ಮೈಸೂರು ಪೊಲೀಸರಿಂದ ಲೌಡ್ ಸ್ಪೀಕರ್, ಕರಪತ್ರ ಅಭಿಯಾನದ ಮೂಲಕ ಜನತೆಯಲ್ಲಿ ಸರಗಳ್ಳರ ಬಗ್ಗೆ ಜಾಗೃತಿ.

ಮೈಸೂರು, ಮೇ 06, 2019 : (www.justkannada.in news) ನಗರ ಪೋಲಿಸ್ ಹಾಗೂ ಜನಸ್ನೇಹಿ ಪೋಲಿಸ್ ತಂಡದಿಂದ ಸರಗಳ್ಳತನ ಬಗ್ಗೆ ಸಾರ್ವಜನಿಕರಿಗೆ ಕರಪತ್ರ ಹಂಚುವ ಮೂಲಕ ಹಾಗೂ ಧ್ವನಿ ವರ್ಧಕಗಳ ಮೂಲಕ ಪ್ರಚಾರ ನಡೆಸಿ ಅರಿವು ಮೂಡಿಸಲಾಯಿತು.

ಇಂದು ಮುಂಜಾನೆ ನಗರದ ವಿವಿಧೆಡೆ ಪೊಲೀಸರು ಕರಪತ್ರ ಹಾಗೂ ಹೈವೇ ಪ್ಯಾಟ್ರೋಲಿಂಗ್ ವಾಹನದ ಮೂಲಕ ಧ್ವನಿ ವರ್ಧಕದ ಮೂಲಕ ಅರಿವು ಮೂಡಿಸಲು ಮುಂದಾದರು. ಅಪರಿಚಿತ ವ್ಯಕ್ತಿಗಳು ಮನೆ ಬಳಿ ಬಂದು ವಿಳಾಸ ಕೇಳುವ ನೆಪದಲ್ಲಿ, ಅಥವಾ ಕುಡಿಯಲು ನೀರು ಕೇಳುವ ನೆಪದಲ್ಲಿ ಆಗಮಿಸಿದಾಗ ಯಾವ ರೀತಿ ಮುಂಜಾಗ್ರತೆ ವಹಿಸಬೇಕು ಎಂಬ ಬಗ್ಗೆ ಮಾಹಿತಿ ನೀಡಿದರು.

ಅನುಮಾನಾಸ್ಪದ ವ್ಯಕ್ತಿಗಳ ಬಗ್ಗೆ ತಕ್ಷಣ ‌ಹತ್ತಿರದ ಪೋಲಿಸರಿಗೆ ಮಾಹಿತಿ ನೀಡುವುದು. ಜತೆಗೆ ಅಪರಾಧ ತಡೆಯಲು ಪೋಲಿಸ್ ಸಿಬ್ಬಂದಿ ಯವರಿಗೆ ಸಹಕಾರ ನೀಡುವ ಬಗ್ಗೆ ಸಾರ್ವಜನಿಕರಿಗೆ ಕರಪತ್ರ ಹಂಚುವ ಮೂಲಕ ಅರಿವು ಮೂಡಿಸಲಾಯಿತು.

mysore police creates awerness against chain snachers in city