ರಾಜ್ಯ ಹಾಗೂ ಮೈಸೂರಿನಲ್ಲಿ ಕಾನೂನು ವ್ಯವಸ್ಥೆ ಸಂಪೂರ್ಣ ಕುಸಿದು ಬಿದ್ದಿದೆ- ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ವಾಗ್ದಾಳಿ. 

ಮೈಸೂರು,ಆಗಸ್ಟ್,26,2021(www.justkannada.in):  ನಗರದಲ್ಲಿ ನಡೆದ ಗ್ಯಾಂಗ್ ರೇಪ್ ನಿಂದಾಗಿ ಮೈಸೂರೇ ತಲೆ ತಗ್ಗಿಸುವಂತಾಗಿದೆ. ರಾಜ್ಯ ಸರ್ಕಾರದ ವೈಫಲ್ಯದಿಂದ ಇಂತಹ ಕೃತ್ಯಗಳಾಗುತ್ತಿದೆ. ರಾಜ್ಯ ಹಾಗೂ ಮೈಸೂರಿನಲ್ಲಿ ಕಾನೂನು ವ್ಯವಸ್ಥೆ ಸಂಪೂರ್ಣ ಕುಸಿದು ಬಿದ್ದಿದೆ ಎಂದು ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ಆರೋಪ ಮಾಡಿದರು.

ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್,  ಮೈಸೂರಿನಲ್ಲಿ ಹಾಗೂ ರಾಜ್ಯದಲ್ಲಿ ಸಂಪೂರ್ಣವಾಗಿ ಕಾನೂನು ವ್ಯವಸ್ಥೆ  ಕುಸಿದಿದ್ದು, ದರೋಡೆ,ಕೊಲೆ, ಸುಲಿಗೆ ಹೆಚ್ಚಾಗುತ್ತಿದೆ. ನಗರದಲ್ಲಿ ನಡೆದ ಗ್ಯಾಂಗ್ ರೇಪ್ ಮೈಸೂರೆ ತಲೆ ತಗ್ಗಿಸುವ ಕೆಲಸ ಮಾಡುವಂತಾಗಿದೆ. ದೆಹಲಿಯ ನಿರ್ಭಯ ಕೇಸ್ ನಲ್ಲಿ ರೋಡ್ ನಲ್ಲಿ ಪಲ್ಟಿ ಹೊಡೆದರು.ಈಗ ಈ ವಿಷಯ ಅವರ ಕಣ್ಣಿಗೆ ಕಾಣಿಸುತ್ತಿಲ್ಲ. ಸಚಿವೆ ಶೋಭಾ, ಮಾಳವಿಕಾ ಅವರು ಬೊಬ್ಬೆ ಹೊಡೆಯುತ್ತಿದ್ದರು. ಮಹಿಳಾ ಆಯೋಗದ ಅಧ್ಯಕ್ಷರು ಯಾರು ಅಂತಾನೆ ಗೊತ್ತಾಗುತ್ತಿಲ್ಲ. ಗೃಹ ಸಚಿವರು, ಮುಖ್ಯಮಂತ್ರಿಗಳು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ನಡುವೆ ಹೊಂದಾಣಿಕೆಯೇ ಇಲ್ಲ. ಯಾವ ಆಧಾರದ ಮೇಲೆ ತನಿಖೆ ಆರಂಭಿಸುತ್ತಿದ್ದೀರಿ ಎಂದು ಒಬ್ಬೊಬ್ಬರು ಒಂದೊಂದು ರೀತಿ ಹೇಳುತ್ತಿದ್ದಾರೆ. ಹಣ ಪಡೆದು ವರ್ಗಾವಣೆ ಮಾಡುತ್ತಿರುವುದೇ ಇದಕ್ಕೆಲ್ಲದಕ್ಕೆ ಕಾರಣ ಎಂದು ವಾಗ್ದಾಳಿ ನಡೆಸಿದರು.

ನೆನ್ನೆ ಸಭೆ ನಡೆಸಿದರು, ಸಭೆಯ ಮಾಹಿತಿಗಳನ್ನೇ ನೀಡಲಿಲ್ಲ. ಸಭೆ ನಡೆಯಬೇಕಾದರೆ ಸಂಸದ ಪ್ರತಾಪ್ ಸಿಂಹ ಮೊಬೈಲ್ ನೋಡುತ್ತಾ ಕುಳಿತಿದ್ದರು. ಇದನ್ನೆಲ್ಲ ನೋಡಿದ್ರೆ ಸ್ವಲ್ಪವೂ ಕಾಳಜಿ ಇಲ್ಲ ಎಂದು ತೋರುತ್ತಿದೆ. ನೂತನವಾಗಿ ಮೇಯರ್ ಆದರು ಈ ಬಗ್ಗೆ ಇಂದು ಪ್ರತಿಕ್ರಿಯೆ ನೀಡಿದ್ದಾರಾ..? ಬಿಜೆಪಿಗೆ ಅಧಿಕಾರವೇ ಮುಖ್ಯ. ಅದಕ್ಕಾಗಿ ಏನನ್ನು ಮಾಡಲು ಸಿದ್ಧರಿದ್ದಾರೆ. ಈ ಕೃತ್ಯವನ್ನು ಕಾಂಗ್ರೆಸ್ ಖಂಡಿಸುತ್ತಿದೆ ಎಂದು ಎಂ.ಲಕ್ಷ್ಮಣ್ ಹೇಳಿದರು.KPCC spokesperson -M. Laxman - fierce –opposition- Helipad-mysore

