ರಾಜ್ಯಮಟ್ಟದಲ್ಲಿ ಚಿನ್ನದ ಪದಕ ಮತ್ತು ಹಲವು ಬಹುಮಾನ ಗಳನ್ನ ಗೆದ್ಧ ವಿದ್ಯಾರ್ಥಿಗಳಿಗೆ ಸನ್ಮಾನ…

Promotion

ಮೈಸೂರು,ಏಪ್ರಿಲ್,20,2021(www.justkannada.in): ರಾಜ್ಯಮಟ್ಟದಲ್ಲಿ  ಚಿನ್ನದ ಪದಕ ಮತ್ತು ಹಲವು  ಬಹುಮಾನಗಳನ್ನು ಗೆದ್ದ ಶ್ರೀಶಂಕರ ವಿಲಾಸ ಸಂಸ್ಕೃತ ಕಾಲೇಜಿನ ವಿದ್ಯಾರ್ಥಿಗಳನ್ನು ರೋಟರಿ ಮೈಸೂರ್ ಸೌತ್ ಈಸ್ಟ್ ಕ್ಲಬ್ ಮತ್ತು ಇನ್ನರ್ ವೀಲ್ ಕ್ಲಬ್  ವತಿಯಿಂದ ಗೌರವಿಸಲಾಯಿತು.jk

ಸಿ.ಸೌಮ್ಯಾ ಅವರು 2018-19ನೇ ಶೈಕ್ಷಣಿಕ ವರ್ಷದಲ್ಲಿ ಶಕ್ತಿ ವಿಶಿಷ್ಠ ದ್ವೈತ ವೇದಾಂತದಲ್ಲಿ ಎಂ.ಎ.ಆಚಾರ್ಯದಲ್ಲಿ 2 ಚಿನ್ನದ ಪದಕಗಳನ್ನು ಪಡೆದಿದ್ದಾರೆ. ಕೆ.ಎಸ್.ಪವಿತ್ರಾ ಅವರು 2019-20ನೇ ಶೈಕ್ಷಣಿಕ ವರ್ಷದಲ್ಲಿ ಶಕ್ತಿ ವಿಶಿಷ್ಠ ದ್ವೈತ ವೇದಾಂತದಲ್ಲಿ ಎಂ.ಎ.ಆಚಾರ್ಯದಲ್ಲಿ 2 ಚಿನ್ನದ ಪದಕಗಳನ್ನು ಪಡೆದಿದ್ದಾರೆ.

ಎಂ.ಎನ್.ಕನ್ನಿಕಾ ಅವರು ಅಲಂಕಾರ ಬಿ.ಎ.ಶಾಸ್ಟ್ರಿಯಲ್ಲಿ ಅಗ್ರಸ್ಥಾನವನ್ನು ಗಳಿಸಿದರು ಮತ್ತು ಸಂಸ್ಕೃತ ಸಂಸೋಧನ ಸಂಸ್ಥೆ ನಡೆಸಿದ ರಾಜ್ಯ ಮಟ್ಟದ ಸಂಸ್ಕೃತ ಚರ್ಚಾ ಸ್ಪರ್ಧೆಯಲ್ಲಿ 2 ನೇ ಬಹುಮಾನವನ್ನೂ ಪಡೆದಿದ್ದಾರೆ. ರಾಜ್ಯಮಟ್ಟದ ಸಂಸ್ಕೃತ ಬರವಣಿಗೆ ಸ್ಪರ್ಧೆಯಲ್ಲಿ ಪ್ರಜ್ವಲ್ ರಾಜೇ ಅರಸ್ ಸಮಾಧಾನಕರ ಬಹುಮಾನ ಪಡೆದಿದ್ದಾರೆ.

ರಾಜ್ಯಮಟ್ಟದ ಸಂಸ್ಕೃತ ಚರ್ಚಾ ಸ್ಪರ್ಧೆಯಲ್ಲಿ ಜಿ.ಜನಾರ್ಧನ್ ಕುಮಾರ್ ಅವರು ಸಮಾಧಾನಕರ ಬಹುಮಾನ ಪಡೆದರು. ಹರಿಪ್ರಿಯಾ.ಜಿ.ಲೋಕಾ ಅವರು ರಾಜ್ಯ ಮಟ್ಟದ ಸಂಸ್ಕೃತ ಕಂಠ ಪಾಠ ಸ್ಪರ್ಧೆಯಲ್ಲಿ ಸಮಾಧಾನಕರ ಬಹುಮಾನ ಪಡೆದಿದ್ದು ವಿದ್ಯಾರ್ಥಿಗಳನ್ನ ಸನ್ಮಾನಿಸಲಾಯಿತು. ಮತ್ತು ಶ್ರೀಶಂಕರ ವಿಲಾಸ್ ಸಂಸ್ಕೃತ ಕಾಲೇಜಿನ ಪ್ರಾಂಶುಪಾಲರಾದ ಶ್ರೀನಿವಾಸ್ ಮೂರ್ತಿ ಅವರನ್ನು ಗೌರವಿಸಲಾಯಿತು.mysore-rotary-mysore-south-east-club-inner-wheel-club-state-level-gold-medal-proud-students

ರೋಟರಿ ಪ್ರೆಸಿಡೆಂಟ್ ರೋ.ರಾಜೀವ್, ಕಾರ್ಯದರ್ಶಿ ರೋ.ಮೋಹನ್, ರೋ. ಜ್ಞಾನಶಂಕರ್, ರೋ.ರಮೇಶ್ ರಾವ್, ರೋ.ರವೀಂದ್ರ, ರೋ. ಮುರಳೀಧರ್ ಕೆ.ಎನ್ ರೋ. ಮಹೇಶ್, ರೋ. ನಾಗರಾಜ್   ಹಾಗೂ ಇನ್ನರ್ ವೀಲ್ ಪ್ರೆಸಿಡೆಂಟ್ ಶುಭಾ ಮುರಳೀಧರ್, ಕಾರ್ಯದರ್ಶಿ ವೀಣಾ ರವೀಂದ್ರ ಉಪಸ್ಥಿತರಿದ್ದರು.

Key words: mysore- Rotary Mysore South East Club – Inner Wheel Club -State Level- Gold Medal-proud -students.