ರಾಜಕಾಲುವೆ ಮುಚ್ಚಿದ ಹಿನ್ನೆಲೆ ಮನೆಗೆ ನುಗ್ಗಿದ ನೀರು: ಕೇಳುವವರಿಲ್ಲ ನಿವಾಸಿಗಳ ಗೋಳು..

ಮೈಸೂರು,ಸೆಪ್ಟಂಬರ್,9,2020(www.justkannada.in): ಮಳೆಯಾದ ಹಿನ್ನೆಲೆ  ಮೈಸೂರು ತಾಲ್ಲೂಕಿನ ಶೆಟ್ಟಿನಾಯಕನಹಳ್ಳಿಯ ಕೆಲ ನಿವಾಸಿಗಳ ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಠಿಸಿದೆ.jk-logo-justkannada-logo

ಈ ನಡುವೆ ರಾಜಕಾಲುವೆ ಮುಚ್ಚಿದ ಹಿನ್ನೆಲೆ ಅಲ್ಲಿನ ನಿವಾಸಿಗಳ ಮನೆಗೆ ನೀರು ನುಗ್ಗಿದ್ದು ಮನೆ ಜಲಾವೃತವಾಗಿ ನಿವಾಸಿಗಳು ಸಾಕಷ್ಟು ತೊಂದರೆಗೆ ಸಿಲುಕಿದ್ದಾರೆ. ಪ್ರಭಾವಿ ವ್ಯಕ್ತಿಗಳು  ರಾಜಕಾಲುವೆ ಒತ್ತುವರಿ ಮಾಡಿಕೊಂಡಿದ್ದು  ರಾಜಕಾಲುವೆಯನ್ನೇ ರಸ್ತೆಯನ್ನಾಗಿ ಒತ್ತುವರಿಮಾಡಿಕೊಂಡ ಆರೋಪ ಕೇಳಿಬಂದಿದೆ.mysore-rajkaluve-rain-house

ಇನ್ನು ರಾಜಕಾಲುವೆ ಒತ್ತುವರಿ ಹಿನ್ನೆಲೆ ಚಾಮುಂಡೇಶ್ವರಿ ಕ್ಷೇತ್ರ ವ್ಯಾಪ್ತಿ ಶೆಟ್ಟನಾಯಕನ ಹಳ್ಳಿ ಗ್ರಾಮದ ನಿವಾಸಿಗಳ ಮನೆಗೆ ಮಳೆ ನೀರು ನುಗ್ಗಿದ್ದು ಮನೆಯಲ್ಲಿ ಮಲಗಲೂ ಜಾಗವಿಲ್ಲದೆ ನಿವಾಸಿಗಳು ಪರದಾಡುವ ಪರಿಸ್ಥಿತಿ ಉಂಟಾಗಿದೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಹೀಗಾಗಿ ಕೂಡಲೇ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಸಮಸ್ಯೆ ಬಗೆಹರಿಸುವಂತೆ ನಿವಾಸಿಗಳು ಮನವಿ ಮಾಡಿದ್ದಾರೆ.

Key words: mysore- rajkaluve- rain- house