ಕೊರೋನಾ ಎಫೆಕ್ಟ್ ವ್ಯಾಪಾರದಲ್ಲಿ ಲಾಸ್: ವ್ಯಕ್ತಿ ಆತ್ಮಹತ್ಯೆಗೆ ಶರಣು.

ಮೈಸೂರು,ಡಿಸೆಂಬರ್,15,2021(www.justkannada.in):  ಕೊರೊನಾ ಎಫೆಕ್ಟ್ ನಿಂದಾಗಿ ವ್ಯಾಪಾರದಲ್ಲಿ ಲಾಸ್ ಆದ ಹಿನ್ನೆಲೆ ವ್ಯಕ್ತಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.

ಮೈಸೂರಿನ ಎನ್.ಆರ್.ಮೊಹಲ್ಲಾದಲ್ಲಿ ಈ ಘಟನೆ ನಡೆದಿದೆ. ಹುಣಸೂರು ಮೂಲದ ರಿಚರ್ಡ್ಸನ್(30) ಆತ್ಮಹತ್ಯೆಗೆ ಶರಣಾದ ವ್ಯಕ್ತಿ. ಮೈಸೂರಿನ ನಾಯ್ಡು ನಗರದಲ್ಲಿ ಸಹೋದರಿಯ ಮನೆಯಲ್ಲಿ ರಿಚರ್ಡ್ಸನ್ ತಂಗಿದ್ದನು. ಬೆಂಗಳೂರಿನಲ್ಲಿ ವ್ಯಾಪಾರ ವಹಿವಾಟು ನಡೆಸುತ್ತಿದ್ದ.

ವ್ಯಾಪಾರಕ್ಕಾಗಿ ಬ್ಯಾಂಕ್ ಹಾಗೂ ಖಾಸಗಿ ವ್ಯಕ್ತಿಗಳಿಂದ ಸಾಲ ಪಡೆದಿದ್ದರು. ಕಳೆದ ಒಂದೂವರೆ ವರ್ಷದಿಂದ ಕೋವಿಡ್ ನಿಂದಾಗಿ ವ್ಯಾಪಾರದಲ್ಲಿ ನಷ್ಟ ಅನುಭವಿಸಿದ್ದ ರಿಚರ್ಡ್ಸನ್ ವ್ಯಾಪಾರದಲ್ಲಿ ನಷ್ಟವಾಗಿ ಖಿನ್ನತೆಗೆ ಒಳಗಾಗಿದ್ದ. ಈ ಮಧ್ಯೆ ಎನ್.ಆರ್.ಮೊಹಲ್ಲಾದ ರೇಡಿಯೋ ಪಾರ್ಕ್ ನಲ್ಲಿ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದು ಈ ಕುರಿತು ಎನ್.ಆರ್.ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Key words: Corona- Effect- Loss –Business-person – suicide-mysore