ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಕಂಚಿನ ಪ್ರತಿಮೆ ಅನಾವರಣಗೊಳಿಸಿದ ಮೈಲಾಕ್ ಅಧ್ಯಕ್ಷ ರಘು ಕೌಟಿಲ್ಯ.

Promotion

ಮೈಸೂರು,ಮಾರ್ಚ್,25,2023(www.justkannada.in):  ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಕಂಚಿನ ಪ್ರತಿಮೆಯನ್ನ ಮೈಸೂರು ಪೇಯಿಂಟ್ಸ್ ಮತ್ತು ವಾರ್ನಿಷ್ ಅಧ್ಯಕ್ಷ ರಘು ಕೌಟಿಲ್ಯ ಅನಾವರಣಗೊಳಿಸಿದರು.

ಮೈಸೂರು ಪೇಯಿಂಟ್ಸ್ ಮತ್ತು ವಾರ್ನಿಷ್ ಲಿಮಿಟೆಡ್ ನ ಅಮೃತ ಮಹೋತ್ಸವ ಹಿನ್ನಲೆ ನಡೆದ ಕಾರ್ಯಕ್ರಮದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಕಂಚಿನ ಪ್ರತಿಮೆಯನ್ನ ರಘು ಕೌಟಿಲ್ಯ ಉದ್ಘಾಟನೆ ಮಾಡಿದರು.

ನಂತರ ಮಾತನಾಡಿದ ಅವರು, ಈ ಹಿಂದೆ ಇದ್ದಂತಹ ಪ್ರತಿಮೆ ಹಳೆಯದಾಗಿತ್ತು. ಹಾಗಾಗಿ ಇಂದು ನೂತನ ಕಂಚಿನ ಪ್ರತಿಮೆ ಅನಾವರಣ ಮಾಡಿದ್ದೇವೆ. ಮೈಸೂರು ಮಹಾರಾಜರ ಕುಟುಂಬದ ಮೇಲೆ ನಮಗೆ ಅಪಾರವಾದ ಗೌರವವಿದೆ. ಮೈಸೂರು ಮಹಾರಾಜರು ನಿರ್ಮಿಸಿರುವ ಈ ಸಂಸ್ಥೆಯನ್ನ ಉಳಿಸಬೇಕಿದೆ ಎಂದು ಹೇಳಿದರು.

Key words: mysore- Raghu Kautilya – statue – Nalvadi Krishnaraja Wodeyar.