತ್ತೆ ಮುಂಬೈಗೆ ತೆರಳಿದ್ದಾರೆ.

 

Key words : mysore-shooting-bandipura-man v/s wild-akshaykumar-bollywood-actor-mandakalli-airport