ಬಿಜೆಪಿಗಿಂತ ಜೆಡಿಎಸ್ ಡೇಂಜರ್.

ಪಾಲಿಕೆಯಲ್ಲಿ ಜೆಡಿಎಸ್ ಕಾಂಗ್ರೆಸ್ ಮೈತ್ರಿ ಮುರಿದಿಬಿದ್ದ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಎಂ. ಲಕ್ಷ್ಮಣ್, ಜೆಡಿಎಸ್ ಬಿ ಟೀಮ್ ಎಂದು ಸಾಬೀತುಪಡಿಸಿದೆ. ಜೆಡಿಎಸ್ ನೊಂದಿಗೆ ಇನ್ನುಮುಂದೆ ಯಾವುದೇ ಒಪ್ಪಂದ ಮಾಡಿಕೊಳ್ಳೋದಿಲ್ಲ.ಬಿಜೆಪಿಗಿಂತ ಜೆಡಿಎಸ್ ಡೇಂಜರ್ ಎಂದು ಕಿಡಿಕಾರಿದರು.

ಜೆಡಿಎಸ್ ನ ಡಬಲ್ ಸ್ಟ್ಯಾಂಡರ್ಡ್ ನೆಸ್ ನ್ನು ರಾಜ್ಯದ ಜನ ಈಗಲಾದರೂ ಅರ್ಥ ಮಾಡಿಕೊಳ್ಳಬೇಕು. ಜಾತ್ಯತೀತ ಜನತಾದಳ ಅನ್ನೋ ಪದವನ್ನ ಬಳಸಬೇಡಿ. ಜೆಡಿಎಸ್ ಒಂದು ಬಿಜೆಪಿಯ ಬಿ ಟೀಮ್ ಎನ್ನೋದನ್ನ ನಿನ್ನೆ ಸಾಬೀತುಪಡಿಸಿದೆ. ಜೆಡಿಎಸ್ ಕೂಡ ಕಮ್ಯುನಲ್ ಪಾರ್ಟಿ ಎಂದು ಸಾಭೀತಾಗಿದೆ. ಮೈತ್ರಿ ಧರ್ಮವನ್ನ ಮುರಿದಿದ್ದೀರಿ. 5 ವರ್ಷದಲ್ಲಿ ನಮಗೆ 2 ಬಾರಿ ನಿಮಗೆ 3 ಬಾರಿ ಎಂದು ಅಗ್ರಿಮೆಂಟ್ ಆಗಿತ್ತು ಅಲ್ವಾ, ತಿಳಿಸಿ. ಕೆಟಿ ಶ್ರೀಕಂಠೇಗೌಡರು ಮಂಡ್ಯದಲ್ಲೂ ವೋಟ್ ಮಾಡ್ತಾರೆ. ಮೈಸೂರಿನಲ್ಲೂ ವೋಟ್ ಮಾಡ್ತಾರೆ ಎಂದು ಆರೋಪಿಸಿದರು.

ಇಂದು ರಾಜ್ಯದಲ್ಲಿ ಬಿಜೆಪಿ ಆಡಳಿತ ನಡೆಸುತ್ತಿದೆ ಎಂದರೆ ಅದಕ್ಕೆ ಜೆಡಿಎಸ್ ಕಾರಣ. ಮುಸ್ಲಿಂ ಸದಸ್ಯರು ಸಹ ಇದ್ದಾರೆ, ಅವರಿಗೇನು ಉತ್ತರ ಕೊಡುತ್ತೀರಿ. ಇನ್ನು ಮುಂದೆ ಜೆಡಿಎಸ್ ನೊಂದಿಗೆ ಯಾವುದೇ ಮೈತ್ರಿ ನಡೆಯೋದಿಲ್ಲ. ನಿಮ್ಮ ಪಕ್ಷದ ನಾಯಕರು ಕಾಂಗ್ರೆಸ್ ಗೆ ಬರುತ್ತಿದ್ದಾರೆ ಎಂದರೆ ನಮ್ಮನ್ನ ಏಕೆ ದೂರುತ್ತೀರಿ..? ಎಂದು ಎಂ.ಲಕ್ಷ್ಮಣ್ ಹರಿಹಾಯ್ದರು.

Key words:  legal system – state -Mysore – collapsed-KPCC spokesperson -M Laxman