ಮಗ ಆದ್ಯವೀರ್ ಜೊತೆ ಅರಮನೆ ಆವರಣದಲ್ಲಿ ರೌಂಡ್ಸ್ ಹಾಕಿದ ಯದುವೀರ್…

Promotion

ಮೈಸೂರು,ಅಕ್ಟೋಬರ್,28,2020(www.justkannada.in): ಕೊರೋನಾ ಸಂಕಷ್ಟದ ನಡುವೆ ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವ ಯಶಸ್ವಿಯಾಗಿ  ನಡೆದಿದ್ದು, ಶರನ್ನವರಾತ್ರಿಯಲ್ಲಿ ದಸರಾ ಧಾರ್ಮಿಕ ಕಾರ್ಯಗಳಲ್ಲಿ ಬ್ಯುಸಿಯಾಗಿದ್ದ ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್  ಇದೀಗ ಪುತ್ರ ಆದ್ಯವೀರ್ ಜತೆ ಕಾರಿನಲ್ಲಿ ಅರಮನೆ ಆವರಣದಲ್ಲಿ ರೌಂಡ್ಸ್ ಹಾಕಿದ ದೃಶ್ಯ ಕಂಡು ಬಂದಿತು.mysore-palace-yadaveer-rounds-car-gajapade-abhimanyu

ರಾಜವಂಶಸ್ಥ ಯದುವೀರ್ ಅವರು ಮಗ ಆದ್ಯವೀರ್ ಜೊತೆ ಅರಮನೆ ಆವರಣದಲ್ಲಿ ಕಾರಿನಲ್ಲಿ ರೌಂಡ್ಸ್ ಹಾಕಿದರು.  ಮೊದಲು ಅರಮನೆಯ ಸೋಮೇಶ್ವರ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ಯದುವೀರ್ ನಂತರ ಗಜಪಡೆ ಬೀಳ್ಕೊಡುಗೆ ಕಾರ್ಯಕ್ರಮಕ್ಕೆ ಆಗಮಿಸಿದರು.mysore-palace-yadaveer-rounds-car-gajapade-abhimanyu

ನಂತರ ಅಭಿಮನ್ಯು ನೇತೃತ್ವದ ದಸರಾ ಆನೆಗಳನ್ನು ಕಾಡಿಗೆ ಕಳುಹಿಸಲು ಪೂಜೆ ಸಲ್ಲಿಸಿ ಬೀಳ್ಕೊಡಲಾಯಿತು. ಈ ವೇಳೆ ಗಜಪಡೆಯ ನಾಯಕ ಅಭಿಮನ್ಯು ಜೊತೆ ಯದುವೀರ್ ಅವರು ಮಗನೊಂದಿಗೆ ಪೋಟೊಗೆ ಪೋಸ್ ನೀಡಿದರು. ಬಳಿಕ  ಅಭಿಮನ್ಯು ಆನೆಯನ್ನ ಮುಟ್ಟಿ ಆದ್ಯವೀರ್ ಸಂತಸ ಪಟ್ಟನು. ಇದಾದ  ಬಳಿಕ ಯದುವೀರ್  ಮಗನೊಂದಿಗೆ ಅರಮನೆ ಸುತ್ತಾ ಒಂದು ರೌಂಡ್ಸ್ ಹಾಕಿ ಹೊರಟರು.

Key words: mysore-palace- Yadaveer-rounds-car-gajapade-abhimanyu