ಲಾ ಅಂಡ್ ಆರ್ಡರ್ ಫೇಲ್ : ಮೈಸೂರು ನಗರ ಕಮಿಷನರ್ ಹಾಗೂ ಡಿಸಿಪಿಗಳ ಎತ್ತಂಗಡಿ ಸಾಧ್ಯ..?

Promotion

 

ಮೈಸೂರು, ಆ.26, 2021 : (www.justkannada.in news )ವಿದ್ಯಾರ್ಥಿನಿ ಮೇಲಿನ ಗ್ಯಾಂಗ್ ರೇಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಸೂರು ನಗರ ಪೊಲೀಸ್ ಆಯುಕ್ತ ಹಾಗೂ ಹಾಗೂ ಡಿಸಿಪಿಗಳ ವರ್ಗಾವಣೆ ಸುಳಿವು ನೀಡಿದ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್.

ಮೈಸೂರಿನಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಹೇಳಿದಿಷ್ಟು..

ನಗರ ಪೊಲೀಸ್ ಇಲಾಖೆಗೆ ಮೇಜರ್ ಸರ್ಜರಿ ಅನಿವಾರ್ಯ . ಶೂಟ್ ಔಟ್, ಗ್ಯಾಂಗ್ ರೇಪ್ ಪ್ರಕರಣದಲ್ಲಿ ಪೊಲೀಸ್ ನಿರ್ಲಕ್ಷ್ಯ ಎದ್ದುಕಂಡಿದೆ . ಪೊಲೀಸ್ ವೈಫಲ್ಯದ ಬಗ್ಗೆ ಜನತೆ ಅಸಮಧಾನ ವ್ಯಕ್ತಪಡಿಸುತ್ತಿದ್ದಾರೆ. ಸಾರ್ವಜನಿಕರ ಭಾವನೆಗೆ ಸರ್ಕಾರ ಸ್ಪಂದಿಸಬೇಕಾಗುತ್ತದೆ. ಗ್ಯಾಂಗ್ ರೇಪ್ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಪ್ರಕರಣದ ಪರಶೀಲನೆಗೆ ಎಡಿಜಿಪಿ ಅವರನ್ನೇ ಸರ್ಕಾರ ನಿಯೋಜಿಸಿದೆ. ಜತೆಗೆ ಗೃಹ ಸಚಿವರೇ ಮೈಸೂರಿಗೆ ಆಗಮಿಸಿ ಪರಿಶೀಲನೆ ನಡೆಸಲಿದ್ದಾರೆ. ಎಡಿಜಿಪಿ ವರದಿ ನಂತರ ನಿರ್ಲಕ್ಷ್ಯದ ಬಗ್ಗೆ ಸರ್ಕಾರ ಕ್ರಮ ಕೈಗೊಳ್ಳುತ್ತದೆ. ಮೈಸೂರಿನಲ್ಲಿ ಕಾನೂನು ಸುವ್ಯವಸ್ಥೆ ಹದಗೆಡಲು ಬಿಡುವುದಿಲ್ಲ.

ಎರಡು ಕೇಸ್ ದಾಖಲು :

ಮೈಸೂರಿನಲ್ಲಿ ಕಾಲೇಜು ವಿದ್ಯಾರ್ಥಿನಿ ಮೇಲೆ ಗ್ಯಾಂಗ್ ರೇಪ್ ಕೇಸ್. ಆರೋಪಿಗಳ ಮೇಲೆ ಎರಡು ಸೆಕ್ಷನ್ ‌ಗಳ ಅಡಿಯಲ್ಲಿ ಎಫ್‌ಐಆರ್ ದಾಖಲು. ಆರೋಪಿಗಳ ವಿರುದ್ಧ ಸೆಕ್ಷುವಲ್ ಅಸಾಲ್ಟ್ ಕೇಸ್ ದಾಖಲು. ಸೆಕ್ಷನ್ 376D ಹಾಗೂ 397 ಹಾಕಿ ಎಫ್‌ಐಆರ್.
376D ಸಾಮೂಹಿಕ ಅತ್ಯಾಚಾರ. 397 ಡಕಾಯಿತಿ ನಡೆಸಿದ ಕೇಸ್. ಆಗಸ್ಟ್ 24ರ ಸಂಜೆ 7.30ರ ಸುಮಾರಿಗೆ ನಡೆದಿದ್ದ ಗ್ಯಾಂಗ್ ರೇಪ್.

key words : mysore-police-gang-rape-case-police-commissioner-minister