63 ವರ್ಷದ ಆಸ್ತಿ ವಿವಾದದ ಪ್ರಕರಣ ಲೋಕ ಅದಾಲತ್ ನಲ್ಲಿ ಇತ್ಯರ್ಥ.

Promotion

ಮೈಸೂರು,ಮಾರ್ಚ್,12,2022(www.justkannada.in): 63 ವರ್ಷದ ಆಸ್ತಿ ವಿವಾದದ ಪ್ರಕರಣ ಲೋಕ ಅದಾಲತ್ ನಲ್ಲಿ ಇತ್ಯರ್ಥವಾಗಿದ್ದು, ತಾತನ ಕಾಲದ ಆಸ್ತಿ ವಿವಾದವನ್ನ ಮೈಸೂರಿನ ನ್ಯಾಯಾಲಯ ಲೋಕ್ ಅದಾಲತ್ ನಲ್ಲಿ ರಾಜಿ ಮೂಲಕ ಬಗೆಹರಿಸಿದೆ.

ವಿಶಿಷ್ಟ ಪ್ರಕರಣವನ್ನ ಯಶಸ್ವಿಯಾಗಿ  ಬಗೆಹರಿಸಿದ್ದು, ವಿಡಿಯೋ ಕಾನ್ಫಿರೆನ್ಸ್ ಮೂಲಕ ಸುಪ್ರೀಂ ಕೋರ್ಟ್ ನ್ಯಾಯಾಧೀಶರು ಹಾಗೂ ಮೈಸೂರಿನ ನ್ಯಾಯಾಧೀಶರು ಭಾಗಿಯಾಗಿದ್ದರು. ಇದೇ ವೇಳೆ  ಆಸ್ಪತ್ರೆಯಲ್ಲಿ ಆಕ್ಸಿಜನ್ ಮೂಲಕ ಚಿಕಿತ್ಸೆ ಪಡೆಯುತ್ತಿದ್ದ ಕಕ್ಷಿಧಾರೆಯು  ವಿಸಿ ಮೂಲಕ ಸಂಧಾನದಲ್ಲಿ ಭಾಗಿಯಾಗಿದ್ದರು.  ಲೋಕ್ ಅದಾಲತ್ ನಲ್ಲಿ ನ್ಯಾಯಾಧೀಶರು, ವಕೀಲರು ಹಾಗೂ ಸಿಬ್ಬಂದಿಯ ಕಾರ್ಯವೈಖರಿಗೆ ಕುಟುಂಬಸ್ಥರ ಮೆಚ್ಚುಗೆ ವ್ಯಕ್ತಪಡಿಸಿದರು.

ಜೊತೆಗ ಲೋಕ್ ಅದಾಲತ್ ನಲ್ಲಿ 30 ಜೋಡಿಗಳು ಮತ್ತೆ ಒಂದಾಗಿದ್ದು, ಡೈವೋರ್ಸ್ ಗೆ ಮುಂದಾಗಿದ್ದ 30 ಜೋಡಿಗಳನ್ನ ಲೋಕ್ ಅದಾಲತ್ ಮೂಲಕ  ಮೈಸೂರು ನ್ಯಾಯಾಲಯ ಮತ್ತೆ ಒಂದು ಮಾಡಿದೆ. ಇಲ್ಲಿಯವರೆಗೆ 45 ಸಾವಿರ ಪ್ರಕರಣಗಳು ರಾಜಿ ಮೂಲಕ ಇತ್ಯರ್ಥವಾಗಿದ್ದು, ಲೋಕ್ ಅದಾಲತ್ ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

ಕಳೆದ ಬಾರಿ ಇಡೀ ರಾಜ್ಯದಲ್ಲಿ ಅತಿ ಹೆಚ್ಚು ಪ್ರಕರಣಗಳನ್ನ ರಾಜಿ ಸಂಧಾನಗಳ ಮೂಲಕ ಮೈಸೂರು ನ್ಯಾಯಾಲಯ ಯಶಸ್ವಿಗೊಳಿಸಿತ್ತು. ಈ ಬಾರಿಯೂ ಹೆಚ್ಚಿನ ಸಂಖ್ಯೆಯ ಪ್ರಕರಣ ಇತ್ಯರ್ಥಗೊಳಿಸಲಾಗಿದೆ. 1969ರ ಆಸ್ತಿ ವಿವಾದದ ಪ್ರಕರಣವನ್ನ ರಾಜಿ ಸಂಧಾನದ ಮೂಲಕ ರಾಜಿ ಮಾಡಿದ್ದು ಈ ಬಾರಿಯ ವಿಶೇಷ. ಈ ಪ್ರಕರಣವನ್ನ ಇತ್ಯರ್ಥ ಮಾಡಲು ಸುಪ್ರೀಂ ಕೋರ್ಟ್ ನ್ಯಾಯಾಧೀಶ ಯು.ಯು ಲಲಿತ್ ಅವರು ವಿಡಿಯೋ ಕಾನ್ಫಿರೆನ್ಸ್ ಮೂಲಕ ಸಾಕಷ್ಟು ಸಲಹೆ ನೀಡಿದ್ದರು. ಹಾಗಾಗಿ ಈ ಪ್ರಕರಣ ಲೋಕ್ ಅದಾಲತ್ ನಲ್ಲಿ ಇತ್ಯರ್ಥವಾಗಿದೆ.

ಜೊತೆಗೆ 30 ಡೈವೋರ್ಸ್ ಪ್ರಕರಣಗಳ ಜೋಡಿಗಳನ್ನ ಒಂದುಮಾಡಲಾಗಿದೆ. ಲೋಕ್ ಅದಾಲತ್ ಯಶಸ್ವಿಯಾಗಲು  ವಕೀಲರು , ಸಿಬ್ಬಂದಿ ಹಾಗೂ ಪೊಲೀಸರು ಸಹಕಾರ ಪ್ರಮುಖವಾಗಿತ್ತು ಎಂದು ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಮತ್ತು ಸತ್ರ ನ್ಯಾಯದೀಶ ರಘುನಾಥ್ ಮಾಹಿತಿ ನೀಡಿದರು.

ENGLISH SUMMARY…

63 year old property case settled in Lok Adalat
Mysuru, March 12, 2022 (www.justkannada.in): A 63-year-old property case was settled in the Lok Adalat held today in Mysuru.
The case was settled with the participation of the Supreme Court Judge and Judge of a Mysuru court through video conferencing. The applicant who was hospitalized participated in the settlement case also participated in the video conference. The family members of the complainants expressed their appreciation for the organizing and working of the Hon’ble judges, advocates, and staff.
A total number of 30 pairs, who had applied for divorce, participated in the Lok Adalat, and they have united again at the Lok Adalat. A total number of 45,000 cases have been settled through the Lok Adalat, which has received a good response.
The Mysuru Court had achieved the highest number of settlements in the State last year. This year also it has followed the same. This Lok Adalat’s highlight was the settlement of the 1969 property case. Hon’ble Supreme Court Judge U.U. Lalith participated through video conference and gave a lot of suggestions, which helped to settle the case.
Keywords: Lok Adalat/ Mysuru/ good response/ 63-year-old case settled.

Key words: mysore- property -dispute –settled – Lokadalat