ಪೊಲೀಸ್ ಠಾಣೆ ಮೆಟ್ಟಿಲೇರಿದ ಮೈಸೂರು ‘ರಂಗಾಯಣ’ ವಿವಾದ ಪ್ರಕರಣ.

 

ಮೈಸೂರು, ಡಿ.15, 2021 : (www.justkannada.in news) : ರಂಗಾಯಣದ ಬಹುರೂಪಿ ನಾಟಕೋತ್ಸವ ಸಂಬಂಧದ ವಿವಾದ ಇದೀಗ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ರಂಗಾಯಣ ಕಲಾವಿದರಿಗೆ ರಕ್ಷಣೆ ನೀಡುವಂತೆ ಕೋರಿ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ಪೊಲೀಸರಿಗೆ ದೂರು ನೀಡಿದ್ದಾರೆ.

ನಮ್ಮ ಕಲಾವಿದರಿಗೆ ಆಪತ್ತು ಇದೆ.ಕಲಾವಿರದನ್ನು ಕಾಪಾಡಿ. ರಂಗ ಮಂದಿಗಳಗಳನ್ನು ಕಿಡಿಕೇಡಿಗಳಿಂದ ಉಳಿಸಿಕೊಡಿ ಎಂದು ರಂಗಾಯಣ ನಿರ್ದೇಶಕ ಅಡ್ಡಂಡ ಕಾರ್ಯಪ್ಪರಿಂದ ಜಯಲಕ್ಷ್ಮಿಪುರಂ ಪೊಲೀಸ್ ಠಾಣೆಗೆ ದೂರು.

ಹಿರಿಯ ರಂಗ ಕಲಾವಿದರು ಹಾಗೂ ಪ್ರಗತಿಪರರ ವಿರುದ್ಧ ದೂರು. ಬಹುರೂಪಿ ನಾಟಕೋತ್ವ ಅತಿಥಿ ಆಹ್ವಾನ ವಿಚಾರಕ್ಕೆ ಉಂಟಾಗಿರುವ ಭಿನ್ನಾಭಿಪ್ರಾಯ. ಚಕ್ರವರ್ತಿ ಸೂಲಿಬೆಲೆ ಹಾಗೂ ನಟಿ, ಬಿಜೆಪಿ ವಕ್ತಾರೆ ಮಾಳವೀಕ ಆಹ್ವಾನಕ್ಕೆ ವಿರೋಧ. ವಿರೋಧ ವ್ಯಕ್ತಪಡಿಸಿರುವ ಪ.ಮಲ್ಲೇಶ್, ಜನಾರ್ದನ್, ಜಾಕಿರ್ ಹುಸೇನ್, ಮೈಮ್ ರಮೇಶ್ ಸೇರಿ ಹಲವರ ವಿರುದ್ಧ ದೂರು.

ಬಹುರೂಪಿ ನಿಲ್ಲಿಸುವುದಾಗಿ ಬೆದರಿಕೆ ಹಾಕಿರುವ ಹಾಗೂ ಕಲಾವಿದರಿಗೆ ತೊಂದರೆ ಕೊಡುತ್ತಿರುವ ಬಗ್ಗೆ ದೂರಿನಲ್ಲಿ ಉಲ್ಲೇಖ. ರಂಗ ಚಟುವಟಿಕೆ ನಡೆಸಲು ತೊಂದರೆ ಕೊಡುತ್ತಿದ್ದು, ಸಂಸ್ಥೆಗೆ ಹಾಗೂ ಸಂಸ್ಥೆಯ ಕಲಾವಿದರಿಗೆ ರಕ್ಷಣೆ ಕೊಡಿ ಎಂದು ನೀಡಿರುವ ದೂರು.

Adivasis-Social-Awareness-raise-Rangayana-Special-Program 

key words : Mysore-rangayana-director-complaints-to-police-station